Advertisement

ಕಾಪು ಪುರಸಭೆ: ಸಮುದ್ರ ತಟದಲ್ಲಿ ಸ್ವಚ್ಛತಾ ಅಭಿಯಾನ

11:23 PM May 29, 2019 | sudhir |

ಕಾಪು: ಕಾಪು ಪುರಸಭೆಯ ನೇತೃತ್ವದಲ್ಲಿ ದೇಸಿ ಕ್ರೂ ಸಂಸ್ಥೆಯ ಸಹಯೋಗದೊಂದಿಗೆ ಕಾಪು ಲೈಟ್ ಹೌಸ್‌ನಿಂದ 1 ಕಿ.ಮೀ. ದೂರದವರೆಗೆ ಸಮುದ್ರ ತಟದ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು.

Advertisement

ದೇಸಿ ಕ್ರೂ ಸಂಸ್ಥೆಯ ವ್ಯವಸ್ಥಾಪಕರಾದ ಗಣೇಶ್‌ ಕಾಮತ್‌, ಯಶಸ್ವಿ ಕೋಟ್ಯಾನ್‌, ವಿನೋದ್‌ ಮತ್ತು ರೂಪಲತಾ ಇವರ ನೇತೃತ್ವದಲ್ಲಿ ಸುಮಾರು 125 ಸಿಬಂದಿಗಳು ಕಾಪು ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ಕಾಪು ಪುರಸಭಾ ಮುಖ್ಯಾಧಿಕಾರಿ ರಾಯಪ್ಪ, ಪರಿಸರ ಅಭಿಯಂತರ ರವಿಪ್ರಕಾಶ್‌, ಹಿರಿಯ ಆರೋಗ್ಯ ನಿರೀಕ್ಷಕ ದಿನೇಶ್‌, ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು.

ಸುಮಾರು ಒಂದು ಗಂಟೆ ಕಾಲ ಪ್ಲಾಸ್ಟಿಕ್‌ ಬಾಟಲ್, ಪ್ಲಾಸ್ಟಿಕ್‌ ಕವರ್‌ ಇತ್ಯಾದಿಗಳನ್ನು ಸಂಗ್ರಹಿಸಿ, ಬೇರ್ಪಡಿಸಿ ವಿಲೇವಾರಿ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next