Advertisement

Kaup: ಶ್ರೀ ಹೊಸ ಮಾರಿಗುಡಿ: ಮಹಾಚಂಡಿಕಾಯಾಗ, ದರ್ಶನ ಸೇವೆ ಸಂಪನ್ನ

01:08 AM Oct 09, 2024 | Team Udayavani |

ಕಾಪು: ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಅ. 8ರಂದು ಮಹಾಚಂಡಿಕಾ ಯಾಗದ ಪೂರ್ಣಾಹುತಿ ಹಾಗೂ ದರ್ಶನ ಸೇವೆ ನಡೆಯಿತು.

Advertisement

ವೇ| ಮೂ| ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ಮಾರ್ಗದರ್ಶನ, ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯ ಮತ್ತು ಋತಿಜ್ವರ ಸಹಕಾರದೊಂದಿಗೆ ಮಹಾ ಚಂಡಿಕಾಯಾಗದ ಪೂರ್ಣಾಹುತಿ ಮತ್ತು ಪಲ್ಲಪೂಜೆ ನಡೆಯಿತು. ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ, ಸಂಜೆ ಮಾರಿಯಮ್ಮ ದೇವಿ ದರ್ಶನ ಸೇವೆ ನಡೆಯಿತು.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ತಹಶೀಲ್ದಾರ್‌ ಡಾ| ಪ್ರತಿಭಾ ಆರ್‌., ಹೊಸ ಮಾರಿಗುಡಿ ದೇವಸ್ಥಾನದ ಆಡಳಿತಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್‌, ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಗೌರವಾಧ್ಯಕ್ಷ ಅನಿಲ್‌ ಬಲ್ಲಾಳ್‌, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ರಮೇಶ್‌ ಹೆಗ್ಡೆ ಕಲ್ಯ, ನಡಿಕೆರೆ ರತ್ನಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next