Advertisement

12 ದಿನಗಳ ಕಾವೇರಿ ಮಹಾಪುಷ್ಕರಕ್ಕೆ ತೆರೆ

07:25 AM Sep 24, 2017 | |

ಶ್ರೀರಂಗಪಟ್ಟಣ: ಕಳೆದ 12 ದಿನಗಳಿಂದ ಕಾವೇರಿ ನದಿಯಲ್ಲಿ ನಡೆಯುತ್ತಿದ್ದ ಕಾವೇರಿ ಮಹಾಪುಷ್ಕರಕ್ಕೆ ಶನಿವಾರ ಮಧ್ಯಾಹ್ನ
3 ಗಂಟೆಗೆ ತೆರೆ ಬಿತ್ತು. ಕಾವೇರಿ ಪುಷ್ಕರ ಸ್ನಾನಕ್ಕೆ ಅಂತಿಮ ದಿನವಾದ ಶನಿವಾರ ಆಂಧ್ರ, ಕೇರಳ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಸೇರಿ ದೇಶದ ವಿವಿಧ ಭಾಗಗಳಿಂದ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರು.

Advertisement

ಪುಷ್ಕರ ಮಹೋತ್ಸವ ಹಿನ್ನೆಲೆಯಲ್ಲಿ ರಂಗನಾಥಸ್ವಾಮಿ ದೇವಾಲಯದ ಬಳಿಯ ಸ್ನಾನಘಟ್ಟ, ಗೋಸಾಯಿಘಾಟ್‌, ಪಶ್ಚಿಮವಾಹಿನಿ ಹಾಗೂ ನಿಮಿಷಾಂಭ ದೇವಾಲಯದ ಕಾವೇರಿ ನದಿ ದಡದಲ್ಲಿ ಭಕ್ತರಿಗೆ ಸ್ನಾನ ಮಾಡಲು ಅವಕಾಶ ಮಾಡಲಾಗಿತ್ತು. ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್‌ ಶರ್ಮಾ ನೇತೃತ್ವದಲ್ಲಿ ಕಾವೇರಿ ನದಿಗೆ ಮಹಾಮಂಗಳಾರತಿ ಮಾಡುವುದರೊಂದಿಗೆ ಕಾವೇರಿ ಪುಷ್ಕರ ಕೊನೆಗೊಂಡಿತು.

ಹಿರೇಮಗಳೂರು ಕಣ್ಣನ್‌ ಅವರು ಕಾವೇರಿ ರಕ್ಷಣೆ ಹಾಗೂ ವೈದಿಕ ಮಿಲನ ಕುರಿತು ಉಪನ್ಯಾಸ ನಡೆಸಿಕೊಟ್ಟರು. ಭಕ್ತರಿಗೆ ಹಲವೆಡೆ ಮಧ್ಯಾಹ್ನದ ಉಚಿತ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next