ಮುಂಬಯಿ: ನಗರದ ಪ್ರಸಿದ್ಧ ಉದ್ಯಮಿ, ಸಮಾಜ ಸೇವಕ, ಕೊಡುಗೈದಾನಿ ಭವಾನಿ ಫೌಂಡೇಶನ್ ಮುಂಬಯಿ ಸಂಸ್ಥಾಪಕ ಕುಸುಮೋದರ ಡಿ. ಶೆಟ್ಟಿ ಅವರಿಗೆ 2017 ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಕರ್ನಾಟಕದಾದ್ಯಂತ ಇರುವ ಸುದ್ದಿ ಮಾಧ್ಯಮಗಳಾದ ದಿನಪತ್ರಿಕೆಗಳು, ಪಾಕ್ಷಿಕ, ಮಾಸಿಕ, ಟಿವಿ ಚಾನೆಲ್, ಆಕಾಶವಾಣಿ, ಆನ್‌ಲೈನ್ ಚಾನೆಲ್ಸ್‌ಗಳ ಸಂಘಟನಾ ಸಂಸ್ಥೆ ದಿ. ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಕರ್ನಾಟಕ ಸಂಸ್ಥೆಯು ಪತ್ರಿಕೋದ್ಯಮದ ಇತಿಹಾಸದಲ್ಲೇ ಇದೇ ಪ್ರಪ್ರಥಮವಾಗಿ 62 ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ನ. 30 ರಂದು ಬೆಂಗಳೂರಿನ ಕುಮಾರ ಸ್ವಾಮಿ ಬಡಾವಣೆಯಲ್ಲಿರುವ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜು ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ಉದ್ಯಮಿ ಕೆ. ಡಿ. ಶೆಟ್ಟಿ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನಿಸಿ ಶುಭಹಾರೈಸಲಾಯಿತು.
ಹಿರಿಯ ಪತ್ರಕರ್ತ, ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ವರ್ಣರಂಜಿತ ಸಮಾರಂಭದಲ್ಲಿ ಬೆಂಗಳೂರು ದೂರದರ್ಶನದ ನಿಕಟಪೂರ್ವ ಮಹಾ ನಿರ್ದೇಶಕ ಡಾ| ಮಹೇಶ್ ಜೋಶಿ, ಮಾಜಿ ಕ್ರಿಕೆಟ್‌ಪಟು ಗುಂಡಪ್ಪ ವಿಶ್ವನಾಥ್, ರಾಜ್ಯ ಮಹಿಳಾ ಅಯೋಗದ ನಾಗಲಕ್ಷಿ¾à ಬಾಯಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಸಮಾಜ ಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದಿರುವ ಹೊರನಾಡ ಮುಂಬಯಿಯ ಸಾಧಕ, ಮುಂಬು ಉದ್ಯಮಿ, ಸಮಾಜ ಸೇವಕ, ಭವಾನಿ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಕಾರ್ಯಾಧ್ಯಕ್ಷ ದಡªಂಗಡಿ ಚೆಲ್ಲಡ್ಕ ಕುಸುಮೋದರ ಡಿ. ಶೆಟ್ಟಿ ಇವರಿಗೆ “ಪತ್ರಿಕೋದ್ಯಮ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2017′ ಪ್ರದಾನಿ ಶಾಲು ಹೊದಿಸಿ, ಪುಷ್ಪಗುಚ್ಚ, ಸ್ಮರಣಿಕೆ, ಸ್ವರ್ಣಪದಕವನ್ನು ಪ್ರದಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಿಸಿಪಿ ರೂಪಾ (ಐಪಿಎಸ್), ಮಾಜಿ ಕ್ರಿಕೆಟಿಗ ಜಿ. ಆರ್ ವಿಶ್ವನಾಥ್, ನಟಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್, ಸಾಧು ಕೋಕಿಲ, ರಚಿತಾ ರಾಮು ಮತ್ತಿತರ ಚಿತ್ರರಂಗದ ಗಣ್ಯರಿಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಲಾಯಿತು.