Advertisement

Kaup: ಉಚ್ಚಿಲ ದಸರಾ: ಐತಿಹಾಸಿಕ ದಾಖಲೆ ಬರೆದ ಸಾಮೂಹಿಕ ಕುಣಿತ ಭಜನೆ

01:08 AM Oct 06, 2024 | Team Udayavani |

ಕಾಪು: ಉಡುಪಿ ಉಚ್ಚಿಲ ದಸರಾ 2024 ಪ್ರಯುಕ್ತ ಜರಗಿದ ಸಾಮೂಹಿಕ ಕುಣಿತ ಭಜನೆಯು ಐತಿಹಾಸಿಕ ದಾಖಲೆ ಬರೆದಿದೆ.

Advertisement

ಶ್ರೀ ಮಹಾಲಕ್ಷ್ಮೀ  ದೇವಸ್ಥಾನದ ರಥಬೀದಿಯ ಸುತ್ತಲೂ ಏಕಕಾಲದಲ್ಲಿ ನಡೆದ ಸಾಮೂಹಿಕ ಕುಣಿತ ಭಜನೆ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 50ಕ್ಕೂ ಅಧಿಕ ತಂಡಗಳಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡರು. ದಸರಾ ರೂವಾರಿ ನಾಡೋಜ ಡಾ| ಜಿ. ಶಂಕರ್‌ ಅವರು ಭಜನೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕ್ಷೇತ್ರದ ಪ್ರಧಾನ ಅರ್ಚಕ ವೇ| ಕೆ.ವಿ. ರಾಘವೇಂದ್ರ ಉಪಾಧ್ಯಾಯ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಪ್ರಮುಖರಾದ ವಾಸುದೇವ ಸಾಲ್ಯಾನ್‌, ಗುಂಡು ಅಮೀನ್‌ ಮೊದಲಾದವರಿದ್ದರು.
ಸುನೀಲ್‌ ಸಾಲ್ಯಾನ್‌ ಮುಕ್ಕ ಅವರ ನಿರ್ಹಹಣೆಯಲ್ಲಿ ಜರಗಿದ ಕುಣಿತ ಭಜನಾ ಕಾರ್ಯಕ್ರಮವು ಶಿಸ್ತುಬದ್ಧವಾಗಿ ನಡೆದಿದೆ. ಭಜನಾ ತಂಡಗಳನ್ನು ಪ್ರೋತ್ಸಾಹಿಸಿ ಗೌರವಿಸಲಾಯಿತು.

ಇಂದು ಕುಸ್ತಿ ಸ್ಪರ್ಧೆ, ದಾಂಡಿಯಾ ನೃತ್ಯ
ಕಾಪು: ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 3ನೇ ವರ್ಷದ ಉಚ್ಚಿಲ ದಸರಾ – 2024 ಅಂಗವಾಗಿ ಅ. 6 ರಂದು ದ. ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆ ನಡೆಯಲಿದೆ.

ದೇವಸ್ಥಾನದ ಮುಂಭಾಗದ ಸರಸ್ವತಿ ಮಂದಿರ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಬೆಳಗ್ಗೆ 8ರಿಂದ ನಡೆಯುವ ಪುರುಷರ ಮತ್ತು ಮಹಿಳೆಯರ ವಿಭಾಗದ ಕುಸ್ತಿ ಪಂದ್ಯಾಟ ವನ್ನು ಡಾ| ಜಿ. ಶಂಕರ್‌ ಅವರು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಲಿದ್ದಾರೆ. ಸಂಜೆ 5ರಿಂದ 5.45ರ ತನಕ ಧಾರ್ಮಿಕ ಸಭೆ ನಡೆಯಲಿದ್ದು, ಎನ್‌.ಆರ್‌. ದಾಮೋದರ ಶರ್ಮಾ ಧಾರ್ಮಿಕ ಪ್ರವಚನ ನೀಡುವರು.

Advertisement

5.45ರಿಂದ 6.15ರ ತನಕ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆ ಯಲಿದೆ. 6.30ರಿಂದ 8 ಗಂಟೆ ತನಕ ಸಾರ್ವಜನಿಕರಿಗಾಗಿ ಸಾಮೂಹಿಕ ದಾಂಡಿಯಾ ನೃತ್ಯ ನಡೆಯಲಿದೆ. ರಾತ್ರಿ 8ರಿಂದ ಕುದ್ರೋಳಿ ಗಣೇಶ್‌ ಪ್ರಸ್ತುತ ಪಡಿಸುವ “ವಿಸ್ಮಯ ಜಾದೂ’ ಅಚ್ಚರಿ – ಹಾಸ್ಯ – ಮನರಂಜನೆಯ ಮ್ಯಾಜಿಕ್‌ ಪ್ರದರ್ಶನ ನಡೆಯಲಿದೆ.

ಅ. 6ರಂದು ಪೊಣ್ಣು ಪಿಲಿ ನಲಿಕೆ ಸ್ಪರ್ಧೆ
ಅ. 6ರಂದು ಮಧ್ಯಾಹ್ನ 2 ಕ್ಕೆ ಶಾಲಿನಿ ಜಿ. ಶಂಕರ್‌ ತೆರೆದ ಸಭಾಂಗಣದಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್‌ ಬ್ಯಾಂಕ್‌ ಪ್ರಾಯೋಜಕತ್ವದಲ್ಲಿ ಹೆಣ್ಣು ಮಕ್ಕಳಿಗೆ ಪೊಣ್ಣು ಪಿಲಿ ನಲಿಕೆ ಸ್ಪರ್ಧೆ ನಡೆಯಲಿದೆ. ಗುಂಪು ವಿಭಾಗದಲ್ಲಿ ಪ್ರಥಮ 25 ಸಾ. ರೂ., ದ್ವಿತೀಯ 20 ಸಾ.ರೂ., ತೃತೀಯ 15 ಸಾ.ರೂ. ಹಾಗೂ ವೈಯುಕ್ತಿಕ ವಿಭಾಗ ದಲ್ಲಿ ಪ್ರಥಮ 6 ಸಾ.ರೂ., ದ್ವಿತೀಯ 4 ಸಾ.ರೂ., ತೃತೀಯ 3 ಸಾ.ರೂ. ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಎಲ್ಲ ತಂಡಗಳಿಗೆ 5 ಸಾ.ರೂ. ಪ್ರೋತ್ಸಾಹ ಧನ ನೀಡುವುದಾಗಿ ಬ್ಯಾಂಕ್‌ ಅಧ್ಯಕ್ಷ, ಶಾಸಕ ಯಶ್‌ಪಾಲ್‌ ಸುವರ್ಣ ತಿಳಿಸಿದ್ದಾರೆ.

ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕೆ ಪ್ರಾತ್ಯಕ್ಷಿಕೆ
ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕೆಗಳ ಪ್ರಾತ್ಯಕ್ಷಿಕೆ ಗಮನ ಸೆಳೆಯುತ್ತಿದೆ. ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ, ನೇಕಾರಿಕೆ, ಕಮ್ಮಾರಿಕೆ, ಪಕ್ಷಿಗಳ ಪ್ರದರ್ಶನ, ಗೂಡುದೀಪ ತಯಾರಿಕೆ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ದೇವಸ್ಥಾನದ ವಾದ್ಯ ಪರಿಕರಗಳ ಪ್ರದರ್ಶನ, ಬುಟ್ಟಿ ತಯಾರಿಕೆ, ಗುಡಿ ಕೈಗಾರಿಕೆ, ಎತ್ತಿನ ಗಾಣ ಸಹಿತ ಅಲೆ ಮನೆ ಕಬ್ಬಿನ ಹಾಲು, ಮೀನುಗಾರಿಕೆ ಇಲಾಖೆ ಮೀನುಗಳ ಪ್ರದರ್ಶನ ಜನಾಕರ್ಷಣೆಯ ಕೇಂದ್ರ ವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next