Advertisement

ಕೆಡಿಪಿ ಸಭೆ: ಮಾರ್ಚ್‌ನೊಳಗೆ ಗುರಿ ಸಾಧಿಸಲು ಅಧಿಕಾರಿಗಳಿಗೆ ಸೂಚನೆ

12:30 PM Mar 16, 2017 | Team Udayavani |

ಉಡುಪಿ: ಮುಂದಿನ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 6.52 ಲಕ್ಷ ಮಾನವ ದಿನಗಳ ಗುರಿ ನಿಗದಿ ಪಡಿಸಲಾಗಿದ್ದು, ಈಗಲೇ ಗುರಿ ಸಾಧನೆಗೆ ಸೂಕ್ತ ಕ್ರಿಯಾ ಯೋಜನೆ ರೂಪಿಸಿ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ತಿಳಿಸಿದರು.

Advertisement

ಬುಧವಾರ ಜಿ.ಪಂ. ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿಗದಿತ ಗುರಿ ಸಾಧಿಸಿದೆ. ಕಳೆದ ಸಾಲಿನಲ್ಲಿ 13 ಕೋಟಿ ಸಾಧನೆಯಾಗಿದ್ದು, ಅದಕ್ಕೂ ಮುಂಚಿನ ಸಾಲಿನಲ್ಲಿ 5.4 ಕೋ. ರೂ. ಸಾಧನೆ ಮಾಡಲಾಗಿದೆ ಎಂದರು.

ಕಳೆದ ವರ್ಷ ಟಾಸ್ಕ್ಫೋರ್ಸ್‌ನಲ್ಲಿ ತೆರೆದ ಬಾವಿ ಕಾಮಗಾರಿ ತೆಗೆದುಕೊಳ್ಳಲು ಎಲ್ಲ ಪಿಡಿಒ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರಿಗೆ ಸೂಚಿಸಲಾಗಿದೆ ಹಾಗೂ ಭೂವಿಜ್ಞಾನಿಗಳು 3 ತಾಲೂಕುಗಳಲ್ಲಿ ಸರ್ವೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಸ ಬಾವಿ ತೋಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಸಿಪಿಒ ಹೇಳಿದರು.

ಗಂಗಾ ಕಲ್ಯಾಣ
ಅಕ್ರಮ ಮರಳುಗಾರಿಕೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಕುಕ್ಕುಂದೂರು ಗ್ರಾಮದ ಕಂಬಳಿಬೆಟ್ಟಿನಲ್ಲಿರುವ ಕಾಮಗಾರಿಗೆ ವಿದ್ಯುತ್‌ ಲೈನ್‌ ನೀಡಲು ತುರ್ತು ಕ್ರಮ ಕೈಗೊಳ್ಳಿ ಎಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸೂಚನೆ ನೀಡಲಾಯಿತು. ಗಂಗಾ ಕಲ್ಯಾಣ ಯೋಜನೆಯಲ್ಲಿ ವಿದ್ಯುತ್‌ ಸಂಪರ್ಕ ಕೋರಿ ಬಂದ ಅರ್ಜಿಗಳನ್ನು ಮಾರ್ಚ್‌ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಮೆಸ್ಕಾಂ ಅಧಿಕಾರಿ ಮಾಹಿತಿ ನೀಡಿದರು.

ವಸತಿ ಯೋಜನೆ ಪ್ರಗತಿಯನ್ನು ಯೋಜನಾ ನಿರ್ದೇಶಕರು ಸಭೆಗೆ ನೀಡಿದರು. ಶಾಲೆಗಳಲ್ಲಿ ಸರಬರಾಜಾಗುವ ಶುಚಿ ಪ್ಯಾಡ್‌ಗಳ ಕುರಿತು ಕಳೆದ ಮೂರು ಸಭೆಗಳಲ್ಲಿ ಗಮನ ಸೆಳೆದ ಜಿ.ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ ಸಮಸ್ಯೆಗೆ ಪರಿ
ಹಾರ ಈ ಸಭೆಯಲ್ಲೇ ಸಿಗಬೇಕು ಎಂದರು.

Advertisement

ಆರೋಗ್ಯ ಇಲಾಖೆ ಜಿ.ಪಂ. ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸಮರ್ಪಕ ಅನುಷ್ಠಾನಕ್ಕೆ ತರಬೇಕೆಂದು, ಗಮನ ಸೆಳೆದ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕೆಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿಯ ಉದಯ ಎಸ್‌. ಕೋಟ್ಯಾನ್‌ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ರûಾ ಸಮಿತಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಸ್ಪತ್ರೆಗಳ ಅಭಿವೃದ್ಧಿ ಮಾಡಿ ಎಂದು ಉದಯ ಕೋಟ್ಯಾನ್‌ ಹೇಳಿದರು.

ಮೀನುಗಾರಿಕೆ: ನೀರಿಗೆ ತೊಂದರೆ
ಚಾಂತಾರು ಕೆರೆಯಲ್ಲಿ ಮೀನುಗಾರಿಕೆ ನಡೆಸಿ ಕುಡಿಯುವ ನೀರಿಗೆ ತೊಂದರೆ ಉಂಟು ಮಾಡಿದ ಬಗ್ಗೆ ಶೀಲಾ ಕೆ. ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಟೆಂಡರ್‌ ಪಡೆದವರಿಗೆ ಡ್ರ್ಯಾಗ್‌ ನೆಟ್‌ ಬಳಸದೆ ಮೀನುಗಾರಿಕೆ ನಡೆಸಲು ಸೂಚಿಸಿರುವುದಾಗಿ ಹೇಳಿದರು.

ಇಲಾಖೆ ಪ್ರಗತಿ ಪರಿಶೀಲನೆ ಮಾದರಿಯಲ್ಲಿ ಪರಿಶೀಲನೆ ನಡೆಸಿ ಯೋಜನೆ ಅನುಷ್ಠಾನಕ್ಕೆ ತನ್ನಿ. ವಿಫ‌ಲರಾದವರಿಗೆ ನೋಟಿಸ್‌ ನೀಡಿ ಎಂದು ಶ್ರೀನಿವಾಸ ರಾವ್‌ ಡಿಎಚ್‌ಒಗೆ ಸೂಚಿಸಿದರು.

ಬರ ಪೀಡಿತ ಪ್ರದೇಶ ಎಂದು ಜಿಲ್ಲೆ ಘೋಷಣೆಯಾಗಿದ್ದು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸಿಪಿಒ ಹೇಳಿದರು. ವಸತಿ ಯೋಜನೆ ಅಭಿವೃದ್ಧಿ ಮಾಹಿತಿಯನ್ನು ಯೋಜನಾ ನಿರ್ದೇಶಕರು ನೀಡಿದರು.

ಶಿಕ್ಷಣ ಇಲಾಖೆ-ಹೈಸ್ಕೂಲ್‌ ಮುಖ್ಯಸ್ಥರನ್ನು ಪಿಯು ಪರೀಕ್ಷೆ ಕೆಲಸಕ್ಕೆ ನಿಯೋಜಿಸಿದ ಬಗ್ಗೆ ಉದಯ ಕೋಟ್ಯಾನ್‌ ಅಸಮಾಧಾನ ವ್ಯಕ್ತಪಡಿಸಿದರು.

ಪಶುಪಾಲನೆ ಇಲಾಖೆ

ಜಿಲ್ಲೆ ಬರಪೀಡಿತ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪಶುಪಾಲನೆ ಇಲಾಖೆಗೆ ಸರಕಾರದಿಂದ 7,231 ಕಿರುಪೊಟ್ಟಣ ಮೇವು ಬೀಜ ವಿತರಣೆಗೆ ಲಭ್ಯವಿದ್ದು, ಹಾಲು ಸೊಸೈಟಿಗಳಿಗೂ ಪತ್ರ ಬರೆಯಲಾಗಿದೆ ಎಂದು ಪಶುಪಾಲನ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು. ಸ್ಥಳೀಯ ಪಶುಪಾಲನಾ ಆಸ್ಪತ್ರೆಗಳಲ್ಲೂ ಮೇವು ಲಭ್ಯವಿರುವುದು. ಕಾಲುಬಾಯಿ 12ನೇ ಸುತ್ತು ಎ. 7ರಿಂದ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ದೂರು ಅವಕಾಶ
ಮೆಸ್ಕಾಂನವರು ನೀರಿಗೆ ಸಂಬಂಧಿಸಿದ ಕನೆಕ್ಟಿವಿಟಿಗೆ ನೆರವಾಗಬೇಕು. ದೀನ ದಯಾಳ್‌ ಯೋಜನೆಯಡಿ ನೀಡುವ ನೆರವಿನ ಬಗ್ಗೆ ಮಾಹಿತಿ ಪಡೆದ ಉದಯ್‌ ಕೋಟ್ಯಾನ್‌ ಉಪಗುತ್ತಿಗೆ ಕಾಮಗಾರಿಯಲ್ಲಿ ದೂರು ಬರುತ್ತಿವೆ ಎಂದರು. ಈ ಬಗ್ಗೆ ದೂರುಗಳಿದ್ದರೆ ಸಲ್ಲಿಸ ಬಹುದು ಎಂದು ಅಧಿಕಾರಿಗಳು ಹೇಳಿದರು.

ಬೇಸಗೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿ, ಅಗತ್ಯ ಪ್ರದೇಶಗಳಿಗೆ ನೀರು ತಲುಪಿಸಿ ಎಂದು ತಾ.ಪಂ. ಇಒಗಳಿಗೆ ಸೂಚಿಸಿದರು. ಎಲ್ಲ ಇಲಾಖೆಗಳು ಅನುದಾನ ಹಾಗೂ ಪ್ರಗತಿಯನ್ನು ಜಿ.ಪಂ. ಅಧ್ಯಕ್ಷರಿಗೆ ಸಲ್ಲಿಸಲು ಸೂಚನೆ ನೀಡಿದರು.

ಬೇಸಗೆ ರಜೆಯಲ್ಲೂ ಬಿಸಿಯೂಟ
ಬರ ಇರುವುದರಿಂದ ಅಪರಾಹ್ನ ಬೇಸಗೆ ರಜೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆ ಮಕ್ಕಳಿಗೆ ಬಿಸಿಯೂಟ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಡಿಡಿಪಿಐ ತಿಳಿಸಿದರು.

ಸ್ಥಾಯೀ ಸಮಿತಿ ಅಧ್ಯಕ್ಷರಾದ ಕೆ. ಬಾಬು ಶೆಟ್ಟಿ, ಶಶಿಕಾಂತ ಪಡುಬಿದ್ರಿ, ಮುಖ್ಯ ಲೆಕ್ಕಾಧಿಕಾರಿ ನಾಗೇಶ್‌ ರಾಯ್ಕರ್‌ ಇದ್ದರು. ಜಿ.ಪಂ.ನ ರಾಧಾಕೃಷ್ಣ ಅಡಿಗ ಪದೋನ್ನತಿ ಹೊಂದಿ ಶಿವಮೊಗ್ಗದ ಮಲೆನಾಡು ಅಭಿವೃದ್ಧಿ ಮಂಡಳಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next