Advertisement

ಕನ್ನಡ ಹಾಡುಗಳು ಅಂದರೆ ಎಸ್‌ಪಿಬಿ ಎನ್ನುವಷ್ಟು ಹುಚ್ಚು ಹಿಡಿಸಿದ್ದ ಅಪರೂಪದ ಗಾಯಕ: ಕವಿರಾಜ್

03:49 PM Sep 25, 2020 | keerthan |

ಬಹುಭಾಷಾ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ದಶಕಗಳ ಕಾಲ ಕನ್ನಡದಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ ಬಾಲು ಸರ್ ಬಗ್ಗೆ ಚಿತ್ರ ಸಾಹಿತಿ ಕವಿರಾಜ್ ಬರೆಯುತ್ತಾರೆ..

Advertisement

ನಾನು ಅತಿ ಚಿಕ್ಕ ವಯಸ್ಸಿನಿಂದಲೇ ಎಸ್‌ಪಿಬಿ ಅವರ ಹಾಡು ಕೇಳುತ್ತ ಬೆಳೆದವನು. ರೇಡಿಯೋದಲ್ಲಿ ಎಸ್‌ಪಿಬಿ ಅವರ ಹಾಡು ಬರುತ್ತಿದ್ದರೆ, ಅದರೊಳಗೆ ಇದ್ದುಕೊಂಡು ಹಾಡ್ತಿದ್ದಾರೇನೋ ಅನ್ನುವಷ್ಟರ ಮಟ್ಟಿಗೆ ಚಿಕ್ಕಂದಿನಲ್ಲಿ ಭಾವಿಸಿದ್ದವನು ನಾನು. ಕನ್ನಡ ಸಿನಿಮಾದಲ್ಲಿ ಹಾಡುಗಳು ಅಂದರೆ ಎಸ್‌ಪಿಬಿ ಎನ್ನುವಷ್ಟರ ಮಟ್ಟಿಗೆ ಹುಚ್ಚು ಹಿಡಿಸಿದ್ದ ಅಪರೂಪದ ಗಾಯಕ.

ಇದನ್ನೂ ಓದಿ: ಸರಳತೆಯಲ್ಲಿ ಇಂದಿನ ಕಲಾವಿದರಿಗೆ ಎಸ್ ಪಿಬಿ ಮಾದರಿ: ಗುರುಕಿರಣ್ ನೆನಪಿಸಿಕೊಂಡಂತೆ…

ನಾನು ಬರೆದ ‘ಗರನೆ.. ಗರಗರನೆ…’, ‘ಚಾಮುಂಡಿ ತಾಯಿಯಾಣೆ…’ ಹೀಗೆ ಸುಮಾರು ಐವತ್ತಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿ, ಅದನ್ನು ಜನರ ಬಾಯಲ್ಲಿ ಗುನುಗುಡುವಂತೆ ಮಾಡಿದ ಮಹಾನ್ ಗಾಯಕ. ಎದುರು ಸಿಕ್ಕಾಾಗಲೆಲ್ಲ ಆತ್ಮೀಯ ಅಪ್ಪುಗೆಯ ಮೂಲಕ ಪ್ರೀತಿ ತೋರಿಸುತ್ತಿದ್ದ, ಹೊಸಬರನ್ನು ಪ್ರೋತ್ಸಾಾಹಿಸುತ್ತಿದ್ದಂತಹ ಎಸ್‌ಪಿಬಿ ನಮ್ಮ ನಡುವೆಯೇ ಸಾಧನೆಯ ಮೇರು ಶಿಖರವೇರಿದ ಸಾಧಕ. ಇವತ್ತು ಅವರಿಲ್ಲ ಅಂದರೆ, ನಂಬಲಾಗುತ್ತಿಲ್ಲ. ಸಂಗೀತ ಕ್ಷೇತ್ರದ ಮಟ್ಟಿಗೆ ನಿಜವಾದ ಅರ್ಥದಲ್ಲಿ ಇದು ತುಂಬಲಾರದ ನಷ್ಟ. ಕನ್ನಡದ ಮಟ್ಟಿಗೆ ಎಸ್‌ಪಿಬಿ ದೈಹಿಕವಾಗಿ ಇಲ್ಲದಿದ್ದರೂ, ಹಾಡುಗಳ ಮೂಲಕ ಯಾವತ್ತೂ ಜೀವಂತವಾಗಿರುತ್ತಾರೆ. ಕನ್ನಡ ಚಿತ್ರರಂಗ, ಸಂಗೀತ ಕ್ಷೇತ್ರ, ಕೇಳುಗರು ಎಲ್ಲರಿಗೂ ಹೃದಯ ಭಾರವಾಗಿದೆ’

– ಕವಿರಾಜ್, ಚಿತ್ರ ಸಾಹಿತಿ

Advertisement

ಇದನ್ನೂ ಓದಿ: ‘ಪ್ರೇಮದ ಹೂಗಾರ ಈ ಹಾಡುಗಾರ… ಹೂ ನೀಡುತಾನೆ.. ಮುಳು ಬೇಡುತಾನೆ..’: ಹೋಗಿ ಬನ್ನಿ SPB

ಇದನ್ನೂ ಓದಿ: ಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ

Advertisement

Udayavani is now on Telegram. Click here to join our channel and stay updated with the latest news.

Next