Advertisement

ಹಳ್ಳ ಹಿಡಿಯುತ್ತಿದೆ ಕಾವೇರಿ ತಂತ್ರಾಂಶ ಯೋಜನೆ!

07:47 AM Dec 02, 2017 | |



Advertisement

ಶಿವಮೊಗ್ಗ: ಜನಹಿತದ ದೃಷ್ಟಿಯಿಂದ ಸರ್ಕಾರ ಯಾವುದೇ ಯೋಜನೆ ಜಾರಿಗೆ ತಂದರೂ ಅಧಿಕಾರಿಗಳ ಅಸಹಕಾರದಿಂದ ಯೋಜನೆಗಳು ಹೇಗೆ ಹಳ್ಳಹಿಡಿಯುತ್ತವೆ ಎಂಬುದಕ್ಕೆ ಇನ್ನೊಂದು ಸಾಕ್ಷಿ ದೊರಕಿದೆ. ಕಾವೇರಿ ತಂತ್ರಾಂಶ ಬಳಸಿ ಆನ್‌ ಲೈನ್‌ ಮೂಲಕ ಆಸ್ತಿ ನೋಂದಣಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರದ ಯೋಜನೆ ಅಧಿಕಾರಿಗಳ ಅಸಹಕಾರದಿಂದ ನನೆಗುದಿಗೆ ಬಿದ್ದಿದೆ.

ಆಸ್ತಿ ಖರೀದಿದಾರರು ಮತ್ತು ಮಾರಾಟಗಾರರ ಪಾಲಿಗೆ ವರದಾನವಾಗಬೇಕಿದ್ದ ಈ ಮಹತ್ವದ ಯೋಜನೆ ಜಾರಿಗೊಂಡು ತಿಂಗಳುಗಳೇ ಕಳೆದರೂ ಯಾವುದೇ ನೋಂದಣಾಧಿಕಾರಿ ಕಚೇರಿಯಲ್ಲಿ ಯಾವ ಮಾಹಿತಿಯೂ ಇಲ್ಲ ಎನ್ನುವ ದೂರು ಕೇಳಿಬರುತ್ತಿದೆ. ಈ ಯೋಜನೆ ಕುರಿತು ಜನರಲ್ಲಿ  ಅರಿವು ಮೂಡಿಸುವ ಪ್ರಯತ್ನವನ್ನೂ ಅಧಿಕಾರಿಗಳು ಮಾಡದೆ ಇರುವುದರಿಂದ ಆನ್‌ಲೈನ್‌ ನೋಂದಣಿ ಕುರಿತು ಆಸಕ್ತಿ ಉಳ್ಳವರು ನಿರಾಸೆ ಪಡುವಂತಾಗಿದೆ. ಆನ್‌ಲೈನ್‌ ಮೂಲಕ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು “ಕಾವೇರಿ’ ಎಂಬ ವೆಬ್‌ ಆಧಾರಿತ ತಂತ್ರಾಂಶದ
ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದೆ. ಈ ಮೂಲಕ ಸಾರ್ವಜನಿಕರು ತಮ್ಮ ಆಸ್ತಿ ನೋಂದಣಿ ಸಂಬಂಧ ಮುಂಚಿತವಾಗಿ ಸಮಯ (ಅಪಾಯಿಂಟ್‌ ಮೆಂಟ್‌)ನಿಗದಿಪಡಿಸಿಕೊಳ್ಳಲು ಸಾಧ್ಯವಾಗಲಿದೆ. ಜತೆಗೆ ಅಗತ್ಯವಾದ ಇಂಡೆಕ್ಸ್‌ ಹುಡುಕಲು ಮತ್ತು ನೋಂದಣಿ ಪ್ರತಿ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ.

ಕೈಗಾರಿಕಾ ನೀತಿ ಉತ್ತೇಜನ ಇಲಾಖೆ (ಡಿಐಪಿಪಿ), ಇಂಡಿಯಾ-ಬಿಸಿನೆಸ್‌ ಆ್ಯಕ್ಷನ್‌ ರೀ ಫಾರ್ಮ್ ಆ್ಯಕ್ಷನ್‌ ಪ್ಲಾನ್‌ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಂಟಿ ಸಹಯೋಗದಲ್ಲಿ 1908ರ ನೋಂದಣಿ ಕಾಯ್ದೆ ಮತ್ತು 1932ರ ಪಾರ್ಟ್‌ನರ್‌ಶಿಪ್‌ ಫರ್‌ ಮ್ಸ್‌ ಅಡಿ ಆನ್‌ಲೈನ್‌ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ರಾಜ್ಯ ಸರ್ಕಾರ ಸಹ ಕಳೆದ ಅ.27 ರಂದು ಹೊರಡಿಸಿರುವ 27ನೇ ಸುತ್ತೋಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಉಪ ನೋಂದಣಾಧಿಕಾರಿಗಳಿಗೆ ನೀಡಿರುವ ಸೂಚನೆಯಲ್ಲಿ ಆನ್‌ಲೈನ್‌ ಆಸ್ತಿ ನೋಂದಣಿ ಸಂಬಂಧ ಸಲ್ಲಿಕೆಯಾಗುವ ಅರ್ಜಿ ಪರಿಷ್ಕರಣೆ ಸಂಬಂಧ ಕಾರ್ಯೋನ್ಮುಖವಾಗುವಂತೆ
ಸೂಚಿಸಿದೆ.

ಇಷ್ಟೆಲ್ಲಾ ಪ್ರಯತ್ನ ಹಾಗೂ ಕ್ರಮಗಳ ಹೊರತಾಗಿಯೂ ಆನ್‌ಲೈನ್‌ ಮೂಲಕ ಈ ತನಕ ಬೆರಳೆಣಿಕೆಯಷ್ಟು ಜನ ಮಾತ್ರ ಆನ್‌ಲೈನ್‌ ಮೂಲಕ ಆಸ್ತಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಯಾವುದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆನ್‌ಲೈನ್‌ ಆಸ್ತಿ ನೋಂದಣಿ ಸಂಬಂಧ ಯಾವುದೇ ಮಾಹಿತಿ ಫಲಕವಾಗಲಿ, ಸೂಚನೆಯಾಗಲಿ ಅಳವಡಿಸದ ಕಾರಣ ಜನ ಎಂದಿನಂತೆ ಸರದಿಯಲ್ಲಿ ನಿಂತು ಆಸ್ತಿ ನೋಂದಣಿ ಮಾಡಿಸಿಕೊಳ್ಳುವುದು
ಸಾಮಾನ್ಯವಾಗಿದೆ.

Advertisement

ಆಸ್ತಿ ನೋಂದಣಿ ಸಂಬಂಧ ಆನ್‌ಲೈನ್‌ ಮೂಲಕ ಸಲ್ಲಿಕೆಯಾಗುವ ಅರ್ಜಿಗಳಿಗೆ ಮಾತ್ರ ಉತ್ತೇಜನ ನೀಡುವಂತೆ ಹಿರಿಯ ಅಧಿಕಾರಿಗಳಿಂದ ನಾವು ನಿರ್ದೇಶಿತರಾಗಿದ್ದೇವೆ. ಇನ್ನುಳಿದಂತೆ ಆನ್‌ ಲೈನ್‌ ಆಸ್ತಿ ನೋಂದಣಿ ಸಂಬಂಧ ಸಾರ್ವಜನಿಕರಿಗೆ ಮಾಹಿತಿ ನೀಡುವ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಹೇಗೆ ಹಾಗೂ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಅಧಿಕಾರಿಗಳ
ಸೂಚನೆ ನಿರೀಕ್ಷಿಸಲಾಗುತ್ತಿದೆ ಎಂದು ಶಿವಮೊಗ್ಗ ಉಪ ನೋಂದಣಾ ಧಿಕಾರಿ ಕಚೇರಿಯ ಹಿರಿಯ ಉಪ ನೋಂದಣಾಧಿಕಾರಿ ಪ್ರಸಾದ್‌ ಕುಮಾರ್‌ ಹೇಳುತ್ತಾರೆ.

ಅಧಿಕೃತತೆ ತಿಳಿಯಲು ಸಾಧ್ಯ
ಕಾವೇರಿ ತಂತ್ರಾಂಶದ ಮೂಲಕ ನಾಗರಿಕರು ಆಸ್ತಿ ನೋಂದಣಿಗಾಗಿ ಅಪಾಯಿಂಟ್‌ ಮೆಂಟ್‌ ನಿಗದಿಪಡಿಸಿಕೊಳ್ಳಬಹುದಾಗಿದೆ.
ಇದರಿಂದಾಗಿ ಆಸ್ತಿಯ ಹಾಲಿ ಮಾಲೀಕರು ಯಾರು ಹಾಗೂ ಆಸ್ತಿ ನೋಂದಣಿ ದಾಖಲೆ ಪುಸ್ತಕದಲ್ಲಿ ಆಸ್ತಿಯ ಅಧಿಕೃತತೆಯನ್ನು
ತಿಳಿಯಲು ಸಾಧ್ಯವಾಗಲಿದೆ.

ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next