Advertisement
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ತ್ರೈಮಾಸಿಕ ಕೆಡಿಪಿಸಭೆಯಲ್ಲಿ ಪಾಲೊಂಡು ಮಾತನಾಡಿದ ಅವರು, ತಾಲೂಕಿನ ರಸ್ತೆಗಳು ಹದಗೆಟ್ಟಿದ್ದರೂ ಲೋಕೋಪಯೋಗಿ ಇಲಾಖೆ ಅವುಗಳ ದುರಸ್ತಿಗೆ ನಿರ್ಲಕ್ಷ್ಯ ತೋರುತ್ತಿದೆ. ತೆಗ್ಗು-ಗುಂಡಿ ಬಿದ್ದಿರುವ ರಸ್ತೆಗಳಿಗೆ ಅಧಿಕಾರಿಗಳು ಕೇವಲ ಕೆಂಪು ಮಣ್ಣು ಹಾಕಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿಕೂಡಲೇ ರಸ್ತೆಗಳಲ್ಲಿರುವ ತಗ್ಗು, ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
Related Articles
Advertisement
ಅರಣ್ಯ ಇಲಾಖೆಗೆ ಸಂಬಂಧಪಟ್ಟಂತೆ ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ,ರಸ್ತೆ ಬದಿಯಲ್ಲಿ ಉಪಯೋಗಕ್ಕೆ ಬಾರದ ಸಸಿಗಳನ್ನು ನೆಡುವ ಬದಲು ಜಂಬು ನೇರಳೆ ಸೇರಿದಂತೆ ವಿವಿಧಹಣ್ಣಿನ ಸಸಿಗಳನ್ನು ನೆಟ್ಟರೆ ರೈತರು ಸಹ ಹೆಚ್ಚಿನ ಕಾಳಜಿ ವಹಿಸಿ ಸಂರಕ್ಷಿಸಿಕೊಳ್ಳುತ್ತಾರೆ. ಅಲ್ಲದೇ, ತಾಲೂಕಿನ ಶಾಲೆಗಳಿಗೆ ಸಸಿಗಳನ್ನು ವಿತರಿಸಬೇಕು. ಅರಣ್ಯ ಇಲಾಖೆಗೆ ತಾಲೂಕಿನ ಶಾಲೆಗಳ ಪಟ್ಟಿ ನೀಡುವಂತೆ ಬಿಇಒ ಎಂ.ಎಚ್.ಪಾಟೀಲ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಜಿಪಂ ಸದಸ್ಯರಾದ ಸಿದ್ದರಾಜ ಕಲಕೋಟಿ,ವಿರೂಪಾಕ್ಷಪ್ಪ ಕಡ್ಲಿ, ಶಶಿಕಲಾ ಲಮಾಣಿ, ತಾಪಂ ಅಧ್ಯಕ್ಷೆ ಕಮಲವ್ವ ಪಾಟೀಲ, ಉಪಾಧ್ಯಕ್ಷೆ ಸುವರ್ಣ ಸುಕಳಿ, ತಹಶೀಲ್ದಾರ್ ಸ್ವಾದಿ, ತಾಪಂ ಇಒ ಡಿ.ಬಸವರಾಜ ಸೇರಿದಂತೆ ಇತರರು ಭಾಗವಹಿಸಿದ್ದರು.
ಮೀನುಗಾರಿಕೆ ಕೆರೆಗಳ ಟೆಂಡರ್‌ನಲ್ಲಿ ಅಕ್ರಮ ಹಗರಣ ;
ಮೀನುಗಾರಿಕೆ ಕೆರೆಗಳ ಟೆಂಡರ್‌ನಲ್ಲಿ ದೊಡ್ಡ ಹಗರಣವೇ ಇದೆ. ಈಗಲೂ ಹಳೆಯ ದರಕ್ಕೆ ಟೆಂಡರ್ ನೀಡುತ್ತಿರುವುದರಿಂದಇಲಾಖೆಗೆ ಸಾಕಷ್ಟು ನಷ್ಟವಾಗುತ್ತಿದೆ. ಪ್ರಸ್ತುತ ದರಕ್ಕೆ ಟೆಂಡರ್ ನೀಡಿದರೆ ಇಲಾಖೆ ಅಧಿಕಾರಿಗಳ ಸಂಬಳ ತೆಗೆದು 10-12 ಲಕ್ಷ ರೂ. ಉಳಿಸಬಹುದಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಚಿಂತಿಸಬೇಕು.ಕೆರೆ ಟೆಂಡರ್ ಹಗರಣದ ಕುರಿತು ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು