Advertisement

ಸ್ಥಳೀಯ ಚುನಾವಣೆ ಸೋಲು: ಬಿಜೆಪಿ ವಿರುದ್ಧವೇ ಅರುಣ್ ಸಿಂಗ್ ಗೆ ಕವಟಗಿಮಠ್ ದೂರು

11:56 AM Dec 29, 2021 | Team Udayavani |

ಹುಬ್ಬಳ್ಳಿ :  ಬೆಳಗಾವಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪರಾಜಿತ ಅಭ್ಯರ್ಥಿ ಮಹಾಂತೇಶ್‌ ಕವಟಗಿಮಠ್‌ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.

Advertisement

ಮಂಗಳವಾರ ಸಂಜೆ ಅರುಣ್‌ ಸಿಂಗ್‌ ಅವರನ್ನು ಖುದ್ದಾಗಿ ಭೇಟಿ ಮಾಡಿದ ಅವರು, ಜಾರಕಿಹೊಳಿ ಸೋದರರು ಹಾಗೂ ರಾಜ್ಯ ನಾಯಕತ್ವದ ಉದಾಸೀನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಾರಕಿಹೊಳಿ ಸೋದರರು ಲಕನ್‌ ಜಾರಕಿಹೊಳಿ ಅವರನ್ನು ಪಕ್ಷೇತರವಾಗಿ ಕಣಕ್ಕೆ ಇಳಿಸಿದರು. ಇದರಿಂದ ಮತದಾರರಲ್ಲಿ ಗೊಂದಲ ಸೃಷ್ಟಿಯಾಯ್ತು. ನಾಮಪತ್ರ ವಾಪಾಸ್‌ ಪಡೆಯುವಂತೆ ರಾಜ್ಯದ ಯಾವುದೇ ಹಿರಿಯ ನಾಯಕರು ಒತ್ತಡ ಹೇರದೇ ಮೌನಕ್ಕೆ ಶರಣಾದರು. ಹೀಗಾಗಿ ಅಧಿಕೃತ ಅಭ್ಯರ್ಥಿಯಾದ ನಾನೇ ಸೋಲುವಂತಾಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಸೋದರ ಪ್ರದೀಪ್‌ ಶೆಟ್ಟರ್‌ ಕೂಡಾ ಅರುಣ್‌ ಸಿಂಗ್‌ ಬಳಿ ಬೇಸರ ತೋಡಿಕೊಂಡಿದ್ದಾರೆ. ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿದ್ದರಿಂದ ನಾನು ಎರಡನೇ ಪ್ರಾಶಸ್ತ್ಯದ ಮತದಲ್ಲಿ ತಿಣುಕಾಡಿ ಗೆಲ್ಲುವಂತಾಯ್ತು ಎಂದು ಬೇಸರ ತೋಡಿಕೊಂಡಿದ್ದಾರೆ. ಬಿಜೆಪಿ ಕಾರ್ಯಕಾರಿಣಿಗೆ ಜಾರಕಿಹೊಳಿ ಸೋದರರು ಹಾಗೂ ಬಿ.ಎಸ್.ಯಡಿಯೂರಪ್ಪ ಗೈರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next