Advertisement
ಜಿಪಂ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದಅವರು, 2021ರ ಮಾರ್ಚ್ ತಿಂಗಳಿಗೆ2020ರ ಆರ್ಥಿಕ ವರ್ಷ ಅಂತ್ಯವಗಲಿದೆ.ವಿವಿಧ ಯೋಜನೆಗಳ ಕೋಟಿ ಕೋಟಿಅನುದಾನದಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನುಕೈಗೆತ್ತಿಕೊಳ್ಳಲಾಗಿದ್ದು, ಈ ಕಾಮಗಾರಿಗಳ ಪ್ರಗತಿ ಕುರಿತು ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ಜೊತೆಗೆ ಯಾವುದಾದರೂ ಕಾಮಗಾರಿಗಳುಅನುದಾನದ ಕೊರತೆಯಿಂದ ಸ್ಥಗಿತವಾಗಿದ್ದರೆ. ಅಂತಹ ಸಮಸ್ಯೆಗಳನ್ನು ಆದಷ್ಟು ಬೇಗ ನಿವಾರಣೆ ಮಾಡಬೇಕು ಎಂದು ತಿಳಿಸಿದರು.
Related Articles
Advertisement
ಮಿನುಗಾರಿಕೆ ಇಲಾಖೆಯ ವಿವಿಧ ಯೋಜನೆಯಡಿ ಈಗಾಗಲೇ ಮನೆಗಳುಮಂಜೂರಾಗಿವೆ. ಆಯ್ಕೆ ಪ್ರಕ್ರಿಯೆಯೂಪೂರ್ಣಗೊಂಡಿದ್ದು, ಈವರೆಗೂ ಮನೆಗಳಹಂಚಿಕೆಯಾಗಿಲ್ಲ. ಹೀಗಾಗಿ ಸಂಬಂಧಿಸಿದಅಧಿಕಾರಿಗಳು ಫಲಾನುಭವಿಗಳಿಗೆ ಮನೆ ಹಂಚುವ ಪ್ರಕ್ರಿಯೆಗೆ ಏನಾದರೂ ತೊಡಕುಗಳಿದ್ದರೆ ಕೂಡಲೇಸರಿಪಡಿಸಿಕೊಂಡು ಆರ್ಥಿಕ ವರ್ಷದ ಅಂತ್ಯದೊಳಗೆ ಮನೆ ಹಂಚಿಕೆಗೆ ಚಾಲನೆ ನೀಡಬೇಕು ಎಂದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಅನೇಕ ಯೋಜನೆಗಳಡಿ ರೈತರಿಗೆ ಅನುಕೂಲವಾಗುವಂತ ಕಾರ್ಯ ನಡೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೀಜ, ಗೊಬ್ಬರ, ತಾಡಪತ್ರೆವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.ಅಧ್ಯಕ್ಷರ ಪ್ರಶ್ನೆಗೆ ಉತ್ತರಿಸಿದ ಕೃಷಿಅಧಿಕಾರಿ, ಪ್ರಸಕ್ತ ವರ್ಷದಿಂದ ಪ್ರತಿಯೊಬ್ಬರೈತ ಪ್ರತಿ ತಿಂಗಳು ತನ್ನ ಕೃಷಿ ಭೂಮಿಗೆ ಅನುಗುಣವಗಿ 50 ಚೀಲ ಗೊಬ್ಬರಪಡೆಯಬಹುದು ಎಂದು ಕೇಂದ್ರಸರಕಾರ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗೊಬ್ಬರ ವಿತರಿಸಲಾಗುತ್ತಿದೆ.ಅಲ್ಲದೇ ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ತಾಡಪತ್ರೆಗೆ ರೈತರು ಬೇಡಿಕೆ ಸಲ್ಲಿಸಿದ್ದಾರೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ತಾಡಪತ್ರೆ ಮಂಜೂರಾತಿಗೆ ಪತ್ರ ಬರೆಯಲಾಗಿದ್ದು, ಪ್ರಸಕ್ತ ಸಾಲಿನಲ್ಲಿಜಿಲ್ಲೆಯ ಪ್ರತೀ ತಾಲೂಕಿಗೆ 4-5 ನೂರು ತಾಡಪತ್ರೆಗಳು ಮಂಜೂರಾಗಬಹುದು ಎಂದು ತಿಳಿಸಿದರು.
ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಅಧ್ಯಕ್ಷ ಬಸವರಾಜ ದೊಡ್ಮಮನಿ, ಶಿಕ್ಷಣಮತ್ತು ಆರೋಗ್ಯ ಸ್ಥಾಯಿ ಅಧ್ಯಕ್ಷೆ ಚೈತ್ರಾ ಕೋಠಾರಕರ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿಸಮಿತಿ ಅಧ್ಯಕ್ಷೆ ಉಷಾ ನಾಯ್ಕ, ಜಿಪಂಆಡಳಿತ ವಿಭಾಗದ ಉಪಕಾರ್ಯದರ್ಶಿನಾಗೇಶ ರಾಯ್ಕರ್ ಸೇರಿದಂತೆ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.