Advertisement
ಇಲ್ಲಿನ ತಾಪಂ ಸಭಾ ಭವನದಲ್ಲಿ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಸವಿತಾ ಕಾಮತ್ ಅವರಿಂದ ವಿವರ ಪಡೆದರು.
Related Articles
Advertisement
ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರ ಮಕ್ಕಳ ಮದುವೆ, ಸ್ಕಾಲರ್‌ಶಿಪ್ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಿ ವರ್ಷಗಟ್ಟಲೆಯಾದರೂ ಅವರಿಗೆ ದೊರೆತಿಲ್ಲ. ತಕ್ಷಣ ಅರ್ಜಿಗಳನ್ನು ವಿಲೇವಾರಿ ಮಾಡಿ ಎಂದು ಕಾರ್ಮಿಕ ನಿರೀಕ್ಷಕರಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕಅಭಿಯಂತರ ಮಹೇಶ ನಾಯ್ಕ ಅವರನ್ನುಉದ್ದೇಶಿಸಿ ಮಾತನಾಡಿದ ಶಾಸಕರು, ಮುಡೇìಶ್ವರಮುಖ್ಯ ರಸ್ತೆಯ ಅವ್ಯವಸ್ಥೆಗೆ ಕಾರಣ ಏನು? ಗುತ್ತಿಗೆದಾರರಿಗೆ ಇನ್ನೆಷ್ಟು ಕಾಲಾವಕಾಶ ಬೇಕು, ಅಗೆದು ಹಾಕಿ ಎಷ್ಟು ಸಮಯವಾಗಿದೆ, ಇದೊಂದುಕಾಮಗಾರಿಯಿಂದ ಮುಜುಗರವಾಗುತ್ತಿದೆ ಎಂದು ಖಾರವಾಗಿಯೇ ಹೇಳಿದರು. ಮುಂದಿನ ಮೇ 31ರಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಭರವಸೆ ನೀಡಿದ್ದ ಅವರಿಗೆ ಪೂರ್ಣಗೊಳ್ಳದಿದ್ದಲ್ಲಿನಿಮ್ಮನ್ನೇ ಹೊಣೆಗಾರನ್ನಾಗಿ ಮಾಡುವುದಾರಿ ಎಚ್ಚರಿಕೆ ನೀಡಿದರು.
ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳು ಮಳೆ ಬರುವ ಪೂರ್ವದಲ್ಲಿ ಮುಗಿಸುವಂತಾಗಬೇಕು. ಕುಡಿಯುವ ನೀರಿಗೆಯಾವುದೇ ಕಾರಣಕ್ಕೂ ತೊಂದರೆಯಾಗಬಾರದು.ಕಾಮಗಾರಿ ಮುಗಿಯುವ ಹಂತದಲ್ಲಿದ್ದರೆ ಶೀಘ್ರ ಮುಗಿಸಿ ನೀರು ಕೊಡುವ ಕೆಲಸ ಮಾಡಿಎಂದು ಪಂಚಾಯತ್‌ರಾಜ್ ಇಂಜಿನಿಯರ್ ಗೆ ಸೂಚಿಸಿದರು.
ಕಂದಾಯ ಇಲಾಖೆಯಲ್ಲಿಕೆಲಸ ವಿಳಂಬ ಆಗುತ್ತಿದೆ ಎನ್ನುವ ದೂರಿದೆ. ಜನರಕೆಲಸ ತ್ವರಿತಗತಿಯಲ್ಲಿ ಮಾಡಿಕೊಡಲು ಸಿಬ್ಬಂದಿಗೆ ಸೂಚಿಸಿದರು.
ಬಿಇಒ ದೇವಿದಾಸ ಮೊಗೇರ, ಮೀನುಗಾರಿಕಾ ಇಲಾಖೆಯ ರವಿ, ತೋಟಗಾರಿಕಾ ಇಲಾಖೆಯ ಸಂಧ್ಯಾ ಭಟ್ಟ, ಹೆಸ್ಕಾಂ ಇಲಾಖೆಯ ಮಂಜುನಾಥ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಪ್ರಗತಿ ವರದಿ ಮಂಡಿಸಿದರು.ತಹಶೀಲ್ದಾರ್ ಎಸ್. ರವಿಚಂದ್ರ, ತಾಪಂ ಇಒ ಪ್ರಭಾಕರ ಚಿಕ್ಕನಮನೆ ಇದ್ದರು