Advertisement

ಹಿರೇಮ್ಯಾಗೇರಿ ಗ್ರಾಪಂ ಅಧ್ಯಕ್ಷರಾಗಿ ಕವಿತಾ ಆಯ್ಕೆ

03:05 PM Nov 30, 2017 | |

ಯಲಬುರ್ಗಾ: ತಾಲೂಕಿನ ಹಿರೇಮ್ಯಾಗೇರಿ ಗ್ರಾಪಂ ಅಧ್ಯಕ್ಷ ಹನುಮಗೌಡ ಮಾಲಿಪಾಟೀಲ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.

Advertisement

ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಕವಿತಾ ಕಲ್ಲಪ್ಪ ಗುರಿಕಾರ್‌ ಆಯ್ಕೆಯಾದರು. ಸಾಮಾನ್ಯ ವರ್ಗ ಮೀಸಲಿದ್ದ ಅಧ್ಯಕ್ಷೆ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಒಟ್ಟು 13 ಜನ ಸದಸ್ಯರು ಒರ್ವ ಮಹಿಳಾ ಸದಸ್ಯೆ ಸುಧಾ ಸುಬೇದಾರ್‌ ಗೈರಾಗಿದ್ದರು. 12 ಜನ ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಕವಿತಾ ಕಲ್ಲಪ್ಪ ಗುರಿಕಾರ್‌, ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾಂತೇಶ ಮಾಡ್ಲಗೇರಿ ನಡುವೆ ಸ್ಪರ್ಧೆ ಏರ್ಪಟಿತ್ತು.

ಮತದಾನ ಪ್ರಕ್ರಿಯೆಯಲ್ಲಿ ಕವಿತಾ ಗುರಿಕಾರ್‌(10), ಮಹಾಂತೇಶ ಮಾಡ್ಲಗೇರಿ(2) ಮತ ಪಡೆದರು. ಹೆಚ್ಚು ಮತ ಪಡೆದ ಕವಿತಾ ಕಲ್ಲಪ್ಪ ಗುರಿಕಾರ್‌ ಅವರನ್ನು ಅಧ್ಯಕ್ಷರನ್ನಾಗಿ ಚುನಾವಣಾ ಧಿಕಾರಿ ಘೋಷಣೆ ಮಾಡಿದರು. ಚುನಾವಣಾಧಿಕಾರಿಗಳಾಗಿ ಗ್ರೇಡ್‌-2 ತಹಸೀಲ್ದಾರ್‌ ಮಲ್ಲಿಕಾರ್ಜುನ ಜಾನೇಕಲ್‌, ಸಹಾಯಕ ಚುನಾವಣಾಧಿ  ಕಾರಿಯಾಗಿ ವಿಜಯಕುಮಾರ ಗುಂಡೂರು, ಪಿಡಿಒ
ವೀರಭದ್ರಗೌಡ ಕಾರ್ಯನಿರ್ವಹಿಸಿದರು.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕವಿತಾ ಕಲ್ಲಪ್ಪ ಗುರಿಕಾರ್‌ ಮಾತನಾಡಿ, ಕುಡಿವ ನೀರು, ರಸ್ತೆ, ಬೀದಿ ದೀಪ, ನೈರ್ಮಲ್ಯ, ಚರಂಡಿ ಇತರ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುತ್ತೇನೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತೇನೆ ಎಂದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ರೇಣುಕಾ ಪೂಜಾರ್‌, ಸದಸ್ಯರಾದ ಹನುಮಗೌಡ ಮಾಲಿಪಾಟೀಲ, ಸದಸ್ಯರಾದ ಕನಕಪ್ಪ ಬಂಡಿವಡ್ಡರ್‌, ವೀರೇಶ ಗುರಿಕಾರ್‌, ಮುರ್ತುಜಾಸಾಬ ನಧಾಪ, ವಿಜಯಲಕ್ಷ್ಮೀ, ಯಾಸ್ಮಿàನಬೇಗಂ ದನಕನದೊಡ್ಡಿ, ಶಾಂತವ್ವ, ರೇಣವ್ವ, ಬಸವರಾಜ ಉಳ್ಳಾಗಡ್ಡಿ, ಮುಖಂಡರಾದ ಎಸ್‌.ಕೆ. ರಾಮಶೆಟ್ಟಿ, ತಾಪಂ ಮಾಜಿ ಸದಸ್ಯ ಎಸ್‌.ಜಿ. ಗುರಿಕಾರ್‌, ಅಂದಪ್ಪ ಸುಬೇದಾರ್‌, ಮಹಾಂತೇಶ ಗಾಣಿಗೇರ, ಬಸವನಗೌಡ ಮಾಲಿಪಾಟೀಲ, ಶೇಖರರಡ್ಡಿ ಬೇರಗಿ, ಎಸ್‌. ಎಸ್‌. ರಾಮಶೆಟ್ಟಿ, ದ್ಯಾಮಣ್ಣ ಮಡಿಕೇರಿ ಇತರರು ಇದ್ದರು.

Advertisement

ವಿಜಯೋತ್ಸವ
ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ಹೊರಗಡೆ ಸೇರಿದ್ದ ಕಾಂಗ್ರೆಸ್‌ ಪಕ್ಷದ ನೂರಾರು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರನ್ನು ಮಾರ್ಲಾಪಣೆ ಮೂಲಕ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next