Advertisement
ಕಟಪಾಡಿ: ಕಟಪಾಡಿ ಪೇಟೆಯಾದ್ಯಂತ ಎಲ್ಲೆಡೆ ಪಾರ್ಕಿಂಗ್ ಸಮಸ್ಯೆಯು ತಲೆದೋರಿದ್ದು, ಕಟಪಾಡಿ ಬಸ್ ನಿಲ್ದಾಣಕ್ಕೆ ಬಸ್‌ಬರು ತ್ತಿ ಲ್ಲ. ನಿತ್ಯ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ ದಾಟುವ ಮತ್ತು ಗ್ರಾಹಕರು ಪಾರ್ಕಿಂಗ್ ವಾಹನಗಳ ಎಡೆಯಲ್ಲಿ ನುಸುಳಿಕೊಂಡು ಹೋಗಿ ಖರೀದಿಸುವ ಸಮಸ್ಯೆಯನ್ನು ಅನುಭವಿಸುವಂತಾಗಿದೆ.
Related Articles
Advertisement
ಕಟಪಾಡಿ ಪೇಟೆಯೊಳಗಿನ ಬಸ್ ತಂಗುದಾಣಕ್ಕೆ ಬಸ್ ಬರಬೇಕು. ಕಾರು ಪಾರ್ಕಿಂಗ್‌ಗೂ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕಿದೆ. ಇಲಾಖಾ ಧಿಕಾರಿಗಳು ತಕ್ಕ ಕ್ರಮ ಕೈಗೊಳ್ಳಬೇಕಿದ್ದು, ಕಟಪಾಡಿಯಲ್ಲಿ ಘೋಷಣೆಯಾಗಿರುವ ಮೇಲ್ಸೇತುವೆ ಶೀಘ್ರವಾಗಿ ನಿರ್ಮಾಣಗೊಂಡಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದು ಕಟಪಾಡಿ ಕಾರು ಚಾಲಕ- ಮಾಲಕರ ಸಂಘದ ಅಧ್ಯಕ್ಷ ರಮೇಶ್ ಕೋಟ್ಯಾನ್ ಅವರ ಅಭಿ ಪ್ರಾಯವಾಗಿದೆ.
ಸ್ಥಳೀಯ ಕಟಪಾಡಿ ಗ್ರಾ.ಪಂ. ಮತ್ತು ಕಾಪು ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಈ ಸಮಸ್ಯೆಗಳನ್ನು ಸೌಹಾರ್ದ ಯುತವಾಗಿ ಬಗೆಹರಿಸಬೇಕಾದ ಅಗತ್ಯವಿದೆ.
ವಾಹನಗಳ ಪಾರ್ಕಿಂಗ್ ಸಮಸ್ಯೆಕಟಪಾಡಿ ಪೇಟೆಯಲ್ಲಿನ ಬಸ್ ನಿಲ್ದಾಣದ ಸ್ಥಳದಲ್ಲಿ ವಾಹನ ಪಾರ್ಕಿಂಗ್ ಮಾಡಿ ತೆರಳುವುದರಿಂದ ಪಾರ್ಕಿಂಗ್ ಸಮಸ್ಯೆ ಮತ್ತು ಬಸ್ ನಿಲ್ದಾಣಕ್ಕೆ ಬಸ್ಸೇ ಬಾರದಂತಹ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣಗೊಂಡಂತಾಗಿದೆ. ವ್ಯಾಪಾರ ಸಂಕೀರ್ಣದ ಮುಂಭಾಗದಲ್ಲಿ ಎಲ್ಲೆಂದರಲ್ಲಿ ಎರ್ರಾಬಿರ್ರಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಗ್ರಾಹಕರು ಸಮಸ್ಯೆಯನ್ನು ಎದುರಿಸುವಂತಾಗಿದೆ. ಮುಂಬರುವ ದಿನಗಳಲ್ಲಿ ಹಬ್ಬಗಳು, ಶುಭ ಸಮಾರಂಭಗಳು ನಡೆಯಲಿರುವ ಕಾರಣ ಸಮಸ್ಯೆಯು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ. ಇತರ ಸಮಸ್ಯೆಗಳೇನು?
– ವಯೋವೃದ್ಧರು, ಮಕ್ಕಳು, ಮಹಿಳೆಯರು, ಅಂಗವಿಕಲರು, ಬಸ್‌ಗಾಗಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ಹೆದ್ದಾರಿಯನ್ನು ದಾಟುವಂತಹ ಅನಿವಾರ್ಯ ಪರಿಸ್ಥಿತಿ ಇದ್ದು ಅಪ ಘಾತ ಸಂಭವಿಸುವ ಸಾಧ್ಯತೆ ಇರುತ್ತದೆ.
– ಬಸ್ ಪೇಟೆಯೊಳಕ್ಕೆ ಬಾರದೇ ಕೆಲವು ವ್ಯಾಪಾರಸ್ಥರು ಗ್ರಾಹಕರನ್ನು ಕಳೆದುಕೊಂಡಂತಾಗಿದೆ. ಬಸ್‌ಸ್ಟ್ಯಾಂಡ್ ಉಳಿಯಲಿ
ಉದ್ಯೋಗಕ್ಕಾಗಿ ಮತ್ತು ಬೇರೆ ಊರುಗಳಿಗೆ ತೆರಳುವ ಮಂದಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಲಾಕ್ ಹಾಕಿ ತೆರಳುತ್ತಾರೆ. ಕಟಪಾಡಿ ಬಸ್‌ಸ್ಟ್ಯಾಂಡ್ ಹಾಗೆಯೇ ಉಳಿಯಲಿ. ಖಾಸಗಿ ವಾಹನಗಳ ಪಾರ್ಕಿಂಗ್ ಸ್ಥಳವಾಗದಿರಲಿ .
-ವೈ. ರಂಜನ್ ಹೆಗ್ಡೆ, ಅಧ್ಯಕ್ಷರು, ವರ್ತಕರ ಸಂಘ ಕಟಪಾಡಿ ಸೂಕ್ತ ಕಾನೂನು ಕ್ರಮ
ಕಟಪಾಡಿ ಪೇಟೆಯೊಳಗೆ ಬಸ್‌ಬರುವಲ್ಲಿ ಅನುಕೂಲತೆ ಕಲ್ಪಿಸಲು ಅನಧಿಕೃತ ಪಾರ್ಕಿಂಗ್‌ಗೆ ಕಡಿವಾಣ ಹಾಕಲಾಗುತ್ತದೆ. ಪಾರ್ಕಿಂಗ್ ಸಮಸ್ಯೆ ಮತ್ತೂ ಮುಂದುವರಿದಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
-ರಾಘವೇಂದ್ರ, ಪಿ.ಎಸ್.ಐ. ಕಾಪು ಪೊಲೀಸ್ ಠಾಣೆ ಸಮಾಲೋಚನ ಸಭೆ
ಸಮಸ್ಯೆಯ ಪರಿಹಾರಕ್ಕೆ ಕೂಡಲೇ ಮತ್ತೊಮ್ಮೆ ಸಾರ್ವಜನಿಕರು, ಇಲಾಖಾಧಿಕಾರಿಗಳೊಂದಿಗೆ ಸಮಾಲೋಚನ ಸಭೆ ನಡೆಸಲಾಗುತ್ತದೆ. ಲಾಕ್‌ಡೌನ್ ಮುಂಚಿತವಾಗಿ ಕೈಗೊಂಡಂತೆ ಸೂಕ್ತ ಸುರಕ್ಷಾ ಕ್ರಮಗಳೊಂದಿಗೆ ಬಸ್‌ಕಟಪಾಡಿ ಬಸ್‌ನಿಲ್ದಾಣಕ್ಕೆ ಬರುವಲ್ಲಿ ಮತ್ತು ಪಾರ್ಕಿಂಗ್ ಸಮಸ್ಯೆ ನೀಗಿಸುವಲ್ಲಿ ಪ್ರಯತ್ನಿಸಲಾಗುತ್ತದೆ .
– ಮಮತಾ ವೈ. ಶೆಟ್ಟಿ, ಪಿ.ಡಿ.ಒ., ಕಟಪಾಡಿ ಗ್ರಾ.ಪಂ. -ವಿಜಯ ಆಚಾರ್ಯ ಉಚ್ಚಿಲ