ಕಾಪು: ತಾಲೂಕಿನಾದ್ಯಂತ ಗಾಳಿ-ಮಳೆ ಹೆಚ್ಚಾಗುತ್ತಿದ್ದು, ಜು.19ರ ಶುಕ್ರವಾರ ನೆರೆ ಭೀತಿ ಎದುರಾಗಿದೆ. ಮಜೂರು, ಉಳಿಯಾರು, ಜಲಂಚಾರು, ಬೆಳಪು, ಕುಂಜೂರು, ಎರ್ಮಾಳು, ಇನ್ನಂಜೆ, ಮೂಳೂರು, ಮಲ್ಲಾರು, ಉಳಿಯಾರಗೋಳಿ, ಪಾಂಗಾಳ ಪರಿಸರದಲ್ಲಿ ನೆರೆ ನೀರು ಉಕ್ಕಿ ಬರುತ್ತಿದ್ದು ನದಿ, ಹೊಳೆ ತೀರದ ಜನರಲ್ಲಿ ಆತಂಕ ಎದುರಾಗಿದೆ.
ಬೈಲು ಪ್ರದೇಶಗಳಲ್ಲಿನ ಹಲವಾರು ಮನೆಗಳು ಜಲಾವೃತಗೊಂಡಿದ್ದು, ಮನೆಯೊಳಗೂ ನೆರೆ ನೀರು ನುಗ್ಗಿದೆ.
ಕಾಪು – ಇನ್ನಂಜೆ, ಮೂಳೂರು – ಬೆಳಪು, ಮಜೂರು – ಪಾದೂರು, ಜಲಂಚಾರು – ಕರಂದಾಡಿ – ಕಲ್ಲುಗುಡ್ಡೆ ಸಹಿತ ಕೆಲವೆಡೆಗಳಲ್ಲಿ ನೆರೆ ನೀರಿನಿಂದಾಗಿ ರಸ್ತೆ ಸಂಪರ್ಕ ಸ್ಥಗಿತವಾಗಿದ್ದು ಮಳೆ ಹೆಚ್ಚಾದಲ್ಲಿ ನೀರಿನ ಹರಿವು ಇನ್ನಷ್ಡು ಹೆಚ್ಚುವ ಸಾಧ್ಯತೆಗಳಿವೆ.
ತಾಲೂಕು ಆಡಳಿತ, ಪುರಸಭೆ ಸಹಿತ ಸ್ಥಳೀಯಾಡಳಿತ ಸಂಸ್ಥೆಗಳು ಮಳೆ, ನೆರೆ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದ್ದು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.