Advertisement

ಕೆ.ಸಿ. ವ್ಯಾಲಿ: ಕೋರ್ಟ್‌ಗೆ ಹೋದವರ ವಿರುದ್ಧ ದಂಗೆ ಏಳಿ

06:44 AM Jan 25, 2019 | Team Udayavani |

ಕೋಲಾರ: ಹಸಿರು ಶಾಲು ಹಾಕಿಕೊಂಡು ಕೆ.ಸಿ. ವ್ಯಾಲಿ ನೀರನ್ನು ವಿರೋಧಿಸುವರು ನಿಜವಾದ ರೈತರಲ್ಲ, ಕೆ.ಸಿ.ವ್ಯಾಲಿ ಯೋಜನೆ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗಿ ತಡೆ ತರುವ ಮೂಲಕ ಬರದಿಂದ ಕಂಗೆಟ್ಟಿರುವ ಜಿಲ್ಲೆಯ ಜನತೆಗೆ ದ್ರೋಹವೆಸಗಿರುವವರ ವಿರುದ್ಧ ಜನತೆ ದಂಗೆ ಏಳಬೇಕು ಎಂದು ಶಾಸಕ ಕೆ. ಶ್ರೀನಿವಾಸಗೌಡ ಹೇಳಿದರು.

Advertisement

ಗುರುವಾರ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘ ಆಯೋಜಿಸಿದ್ದ ಜಿಲ್ಲಾ ರೇಷ್ಮೆ ಬೆಳೆಗಾರರ ತಾಂತ್ರಿಕ ಸಮಾವೇಶ, ಕ್ಯಾಲೆಂಡರ್‌ ಬಿಡುಗಡೆ ಹಾಗೂ ಷೇರು ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಾಣತನಕ್ಕೆ ಏನೆನ್ನಬೇಕು: ಜಿಲ್ಲೆಯ ಜನತೆ ಈಗಾಗಲೇ ಅಂತರ್ಜಲ 2000 ಅಡಿಗೆ ಹೋಗಿ ಸಂಕಷ್ಟ ಅನುಭವಿಸುತ್ತಿದ್ದಾರೆ, ಕೊಳವೆ ಬಾವಿ ಕೊರೆದು ನೀರಿಲ್ಲದೇ ಸಾಲದಲ್ಲಿ ಸಿಲುಕಿದ್ದಾರೆ, ಇಂತಹ ಜಿಲ್ಲೆಗೆ ಅಂತರ್ಜಲ ವೃದ್ಧಿಗಾಗಿ ತಂದ ಕೆ.ಸಿ. ವ್ಯಾಲಿಗೂ ತಡೆ ತಂದಿರುವ ಮಹನೀಯರ ಜಾಣತನಕ್ಕೆ ಏನೆನ್ನಬೇಕು ಎಂದು ಪ್ರಶ್ನಿಸಿದರು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಹಾಲು, ರೇಷ್ಮೆ ಬೆಳೆಯೇ ಜೀವನಾಧಾರ. ರೇಷ್ಮೆ ಇಲ್ಲದಿದ್ದರೆ ತೀವ್ರ ಕಷ್ಟಕ್ಕೆ ಸಿಲುಕಬೇಕಾಗಿತ್ತು. ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ ನೀಡಿ ಲಾಭದಾಯಕವಾಗಿ ರೇಷ್ಮೆ ಕೃಷಿ ಮುಂದುವರೆಸಿ ಎಂದು ಸಲಹೆ ನೀಡಿದರು.

ಹಸಿರು ಶಾಲು ಹಾಕಿದವರು ರೈತರಲ್ಲ: ಕೆ.ಸಿ. ವ್ಯಾಲಿಗೆ ತಡೆಯಾಜ್ಞೆ ತಾರದೇ ಇದ್ದಿದ್ದರೆ ಈವರೆಗೆ 10 ಕೆರೆಗಳು ತುಂಬುತ್ತಿತ್ತು. ಸುಪ್ರೀಂ ಕೋರ್ಟ್‌ಗೆ ಹೋದವರನ್ನು ಯಾವ ರೀತಿ ನೋಡಬೇಕೋ ಗೊತ್ತಾಗುತ್ತಿಲ್ಲ. ಇಂದು ಹಸಿರು ಶಾಲು ಹಾಕಿದವರೆಲ್ಲ ರೈತರಾಗಿ ಬಿಟ್ಟಿದ್ದಾರೆ ಎಂದು ಛೇಡಿಸಿದರು.

Advertisement

ಕೋರ್ಟ್‌ನಲ್ಲಿ ಲಕ್ಷಾಂತರ ರೂ. ನೀಡಿ ಪ್ರಕರಣ ನಡೆಸುವುದರ ಹಿಂದೆ ರೈತ ವಿರೋಧಿಗಳಿದ್ದಾರೆ. ಇದನ್ನು ನೋಡಿಕೊಂಡು ಸುಮ್ಮನಿರದೆ ದಂಗೆ ಏಳಬೇಕು. ರೈತರ ಹೊಟ್ಟೆ ಮೇಲೆ ಹೊಡೆಯುವವರು ನಮ್ಮ ಶತ್ರುವೆಂದು ನೋಡಿ ಶಾಸ್ತಿ ಮಾಡಬೇಕು ಎಂದರು.

ರೈತರ ಅಭಿವೃದ್ಧಿಗೆ ಒತ್ತು: ಕೋಲಾರ, ಬಂಗಾರಪೇಟೆ, ಮಾಲೂರಿಗೆ ಕುಡಿಯುವ ನೀರು ಒದಗಿಸುವ 155 ಕೋಟಿ ವೆಚ್ಚದ ಯರಗೋಳು ಯೋಜನೆಗೆ 10 ವರ್ಷದ ಹಿಂದೆ ಚಾಲನೆ ನೀಡಲಾಗಿತ್ತು. ನಂತರ ಬಂದ ಮಹಾನುಭಾವರು ಗಮನಹರಿಸಲಿಲ್ಲ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ ಅವರು, ಸಮಾಜ, ರೈತರ ಅಭಿವೃದ್ಧಿಗೆ ಒತ್ತು ನೀಡುವವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಮೋರಿಸನ್‌, ಜನತೆ ಮಿಶ್ರತಳಿ ರೇಷ್ಮೆ ಹುಳು ಸಾಕಾಣೆ ಬಿಟ್ಟು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆ„ವೋಲ್ಟೀನ್‌ಗೆ ಬೇಡಿಕೆ ಇರುವುದರಿಂದ ರೈತರು ಇದನ್ನೇ ಬೆಳೆಯಬೇಕು ಎಂದರು.

ಉತ್ತಮ ಇಳುವರಿ: ಮಿಶ್ರತಳಿ ಗೂಡು ಬೆಳೆಯುತ್ತಿದ್ದರೆ ಒಂದುದಿನ ಟೊಮೇಟೋವನ್ನು ರಸ್ತೆಗೆ ಸುರಿಯುವಂತೆ ರೇಷ್ಮೆ ಗೂಡನ್ನೂ ಎಸೆಯಬೇಕಾದೀತು. ತೋಟ ನಿರ್ವಹಣೆ, ಸೋಂಕುನಿವಾರಣೆ ಮತ್ತು ಉತ್ತಮ ಚಾಕಿ ಸೆಂಟರ್‌ನಿಂದ ಹುಳು ತಂದು ಸಾಕಿದರೆ ಬೆ„ವೋಲ್ಟೀನ್‌ನಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಿದರು.

ಲಾಭ ಗಳಿಸಿ: ಹಿರಿಯ ವಿಜ್ಞಾನಿ ಡಾ.ಎಚ್.ತಿಮ್ಮಾರೆಡ್ಡಿ ಮಾತನಾಡಿ, ಮರ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆಯುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಹಿಪ್ಪುನೇರಳೆ ಸಿಗುತ್ತಿಲ್ಲ. ಹೆಚ್ಚು ರೆಂಬೆ ಇಲ್ಲದೆ ಸೊಪ್ಪು ಸಿಗುತ್ತಿಲ್ಲ. ಕನಿಷ್ಠ ಎರಡು ಮರದಲ್ಲಿ ಒಂದು ಮೊಟ್ಟೆಯನ್ನು ಮೇಯಿಸುವಷ್ಟಾದರೂ ಸಾಧ್ಯವಾದರೆ ರೇಷ್ಮ ಕೃಷಿ ಆರ್ಥಿಕವಾಗಿ ಲಾಭದಾಗಬಹುದು. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಹೇಳಿದರು.

ಪ್ರಗತಿಪರ ರೇಷ್ಮೆ ಕೃಷಿಕರಾದ ವೇಮಗಲ್‌ ಸೀತಪ್ಪ, ಬಂಗಾರಪೇಟೆಯ ರಾಮಚಂದ್ರ, ಕರಿಪಲ್ಲಿಯ ರಾಮಕೃಷ್ಣ, ಮಾಲೂರಿನ ದಾಸರಹಳ್ಳಿಯ ಶಾಮಣ್ಣ, ಎಚ್.ಮುರುಳಿ, ರೀಲರ್‌ಗಳಾದ ಅನ್ಸರ್‌, ಎಂ.ಆರ್ಪಾಷ, ನಿಸಾರ್‌ ಅಹಮದ್‌ರನ್ನು ಸನ್ಮಾನಿಸಲಾಯಿತು.

ರೇಷ್ಮೆ ಜಂಟಿ ನಿರ್ದೇಶಕ ಎಸ್‌.ವಿ ಕುಮಾರ್‌, ಜಿಲ್ಲಾ ಉಪ ನಿರ್ದೇಶಕ ಎಂ.ಕೆ ಪ್ರಭಾಕರ್‌, ಸಂಘದ ಅಧ್ಯಕ್ಷ ಸಿ.ವಿ.ನಾರಾಣಸ್ವಾಮಿ, ಉಪಾಧ್ಯಕ್ಷ ಎನ್‌. ಗೋಪಾಲಪ್ಪ,ಪ್ರಧಾನ ಕಾರ್ಯದರ್ಶಿ ಬಳಗೆರೆ ಬಿ.ಎಂ ಶಂಕರೇಗೌಡ, ಸಂಘಟನಾ ಕಾರ್ಯದರ್ಶಿ ನಾಗನಾಳ ವೈ.ಶ್ರೀನಿವಾಸ್‌,ಅಂಕತಟ್ಟಿ ಗೋವಿಂದರಾಜು, ಚಿನ್ನ ಹಳ್ಳಿ ನಾಗರಾಜ್‌, ವೆಂಕಟೇಶಪ್ಪ, ಚಿನ್ನಾಪುರ ನಾರಾಯಣಸ್ವಾಮಿ, ಸಹಾಯಕ ನಿರ್ದೇಶಕರಾದ ವೆಂಕ ಟೇಶ್‌, ಎಸ್‌.ಎನ್‌ ಶ್ರೀನಿವಾಸ್‌, ನಾಗರಾಜ್‌, ಮಂಜುನಾಥ್‌, ಅಶ್ವಥ್‌ನಾರಾಯಣ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next