ಕಾವೂರು: ದ.ಕ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಮಾಜಿ ಶಾಸಕ ಬಿ.ಎ. ಮೊದಿನ್ ಬಾವಾ ಪ್ರಚಾರ ಸಭೆಯು ಕಾವೂರು ಜಂಕ್ಷನ್‌ನಲ್ಲಿ ಜರಗಿತು.
ಈ ಸಂದರ್ಭದಲ್ಲಿ ಶಾಸಕತ್ವದ ಅವ ಧಿಯಲ್ಲಿ ಮತ್ತು ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಮಾಡಿದಂತಹ ಸಾಧನೆಗಳು, ಹಲವಾರು ಯೋಜನೆಗಳು, ತನ್ನ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ, ಅನುದಾನಗಳ ಮಾಹಿತಿ ನೀಡಿದರು.
ಈ ಬಾರಿಯ ಲೋಕಸಭಾ ಚುನಾವಣೆ ಯಲ್ಲಿ ಯುವ ಪ್ರತಿಭಾವಂತ ನಾಯಕ, ತನ್ನ ವಿದ್ಯಾರ್ಥಿ ಜೀವನದ ಸಂದರ್ಭ ಹೋರಾಟಗಳ ಮೂಲಕವೇ ಮುಂಚೂಣಿಗೆ ಬಂದ ಯುವ ನಾಯಕ ಮಿಥುನ್ ರೈ ಅವರನ್ನು ಪ್ರಚಂಡ ಬಹುಮತದೊಂದಿಗೆ ಚುನಾಯಿಸಬೇಕು ಎಂದರು.
ಸುರತ್ಕಲ್ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಸದಾಶಿವ ಶೆಟ್ಟಿ, ಸುರೇಂದ್ರ ಕಂಬ್ಳಿ, ಪ್ರಚಾರ ಸಮಿತಿಯ ಅಧ್ಯಕ್ಷ ರಾಘವೇಂದ್ರ ರಾವ್ ಮಾಜಿ ಉಪಮಹಾಪೌರರಾದ ಕೆ. ಮೊಹಮ್ಮದ್, ದೀಪಕ್ ಪೂಜಾರಿ, ನಾಗವೇಣಿ, ಸುಮಂತ್ ರಾವ್, ಹಿದಾ ಯತ್, ಕಮಾಲಾಕ್ಷ, ಶಂಸಾದ್,ನಾಶೀರ್ ಮೊದಲಾದವರಿದ್ದರು. ರೆಹಮಾನ್ ಖಾನ್ ಕುಂಜತ್ತ್ಬೈಲ್ ಸ್ವಾಗತಿಸಿದರು. ಬಳಿಕ ಬೈಕಂಪಾಡಿ ಮೀನಕಳಿಯಲ್ಲಿ ಮಾಜಿ ಶಾಸಕ ಬಾವಾ ಮತಯಾಚನೆ ನಡೆಸಿ, ಕಾರ್ಯಕರ್ತರ ಸಭೆ ನಡೆಸಿದರು. ಹರೀಶ್ ಬಂಗೇರ, ಲಕ್ಷ್ಮಣ್ ಸುವರ್ಣ, ಬಶೀರ್ ಬೈಕಂಪಾಡಿ, ಸುರೇಶ್ ಅಮೀನ್, ಗಿರೀಶ್ ಸುವರ್ಣ ನಿತಿನ್ ಪುತ್ರನ್, ಕೃಷ್ಣಪುತ್ರನ್, ಅಮುಲಿ ಮತ್ತಿತರರು ಉಪಸ್ಥಿತರಿದ್ದರು.