Advertisement

Vitla: ಕಟ್ಟತ್ತಿಲ ಅಪಘಾತ: ಗಾಯಗೊಂಡಿದ್ದ ಯುವಕ ಸಾವು

08:55 PM Aug 21, 2024 | Team Udayavani |

ವಿಟ್ಲ: ವಿಟ್ಲ-ಸಾಲೆತ್ತೂರು-ಮುಡಿಪು ರಸ್ತೆಯ ಕಟ್ಟತ್ತಿಲ ಎಂಬಲ್ಲಿ ದ್ವಿಚಕ್ರ ವಾಹನ ಹಾಗೂ ಖಾಸಗಿ ಬಸ್‌ ನಡುವೆ ಆ.12ರಂದು ಢಿಕ್ಕಿ ಸಂಭವಿಸಿ, ಗಂಭೀರ ಗಾಯಗೊಂಡಿದ್ದ ಬೈಕ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸವಾರ ಸ್ಥಳೀಯ ನಿವಾಸಿ ಮುಝಂಬಿಲ್‌ ಅವರು ಮೃತಪಟ್ಟವರು.

Advertisement

ಘಟನೆಯಲ್ಲಿ ದ್ವಿಚಕ್ರ ವಾಹನಕ್ಕೆ ಹಾನಿಯಾಗಿದ್ದು, ಗಂಭೀರ ಗಾಯಗೊಂಡಿದ್ದ ಸವಾರ ಸ್ಥಳೀಯ ನಿವಾಸಿ ಮುಝಂಬಿಲ್‌ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ವಿಟ್ಲದಿಂದ ಮುಡಿಪು ತೆರಳುತ್ತಿದ್ದ ಖಾಸಗಿ ಬಸ್‌ ಹಾಗೂ ಮೆದು ಕಡೆ ತೆರಳುತ್ತಿದ್ದ ಆಕ್ಟಿವಾ ನಡುವೆ ಅಪಘಾತ ಸಂಭವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next