Advertisement
ಕಡಬ ವಿಶೇಷ ತಹಶೀಲ್ದಾರ್ ಜಾನ್‌ಪ್ರಕಾಶ್ ಮಾತನಾಡಿ, ಗಡಿಗ್ರಾಮಗಳನ್ನು ಪುತ್ತೂರು ತಾಲೂಕಿಗೆ ಸೇರಿಸುವಂತೆ ಬಂದ ಮನವಿಗಳನ್ನು ಜಿಲ್ಲಾಧಿಕಾರಿಗೆ ರವಾನಿಸಲಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೊಸ ತಾಲೂಕು ರಚನೆ ವೇಳೆ ಹೋಬಳಿಗಳನ್ನು ವಿಭಾಗಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಧ್ಯಪ್ರವೇಶಿಸಿದ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್, ಹೋಬಳಿ ವಿಭಾಗ ಮಾಡದಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಹೋಬಳಿ ಯನ್ನೇ ತುಂಡರಿಸಿ ಪ್ರತ್ಯೇಕ ತಾಲೂಕಿಗೆ ಸೇರಿಸು ವುದು ಭವಿಷ್ಯದ ದೃಷ್ಟಿಯಲ್ಲಿ ಸೂಕ್ತವಲ್ಲ ಎನ್ನುವುದು ಅದರ ಉದ್ದೇಶ. ಹಾಗೆಂದು ಜನರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದರ್ಥವಲ್ಲ. ಹೋಬಳಿಯ ಗ್ರಾಮಗಳನ್ನು ವಿಭಾಗಿಸುವುದು ಸರಕಾರದ ಮಟ್ಟದಲ್ಲಿ ಆಗಬೇಕು. ಜನರ ಮನವಿ, ಆಗ್ರಹವನ್ನು ಅಲ್ಲಿಗೆ ಕಳುಹಿಸಲಾಗು ವುದು. ಈ ಬಗ್ಗೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಿಯೋಗ ತೆರಳಿ ಸರಕಾರವನ್ನು ಒತ್ತಾಯಿಸಲಿದ್ದು, ಸರಕಾರವೇ ನಿರ್ಣಯಿಸಲಿದೆ ಎಂದರು.
Related Articles
Advertisement
ಮಾತೃಪೂರ್ಣ ಯೋಜನೆಯ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸಿಡಿಪಿಒ ಶಾಂತಿ ಹೆಗ್ಡೆ, ನವೆಂಬರ್ 30ಕ್ಕೆ ಈ ಬಗ್ಗೆ ರಾಜ್ಯಮಟ್ಟದ ಸಭೆ ನಡೆದಿದೆ. ದಕ್ಷಿಣ ಕನ್ನಡದಲ್ಲಿ ಕೇವಲ ಶೇ. 8ರಷ್ಟು ಪ್ರಗತಿ ಕಂಡಿದೆ. ವಿಫಲಕ್ಕೆ ಕಾರಣ ಏನು ಎಂದು ಕೇಳಿದ್ದು, ಜಿಲ್ಲೆಯ ಪ್ರದೇಶಗಳು ಹೆಚ್ಚಾಗಿ ಗುಡ್ಡಗಾಡಿನಿಂದ ಕೂಡಿವೆ. ಗರ್ಭಿಣಿ ಹಾಗೂ ಬಾಣಂತಿಯರು ದೂರದ ಅಂಗನವಾಡಿಗೆ ಮಧ್ಯಾಹ್ನ ಬಂದು ಹೋಗುವುದು ಕಷ್ಟ. ಇದರಿಂದಾಗಿ ಯೋಜನೆಗೆ ಹಿನ್ನಡೆಯಾಗಿದೆ ಎಂದು ತಿಳಿಸಲಾಗಿದೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಮಾತನಾಡಿ, ಈ ಬಗ್ಗೆ ತಾ.ಪಂ. ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಿಕೊಟ್ಟರೆ ಉತ್ತಮ ಎಂದು ಅಭಿಪ್ರಾಯಿಸಿದರು.
ಹುದ್ದೆ ಭರ್ತಿಗೆ ಆನ್‌ಲೈನ್ ಅರ್ಜಿಅಂಗನವಾಡಿ ಸಹಾಯಕ ಹಾಗೂ ಕಾರ್ಯಕರ್ತ ಹುದ್ದೆ ಖಾಲಿ ಇದೆಯೇ ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ್ ಪ್ರಶ್ನಿಸಿದರು. ಉತ್ತರಿಸಿದ ಸಿಡಿಪಿಒ, ಖಾಲಿ ಇರುವ ಹುದ್ದೆಗಳ ಮಾಹಿತಿ ಈಗಾಗಲೇ ಮೇಲಧಿ ಕಾರಿಗಳಿಗೆ ನೀಡಲಾಗಿದೆ. ಈ ಹುದ್ದೆಗಳ ಭರ್ತಿ ಸರಕಾರದ ಹಂತದಲ್ಲೇ ಆಗಬೇಕಿದೆ. ಇದಕ್ಕಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಿ, ನೇರವಾಗಿ ಸರಕಾರದ ಹಂತದಲ್ಲೇ ಹುದ್ದೆ ತುಂಬಿಸುವ ಕೆಲಸ ನಡೆಯುತ್ತದೆ. ಡಿಸಿಯವರು ಈ ಬಗ್ಗೆ ನೋಟಿಫಿಕೇಶನ್ ಹೊರಡಿಸಲಿದ್ದಾರೆ ಎಂದರು. ಇಲಾಖೆಗಳಿಂದ ಸರಿಯಾಗಿ ಪಾಲನಾ ವರದಿ ಬರುತ್ತಿಲ್ಲ ಎಂದು ತಾ.ಪಂ. ಅಧ್ಯಕ್ಷೆ ಗರಂ ಆದ ಘಟನೆಯೂ ಸಭೆಯಲ್ಲಿ ನಡೆಯಿತು. ಸರಿಯಾಗಿ ಪಾಲನಾ ವರದಿ ನೀಡದೇ ಇದ್ದರೆ, ಸಭೆಗೆ ಬರುವ ಅಗತ್ಯವೇನು? ಪಾಲನಾ ವರದಿಯೇ ಇಲ್ಲವೆಂದಾದರೆ ಸಭೆಯಲ್ಲಿ ಏನು ಮಾಹಿತಿ ನೀಡುತ್ತೀರಿ ಎಂದು ಪ್ರಶ್ನಿಸಿದರು. ಇನ್ನು ಮುಂದಕ್ಕೆ 10 ದಿನ ಮುಂಚಿತವಾಗಿಯೇ ಪಾಲನಾ ವರದಿ ಬರಬೇಕು. ಸ್ವಲ್ಪ ತಡವಾದರೂ ಕಚೇರಿಯಲ್ಲಿ ಬಂದು ನೀಡುವುದು ಬೇಡ. ನೇರವಾಗಿ ಅಧ್ಯಕ್ಷರಿಗೆ ಕೊಡಬೇಕು ಎಂದು ಸೂಚಿಸಿದರು. ಗ್ರಾ.ಪಂ.ಗೆ ಸೌಲಭ್ಯ ನೀಡಿ
ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಮಾತನಾಡಿ, ಗ್ರಾ.ಪಂ.ನಲ್ಲಿ ಆರ್ ಟಿಸಿ ನೀಡುವ ವ್ಯವಸ್ಥೆಯನ್ನು ಪರಿಚಯಿಸಲಾಗಿತ್ತು. ಆದರೆ ಗ್ರಾ.ಪಂ.ನಲ್ಲಿ ಆರ್‌ಟಿಸಿ ನೀಡುತ್ತಿಲ್ಲ. ಇದರಿಂದ ವ್ಯವಸ್ಥೆಯ ವೇಗ ಕುಂಠಿತವಾಗುತ್ತಿದೆ. ಸೂಕ್ತ ಸೌಲಭ್ಯವನ್ನು ನೀಡಿದರೆ ಜನರಿಗೆ ಸಹಾಯ ಆಗುತ್ತದೆ ಎಂದರು. ಉತ್ತರಿಸಿದ ತಹಶೀಲ್ದಾರ್ ಅನಂತಶಂಕರ, ಈಗಾಗಲೇ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದಾದ ಬಳಿಕ ಸೌಲಭ್ಯ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.