Advertisement

KEA ಅಕ್ರಮ;ಕಲಬುರಗಿಯಲ್ಲಿ ಸಿಐಡಿ ಉನ್ನತ ಮಟ್ಟದ ತಂಡದಿಂದ ತನಿಖೆ ಶುರು

06:46 PM Nov 13, 2023 | Team Udayavani |

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ವಿವಿಧ ಹುದ್ದೆಗಳ ನೇಮಕಾತಿಯ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಪ್ರಕರಣ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದ್ದರಿಂದ ಉನ್ನತ ಮಟ್ಟದ ತಂಡವು ಸೋಮವಾರ ನಗರಕ್ಕಾಗಮಿಸಿ ತನಿಖೆ ಶುರು ಮಾಡಿದೆ.

Advertisement

ಸಿಐಡಿ ಎಸ್ ಪಿ ರಾಘವೇಂದ್ರ ಹೆಗಡೆ, ಡಿಎಸ್ಪಿಗಳಾದ ಶಂಕರಗೌಡ ಪಾಟೀಲ್, ತನ್ವೀರ್ ಅವರನ್ನೊಳಗೊಂಡ ತಂಡ ಕಲಬುರಗಿಗೆ ಆಗಮಿಸಿ ತನಿಖಾ ಕಾರ್ಯ ಕೈಗೆತ್ತಿಕೊಂಡಿದೆ.

ಕೆಇಎ ನಡೆಸಿದ ವಿವಿಧ ಹುದ್ದೆಗಳ ನೇಮಕಾತಿಯ ಪರೀಕ್ಷೆ ಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಿರುವ ಸಂಬಂಧ ಕಲಬುರಗಿ, ಅಫಜಲಪುರ, ಯಾದಗಿರಿಯಲ್ಲಿ ಅಕ್ರಮದ ರೂವಾರಿ, ಪಿಎಸ್ಐ ಹಗರಣದ ಕಿಂಗ್ ಪಿನ್ ಆರ್.‌ಡಿ. ಪಾಟೀಲ್ ಸೇರಿ ಹಲವರ ವಿರುದ್ಧ ದೂರು ದಾಖಲಾಗಿದೆ. ಈಗಾಲೇ ಆರ್. ಡಿ.‌ಪಾಟೀಲ್ ಸೇರಿ 20 ಕ್ಕೂ ಅಧಿಕ ಅಭ್ಯರ್ಥಿ ಗಳು ಹಾಗೂ ಸಹಾಯಕರ ಬಂಧನವಾಗಿದೆ.

ಪರೀಕ್ಷೆ ಅಕ್ರಮದ ನಂತರ ಆರ್.‌ಡಿ.‌ಪಾಟೀಲ್ ಪರಾರಿಯಾಗಿದ್ದ, ತದನಂತರ ನಗರದಲ್ಲಿದ್ದರೂ ಪೊಲೀಸ್ ರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ನಂತರ ಪೊಲೀಸ ರು ಕಾರ್ಯಾಚರಣೆ ನಡೆಸಿ ನೆರೆಯ ಮಹಾರಾಷ್ಟ್ರದ ಲ್ಲಿ ಬಂಧಿಸಿದ್ದರು.‌ ಒಟ್ಟಾರೆ ಈ ಪರೀಕ್ಷೆ ಅಕ್ರಮ ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದು, ಬಿಜೆಪಿ ತೀವ್ರ ವಾಗ್ದಾಳಿ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next