ಪುಣೆ: ಸಾಂಸ್ಕೃತಿಕ ನಗ ರಿಯ ತುಳು ಕನ್ನಡಿಗರ ಆಸ್ತಿಕ ಭಕ್ತರ ಶ್ರಧಾª ಕೇಂದ್ರವಾದ ಕಾತ್ರಜ್ ಸಚ್ಚಾಯಿ ಮಾತಾ ನಗರದ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಸನ್ನಿಧಾನದಲ್ಲಿ ಮಕರ ಸಂಕ್ರಾಂತಿ ಉತ್ಸವವು ಜ. 14ರಂದು ಸಂಜೆ ಅಪರಾಹ್ನ 4ರಿಂದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಮಕರ ಸಂಕ್ರಮಣದ ಈ ಶುಭ ದಿನದಂದು ಪುಣೆ ಕಾತ್ರಜ್ ಅಯ್ಯಪ್ಪ ದೇವಸ್ಥಾನದಲ್ಲಿ ಪ್ರತಿ ವರ್ಷವೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ದೇವಸ್ಥಾನದ ಪ್ರಧಾನ ಅರ್ಚಕ ರಾದ ವೇದಮೂರ್ತಿ ಹರೀಶ ಭಟ್ ಅವರ ನೇತೃತ್ವದಲ್ಲಿ ಕ್ಷೇತ್ರದ ಆರಾಧ್ಯ ದೇವರಾದ ಶ್ರೀ ಅಯ್ಯಪ್ಪ ಸ್ವಾಮಿಗೆ ಹಾಗೂ ಪರಿವಾರ ದೇವರಿಗೆ ವಿಶೇಷ ಪೂಜೆ ಮತ್ತು ಮಹಾಪೂಜೆ, ಮಂಗಳಾರತಿ ಜರಗಿತು.
ಇರುಮುಡಿ ಕಟ್ಟಿ ಶಬರಿಮಲೆ ಯಾತ್ರೆ ಕೈಗೊಂಡ ಶೇಖರ್ ಗುರು ಸ್ವಾಮಿ ಅವರ ನೇತೃತ್ವದಲ್ಲಿ ಪಡಿಪೂಜೆ ಜರಗಿತು. ಮಹಿಳಾ ವಿಭಾಗದವರಿಂದ ಮಕರ ಸಂಕ್ರಮಣದ ಪರ್ವ ಕಾಲದಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬಂದಿರುವ ಅರಸಿನ ಕುಂಕುಮ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು . ಸಾಂಸ್ಕೃತಿಕ ಕಾರ್ಯಕ್ರಮವಾಗಿ ಭಕ್ತ ವೃಂದದವರಿಂದ ಭಜನೆ, ಶ್ರೀಮತಿ ಜಶ್ವಿತಾ ಕೃಷ್ಣ ಇವರಿಂದ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಜೆ 6.45 ರಿಂದ ಶ್ರೀ ಕ್ಷೇತ್ರ ಶಬರಿಮಲೆಯ ಜ್ಯೋತಿ ದರ್ಶನದ ನೇರ ಪ್ರಸಾರವನ್ನು ದೇವಸ್ಥಾನದಲ್ಲಿ ಹಾಕಲಾದ ವಿಶಾಲ ಪರದೆಯಲ್ಲಿ ಸೇರಿದ ನೂರಾರು ಸಂಖ್ಯೆಯ ಅಯ್ಯಪ್ಪ ಭಕ್ತರು ನೋಡಿ ಕಣ್ತುಂಬಿಸಿಕೊಂಡರು.
ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ವೇದಘೋಷರಿದೊಂದಿಗೆ ಜ್ಯೋತಿಯನ್ನು ಕಂಡು ಪುನೀತ ರಾದರು. ಇದೆ ಸಂದರ್ಭದಲ್ಲಿ ಶಬರಿಮಲೆಗೆ 10ರಿಂದ 50ರ ವರೆಗಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕೊಡಬೇಕೆಂಬ ನಿರ್ಣಯದ ವಿರುದ್ದ ಪಂದಳ ರಾಜರ ಆದೇಶದಂತೆ ಧರ್ಮ ಫೌಂಡೇಶನ್ ದೇಶಾದ್ಯಂತ ಹಮ್ಮಿ ಕೊಂಡಿದ್ದ ಧರ್ಮರûಾ ಜ್ವಾಲ ಜ್ಯೋತಿಯನ್ನು ಕ್ಷೇತ್ರದಲ್ಲಿ ಸೇರಿದ ಅಸಂಖ್ಯಾತ ಭಕ್ತರು ಬೆಳಗಿಸಿದರು.
ಪೂಜಾ ಕಾರ್ಯಕ್ರಮದ ಅನಂತರ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರಗಿತು. ಅನ್ನಸಂತರ್ಪಣೆಯು ಪ್ರಶಾಂತ್ ಆಳ್ವ ಮತ್ತು ಪ್ರವೀಣ್ ಆಳ್ವರ ಪ್ರಾಯೋಜಕತ್ವದಲ್ಲಿ ನಡೆಯಿತು. ಈ ಪುಣ್ಯ ಕಾರ್ಯದಲ್ಲಿ ಪುಣೆಯ ತುಳು ಕನ್ನಡಿಗರು, ಅಯ್ಯಪ್ಪ ಸ್ವಾಮಿ ಭಕ್ತರು, ಮಹಿಳೆಯರು, ಮಕ್ಕಳು ಭಾಗವಹಿಸಿ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ಅಯ್ಯಪ್ಪ ಸ್ವಾಮೀ ಕೃಪೆಗೆ ಪಾತ್ರರಾದರು. ಕ್ಷೇತ್ರ ದಲ್ಲಿ ಇರುಮುಡಿ ಕಟ್ಟಿದ ಸ್ವಾಮಿಗಳು ಶಬರಿಮಲೆ ಯಾತ್ರೆ ಕೈಗೊಂಡರು.
ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಈ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು. ಗಣ್ಯರನ್ನು ವಿಶ್ವಸ್ತ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಗೌರವಿಸಿದರು.
ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನ ಕಾತ್ರಜ್‌ನ ಅಯ್ಯಪ್ಪ ಸ್ವಾಮೀ ಸೇವಾ ಸಂಘದ ವಿಶ್ವಸ್ತ ಮಂಡಳಿಯ ಅಧ್ಯಕ್ಷರಾದ ಸುಭಾಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘ ಮಹಿಳಾ ಮಂಡಳಿಯ ಅಧ್ಯಕ್ಷೆ ಮತ್ತು ಪದಾಧಿಕಾರಿಗಳು, ಸರ್ವ ಭಕ್ತರ ಸಹಕಾರದೊಂದಿಗೆ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಿದವು.
ವರದಿ: ಹರೀಶ್ ಮೂಡಬಿದ್ರಿ