ಯಲ್ಲಾಪುರ: ಯಾವುದೇ ಇಲಾಖೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆಯಾದಲ್ಲಿ ಅವರ ಸ್ಥಾನಕ್ಕೆ ಬೇರೆ ಅಧಿಕಾರಿಗಳು ನಿಯೋಜನೆಗೊಳ್ಳದ ಹೊರತು ಇದ್ದವರನ್ನು ಆ ಸ್ಥಾನದಿಂದ ಬಿಡುಗಡೆ ಮಾಡಬಾರದೆಂದುಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಆದೇಶಿಸಿದರು.
ಅವರು ಸೋಮವಾರ ಪಟ್ಟಣದ ತಾಪಂ ಸಭಾಭವನದಲ್ಲಿ ತ್ತೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಎಸ್‌ಆರ್‌ಟಿಸಿಯವರು ಎಲ್ಲ ಬಸ್‌ಗಳನ್ನು ಈಹಿಂದಿನಂತೆ ಓಡಾಟ ಮುಂದುವರಿಸಬೇಕುಎಂದು ಸೂಚಿಸಿದರು. ಹೆಸ್ಕಾಂನಿಂದತಾಲೂಕಿನಲ್ಲಿ ವಿವಿಧೆಡೆ ಬೋರ್‌ವೆಲ್ ಗಳಿಗೆ ಮೀಟರ್ ಹಾಕದೇ ಇರುವುದರಿಂದ ಕುಡಿಯುವ ನೀರಿಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅ ಧಿಕಾರಿಗಳುಗಂಭೀರವಾಗಿ ಪರಿಗಣಿಸಿ ಕುಡಿಯುವನೀರಿಗೆ ಆದ್ಯತೆ ನೀಡಿ ವಿದ್ಯುತ್ ಸಂಪರ್ಕಕಲ್ಪಿಸಿಕೊಡಬೇಕೆಂದು ಸೂಚಿಸಿದರು.
ಮಂಚಿಕೇರಿ ಭಾಗದಲ್ಲಿ ಲೈನ್‌ಮನ್ ಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡುಕ್ರಿಕೆಟ್ ಆಡುತ್ತ ಕಾಲಹರಣ ಮಾಡುತ್ತಿರುವಬಗ್ಗೆ ಗ್ರಾಪಂ ಸದಸ್ಯರು ದೂರಿದರು.
ಕೆಲಸದ ಅವಧಿಯಲ್ಲಿ ಅಶಿಸ್ತಿನ ವರ್ತನೆಸಹಿಸಲು ಸಾಧ್ಯವಿಲ್ಲ. ಅಂಥ ಲೈನ್‌ಮನ್‌ಗಳಿಗೆ ಕರ್ತವ್ಯ ಸರಿಯಾಗಿ ನಿರ್ವಹಿಸಲು ಸೂಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.ಕೆಲವು ಹೊಸಬರಿಗೆ ಏನಂತ ಹೇಳುವುದು ತಾವೇ ಸರ್ವಸ್ವ ಎಂದುಕೊಂಡಿದ್ದಾರೆ ಎಂದು ಸಚಿವರು ಹೇಳಿಕೊಂಡರು.
ಹೆಸ್ಕಾಂ ಬಗ್ಗೆ ಸಾಕಷ್ಟು ದೂರುಗಳಿದ್ದರೂ ಸಚಿವರು ಹೆಚ್ಚಿನ ಸಮಯ ಹೆಸ್ಕಾಂ ಬಗ್ಗೆತೆಗೆದುಕೊಳ್ಳದೇ ಈ ಹಿಂದೆಲ್ಲಾ ಇಡೀ ಸಭೆಯಲ್ಲಿ ಹೆಸ್ಕಾಂ ಕಾರ್ಯವೈಖರಿ ಬಗ್ಗೆಚರ್ಚೆಯಾಗುತ್ತಿತ್ತು. ಈಗ ಅಷ್ಟಿಲ್ಲ. ಶೇ. 90ರಷ್ಟು ಕೆಲಸ ಹೆಸ್ಕಾಂನಲ್ಲಿ ಆಗಿದೆ ಎಂದು ಹೇಳಿದರು. ಮಹತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿಯಲ್ಲಿ ತಾಲೂಕಿನಲ್ಲಿ ಶೇ. 111 ರಷ್ಟು ಗುರಿ ತಲುಪಿರುವುದಾಗಿ ತಾಪಂ ಎಓ ಜಗದೀಶ ಕಮ್ಮಾರ್ ಹೇಳಿದರು. 8.41 ಲಕ್ಷ ರೂ. ಈ ಯೋಜನೆಯಲ್ಲಿ ಬರಬೇಕಾದ ಹಣ ಬಾಕಿಯಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದಹೆಗಡೆ, ತಾಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ,ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸ್ಥಾಯಿ ಸಮಿತಿಅಧ್ಯಕ್ಷೆ ಕವಿತಾ ತಿನೆಕರ, ಜಿಪಂ ಸದಸ್ಯೆ ರೂಪಾ ಬೂರ್ಮನೆ, ತಹಶೀಲ್ದಾರ ಶ್ರೀಕೃಷ್ಣ ಕಾಮಕರ್, ಸಿಪಿಐ ಸುರೇಶ ಯೆಳ್ಳೂರ್ ಮತ್ತಿತರರು ಇದ್ದರು.