Advertisement

Kaup: ಪಾಂಗಾಳ: ಕರು ಅಕ್ರಮ ಸಾಗಾಟ ಪತ್ತೆ

01:25 AM Oct 26, 2024 | Team Udayavani |

ಕಾಪು: ಮಿನಿ ಟೆಂಪೋವೊಂದರ‌ಲ್ಲಿ ಅಕ್ರಮವಾಗಿ ಗಂಡು ಕರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕಾಪು ಪೊಲೀಸರು ಅ. 25ರಂದು ಪತ್ತೆ ಹಚ್ಚಿದ್ದಾರೆ. ರಾ.ಹೆ. 66ರ ಪಾಂಗಾಳ ಕಡೆಯಿಂದ ಕಾಪು ಕಡೆಗೆ ಬರುತ್ತಿದ್ದ ಟೆಂಪೋವನ್ನು ಪೊಲೀಸರು ತಪಾಸಣೆಗೆಂದು ನಿಲ್ಲಿಸಿದಾಗ ಅದರಲ್ಲಿ ಐದು ಗಂಡು ಕರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Advertisement

ಈ ವೇಳೆ ಟೆಂಪೋ ಚಾಲಕ ಬಸಪ್ಪನನ್ನು ವಿಚಾರಣೆಗೊಳಪಡಿಸಿದಾಗ ಅದನ್ನು ಮಲ್ಲಾರು ಪಕೀರಣಕಟ್ಟೆಯ ಗಫೂರ್‌ ಅವರ ಬಳಿಗೆ ಸಾಗಾಟ ಮಾಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ. ಚಾಲಕನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಬಳಿಕ ಗಫೂರ್‌ನನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next