ಕಾಪು: ಶಾಸಕ ಲಾಲಾಜಿ ಆರ್. ಮೆಂಡನ್ ಅವರ ವಿಶೇಷ ಮುತುವರ್ಜಿಯಡಿಯಲ್ಲಿ ಕರ್ನಾಟಕ ಗೃಹ ಮಂಡಳಿ ಮೂಲಕ ಬಂಗ್ಲೆ ಮೈದಾನದ 3.42 ಎಕರೆ ಜಮೀನಿನಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಪು ತಾಲೂಕು ಆಡಳಿತ ಸಂಕೀರ್ಣ ಕಟ್ಟಡ – ಮಿನಿ ವಿಧಾನ ಸೌಧವನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸರಕಾರದ ಎಲ್ಲಾ ಸೇವೆಗಳನ್ನೂ ಒಂದೇ ಸೂರಿನಡಿ ದೊರಕಿಸಿ ಕೊಡುವ ಉದ್ದೇಶದೊಂದಿಗೆ ನೂತನ ತಾಲೂಕುಗಳಾದ ಹೆಬ್ರಿ, ಬಂದೂರು, ಕಾಪು, ಬ್ರಹ್ಮಾವರ ತಾಲೂಕುಗಳಲ್ಲಿಯೂ ಮಿನಿ ವಿಧಾನ ಸೌಧ ನಿರ್ಮಾಣವಾಗಿರುವುದು ಪ್ರಶಂಸನೀಯವಾಗಿದೆ. ಕಾಪು ಮಿನಿ ವಿಧಾನ ಸೌಧ ನಿರ್ಮಾಣದಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಶ್ರಮ ಶ್ಲಾಘನೀಯವಾಗಿದ್ದು ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬ ಸಾರ್ವಜನಿಕರಿಗೂ ಉತ್ತಮ ಸೇವೆ ಒದಗಿಸುವುದು ಅಧಿಕಾರಿಗಳು ಮತ್ತು ಸಿಬಂದಿಗಳ ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, 2018ರಲ್ಲಿ ತಾಲೂಕು ರಚನೆಯಾಗುವಾಗ ತಹಶೀಲ್ದಾರ್ ಮತ್ತು ಅವರ ಅಗತ್ಯದ ಸಿಬಂದಿಗಳ ಸೇವೆಗೆ ಮಾತ್ರಾ ಸೀಮಿತವಾಗಿದ್ದ ಕಾಪು ತಾಲೂಕಿನಲ್ಲಿ ಐದು ವರ್ಷದೊಳಗೆ ಸುಸಜ್ಜಿತವಾದ ಮಿನಿ ವಿಧಾನಸೌಧ ಸಹಿತವಾಗಿ ತಾಲೂಕಿಗೆ ಅವಶ್ಯವಾಗಿರಬೇಕಾದ ಬಹುತೇಕ ಇಲಾಖೆಗಳು ಮತ್ತು ಕಚೇರಿಗಳು ಕಾರ್ಯ ನಿರ್ವಹಿಸುವಂತಾಗಿದೆ. ಇಲ್ಲಿ ಜನರಿಗೆ ಒಂದೇ ಸೂರಿನಲ್ಲಿ ಎಲ್ಲಾ ಸೇವೆಗಳನ್ನೂ ಒದಗಿಸುವುದೇ ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ ಎಂದರು.
ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಹಾಕೆ, ಕರ್ನಾಟಕ ಗೃಹಮಂಡಳಿ ಕಾರ್ಯಪಾಲಕ ಅಭಿಯಂತರೆ ಸಿ.ಕೆ. ಮಂಜುಳಾ, ತಾ.ಪಂ. ಕಾರ್ಯ ನಿರ್ವಹಣಾಽಕಾರಿ ನವೀನ್ ಕುಮಾರ್, ಶಿಕ್ಷಣ ಇಲಾಖೆ ಅಽಕಾರಿ ಚಂದ್ರೇಗೌಡ, ಉಪ ಖಜಾನಾಧಿಕಾರಿ ಪುಟ್ಟರಾಜು, ನೋಂದಣಾಽಕಾರಿ ಶ್ರೀಧರ್, ಎಡಿಎಲ್‌ಆರ್ ತಿಪ್ಪೇರಾಯ, ಗುತ್ತಿಗೆದಾರ ವಾಸುದೇವ ಶೆಟ್ಟಿ ಕಾಪು ಉಪಸ್ಥಿತರಿದ್ದರು.
ಸಮ್ಮಾನ, ಗೌರವಾರ್ಪಣೆ: ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಮಿನಿ ವಿಧಾನಸೌಧ ನಿರ್ಮಾಣದ ಗುತ್ತಿಗೆದಾರ ಕಾಪು ಶ್ರೀ ದೇವಿಪ್ರಸಾದ್ ಕನ್‌ಸ್ಟ್ರಕ್ಷನ್ ಪ್ರೈ. ಲಿ.ನ ಆಡಳಿತ ನಿರ್ದೇಶಕ ಕೆ. ವಾಸುದೇವ ಶೆಟ್ಟಿ, ವಿನ್ಯಾಸಗಾರ ಯೋಗೀಶ್, ಕರ್ನಾಟಕ ಗೃಹ ಮಂಡಳಿಯ ಅಽಕಾರಿಗಳಾದ ಸಿ.ಕೆ. ಮಂಜುಳ, ಸಹನಾ ಅವರನ್ನು ಸಮ್ಮಾನಿಸಲಾಯಿತು.
ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಸ್ವಾಗತಿಸಿದರು. ಪುರಸಭೆ ಮುಖ್ಯಾಧಿಕಾರಿ ಬಿ. ವೆಂಕಟೇಶ ನಾವುಡ ವಂದಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಮತ್ತು ಲೆಸ್ಟರ್ನ್ ಕ್ಲಾರೆನ್ಸ್ ಕರ್ನೇಲಿಯೋ ಕಾರ್ಯಜಕ್ರಮ ನಿರೂಪಿಸಿದರು.