Advertisement

ಹೆದ್ದಾರಿಯಲ್ಲಿ ನಾಮಫ‌ಲಕ ಅಳವಡಿಸಿ

01:31 PM Feb 20, 2021 | Team Udayavani |

ಶಿರಾ: ಶಿರಾ ಬುಕ್ಕಾಪಟ್ಟಣ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಬಸ್‌ ಅಪಘಾತದಿಂದ ಇಬ್ಬರು ಸಾವನ್ನಪ್ಪಿ  ಹಲವರಿಗೆ ಗಂಭೀರ ಸ್ವರೂಪದ ಗಾಯಗೊಂಡಿರುವುದಕ್ಕೆ ಹೆದ್ದಾರಿಯಲ್ಲಿ ಸೂಕ್ತ ರಸ್ತೆ ಫ‌ಲಕ ಅಳವಡಿಸದೆ ಇರುವುದು ಹಾಗೂ ನಿಮ್ಮ ಅವೈಜ್ಞಾನಿಕ ಕಾಮಗಾರಿಯಿಂದ ಸರಣಿ ಅಪಘಾತ ಸಂಭವಿಸುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳಿಗೆ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.

Advertisement

ತಾಪಂನಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಅವರ ಅಧ್ಯಕ್ಷತೆಯ   ಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆತರಾಟೆಗೆ ತೆಗೆದುಕೊಂಡು, ಕೂಡಲೇ ಹೆದ್ದಾರಿಯಲ್ಲಿಸೂಕ್ತ ರಸ್ತೆ ಫ‌ಲಕ ಅಳವಡಿಸಿ ಅಪಘಾತಳನ್ನು ನಿಯಂತ್ರಿಸಿ ಎಂದು ಸೂಚನೆ ನೀಡಿದರು.

ಚಿತ್ರದುರ್ಗ ಜಿಲ್ಲೆಯ ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಇಲ್ಲಿಯವರೆಗೂ ನಿವೇಶನ ರಹಿತರುಎಷ್ಟು ಇದ್ದಾರೆ. ಇಲ್ಲಿಯವರೆಗು ಎಷ್ಟು ಜನರಿಗೆ ನಿವೇಶನಹಂಚಲಾಗಿದೆ ಹಾಗೂ ಇನ್ನೂ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವವರಿಗೆ ನಿವೇಶನ ಹಂಚಿಕೆ ಮಾಡುವುದರಲ್ಲಿ ವಿಳಂಬವಾಗುತ್ತಿದೆ ಏಕೆ? ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್‌ಗೆ ಕೇಳಿದರು. ಅದಕ್ಕೆ ಉತ್ತರಿಸಿದ ಅಧಿಕಾರಿ 8455 ನಿವೇಶನ ರಹಿತರು ಇದ್ದಾರೆ. ಹಾಗೂ 10 ಸಾವಿರ ವಸತಿ ರಹಿತರು ಇರುವುದಾಗಿ ಹಾಗೂ 1582 ಫ‌ಲಾನುಭವಿಗಳ ಪೈಕಿ 888 ಫ‌ಲಾನುಭವಿಗಳ ಆಧಾರ್‌ ಹಾಗೂ ಪಡಿತರಚೀಟಿ ಸಮಸ್ಯೆಯಿಂದ ನಿವೇಶನ ಹಂಚಿಕೆವ ಬಾಕಿ ಇದೆ ಎಂದು ಉತ್ತರಿಸಿದರು.

ನಿವೇಶನ ಕೊಡುವ ವ್ಯವಸ್ಥೆ: ಈ ಕೂಡಲೇ ಪಿಡಿಒಗಳಿಗೆ ತಿಳಿಸಿ ಎಲ್ಲಾ ಗ್ರಾಪಂನಲ್ಲಿ ಗುಡಿಸಲಿನಲ್ಲಿ ಹಾಗೂ ಶಿಥಿಲಗೊಂಡ ಮನೆಗಳಲ್ಲಿ ವಾಸ ಮಾಡುತ್ತಿರುವಕುಟುಂಬಗಳ ಮಾಹಿತಿಯನ್ನು ನೀಡಿದರೆ ಅವರಿಗೆ ವಸತಿ ಹಾಗೂ ನಿವೇಶನ ಕೊಡುವ ವ್ಯವಸ್ಥೆಮಾಡುವುದಾಗಿ ತಿಳಿಸಿದರು. 10 ಮನೆಗೂ ಹೆಚ್ಚು ಇರುವ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಗುರುತಿಸಿ ತಾಲೂಕಾದ್ಯಂತ ಸರ್ವೆ ಆಗಿರುವ ಬಗ್ಗೆ ತಹಶೀಲ್ದಾರ್‌ಮಮತ ಅವರಿಗೆ ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್‌, 128 ಗ್ರಾಮಗಳನ್ನುಕಂದಾಯ ಗ್ರಾಮಗಳನ್ನಾಗಿ ಗುರುತಿಸಿದ್ದು ಅದರಲ್ಲಿ 58 ಗ್ರಾಮಗಳು ಸರ್ವೆಯಾಗಿದ್ದು ಅನುಮೋದನೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಒಟ್ಟು 466 ಅಂಗನವಾಡಿ ಕೇಂದ್ರ: ಶಿರಾ ತಾಲೂಕಿನಲ್ಲಿ ಒಟ್ಟು 466 ಅಂಗನವಾಡಿ ಕೇಂದ್ರಗಳಿವೆ. ಅವುಗಳಲ್ಲಿ 308ಕ್ಕೆ ಸ್ವಂತ ಕಟ್ಟಡಗಳಿದ್ದು 26 ಅಂಗನವಾಡಿ ಕಟ್ಟಡಗಳು ಪ್ರಗತಿಯಲ್ಲಿವೆ. 73 ಗ್ರಾಮೀಣ ಪ್ರದೇಶದ ಹಾಗೂ 29ನಗರ ಪ್ರದೇಶದ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಬೇಕಾಗಿರುತ್ತದೆ ಎಂಬ ಮಾಹಿತಿಯನ್ನು ಸಿಡಿಪಿಒ ಕೆಂಪಹನುಮಯ್ಯ ಸಭೆಯಲ್ಲಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಪೌರಾಯುಕ ಪ್ತ ‌ರಮೇಶ್ವರಪ್ಪ ಹಾಗೂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್‌ಗೆ ನಿವೇಶನ ಒದಗಿಸುವುದರ ಜೊತೆಗೆ ಸಂಪೂರ್ಣ ನರೇಗಾ ಯೋಜನೆಯಡಿ ಕಟ್ಟಡ ನಿರ್ಮಾಣ ಮಾಡಿಕೊಡಿ ಎಂದು ಸೂಚಿಸಿದರು.

Advertisement

ಅಧಿಕಾರಿಗೆ ತರಾಟೆ: ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ್‌,  ಅರಣ್ಯಾಧಿಕಾರಿ ರಾಧಾ ಕೆಡಿಪಿ ಸಭೆಗೆ ಸರಿಯಾದ ಅಂಕಿ ಅಂಶ ನೀಡದೆ ತಪ್ಪುತಪ್ಪಾಗಿ ನೀಡಿದ್ದನ್ನು ಪ್ರಶ್ನಿಸಿದ ಸಚಿವ ಸಭೆಗೆ ಬರುವಾಗ ಅಂಕಿ ಅಂಶಗಳ ಬಗ್ಗೆ ಇರುವ ವ್ಯತ್ಯಾಸಸಹ ನೋಡದೆ ಮಾಹಿತಿ ನೀಡಲು ಬಂದಿದ್ದೀರಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಡಿ.ವೈ.ಎಸ್‌.ಪಿ.ಕುಮಾರಪ್ಪ, ತಾಪಂ ಅಧ್ಯಕ್ಷ ಚಂದ್ರಯ್ಯ, ಜಿಲ್ಲಾ ‌ ಸದಸ್ಯ ರಾಮಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಣ್ಣ ಇದ್ದರು.

ಸಮಸ್ಯೆ ಬಗೆಹರಿಸಲು ಸೂಚನೆ :

ಬರಗೂರಿನ ಶಾಲೆಯ ಕಾಂಪೌಂಡ್‌ನ‌ಲ್ಲೇ ಓವರ್‌ ಹೆಡ್‌ಟ್ಯಾಂಕ್‌ ನಿರ್ಮಿಸಿದ್ದು ನೀರು ಸರಬರಾಜು ಮಾಡದೇ ಇರುವುದರಿಂದ ಶಾಲೆಗೆ ನೀರಿಲ್ಲದಂತಾಗಿದೆ ಎಂದು ಗ್ರಾಮೀಣ ನೀರು ಸರಬರಾಜು ಎ.ಇ.ಇ. ಮಂಜುಪ್ರಸಾದ್‌ ಅವರಿಗೆ ಪ್ರಶ್ನಿಸಿದ ವಿಧಾನ ಪರಿಷತ್‌ ಸದಸ್ಯ ಎಂ.ಚಿದಾನಂದ್‌ ಗೌಡ ಇದಕ್ಕೆ ಧ್ವನಿಗೂಡಿಸಿದ ತಿಪ್ಪೇಸ್ವಾಮಿ ಸಾಕಷ್ಟು ಕಡೆ ಓವರ್‌ ಹೆಡ್‌ಟ್ಯಾಂಕ್‌ ನಿರ್ಮಿಸಿದ್ದು ನೀರು ಸರಬರಾಜು ಹಾಗೂ ಪೈಪ್‌ಲೈನ್‌ ಕೂಡ ಮಾಡಿಲ್ಲ ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಿ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next