Advertisement

ಉದ್ಯಾವರ ಸಂಪಿಗೆನಗರದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ 7 ಮಂದಿಯ ಬಂಧನ

08:09 PM Jul 05, 2021 | Team Udayavani |

ಕಟಪಾಡಿ: ಉದ್ಯಾವರ ಸಂಪಿಗೆನಗರ ಬಬ್ಬರ್ಯ ಜಡ್ಡು ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಏಳು ಆರೋಪಿಗಳ ನ್ನು ಹುಂಜ ಕೋಳಿಗಳ ಸಹಿತ ವಶಕ್ಕೆ ಪಡೆದ ಘಟನೆ ನಡೆದಿದೆ.

Advertisement

ಕೋಳಿ ಅಂಕವನ್ನು ನಡೆಸುತ್ತಿರುವುದಾಗಿ ದೊರೆತ ಮಾಹಿತಿಯಂತೆ ನ್ಯಾಯಾಲಯದ ಅನುಮತಿ ಪಡೆದು ಪಿ.ಎಸೈ. ರಾಘವೇಂದ್ರ, ಠಾಣಾ ಅಪರಾಧ ವಿಭಾಗದ ಪಿ.ಎಸ್.ಐ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದು ರಾಜ್ಯ ಸರಕಾರದ ಕೋವಿಡ್-19 ನಿಯಮವನ್ನು ಉಲ್ಲಂಘಿಸಿ ಕೋಳಿ ಅಂಕ ಜೂಜಾಟ, ಆಡುತ್ತಿದ್ದ ರವಿ ಕುಮಾರ, ಪ್ರಮೋದ, ಪುಷ್ಪರಾಜ, ಪ್ರದೀಪ, ಗಣೇಶ, ಅರವಿಂದ, ಧನರಾಜ ಸುವರ್ಣ,  7 ಹುಂಜ ಹಾಗೂ ಜೂಜಾಟಕ್ಕೆ ಬಳಸಿದ 9870/- ನಗದನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಇದನ್ನೂ ಓದಿ : ಮೇಕೆದಾಟು ಯೋಜನೆ ಜಾರಿ ಮಾಡಿಯೇ ಸಿದ್ದ : ಸಚಿವ ಬೊಮ್ಮಾಯಿ ಅಚಲ ವಿಶ್ವಾಸ

Advertisement

Udayavani is now on Telegram. Click here to join our channel and stay updated with the latest news.

Next