Advertisement

ಬಾಲಕಿಯ ಕೊಲೆ, ಅಪಹರಣ: ವಿಶೇಷ ಪೊಲೀಸ್‌ ಅಧಿಕಾರಿ ಅರೆಸ್ಟ್‌

12:36 PM Feb 10, 2018 | Team Udayavani |

ಜಮ್ಮು : ಕಳೆದ ತಿಂಗಳಲ್ಲಿ ಕಥುವಾ ಜಿಲ್ಲೆಯಲ್ಲಿ ನಡೆದಿದ್ದ ಎಂಟು ವರ್ಷದ ಬಾಲಕಿಯ ಅಪಹರಣ ಮತ್ತು ಕೊಲೆಯಲ್ಲಿ ಶಾಮೀಲಾದ ಆರೋಪದ ಮೇಲೆ ವಿಶೇಷ ಪೊಲೀಸ್‌ ಅಧಿಕಾರಿಯೋರ್ವರನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

Advertisement

ಕುದುರೆಗಳನ್ನು ಮೇಯಿಸಲು ಹೋಗಿದ್ದ  ಅಪಹೃತ ಬಾಲಕಿಯ ಶವವು ಒಂದು ವಾರದ ಬಳಿಕ, ಜನವರಿ 17ರಂದು ರಸ್ಸಾನಾ ಅರಣ್ಯದಲ್ಲಿ ಪತ್ತೆಯಾಗಿತ್ತು. 

ಬಾಲಕಿಯ ಅಪಹರಣ ಮತ್ತು ಕೊಲೆಯಲ್ಲಿ ಶಾಮೀಲಾದ ಆರೋಪದಲ್ಲಿ ಎಸ್‌ಪಿಓ ದೀಪಕ್‌ ಖಜೂರಿಯಾ ಅವರನ್ನು ಬಂಧಿಸಲಾಗಿದೆ ಎಂದು ಕ್ರೈಮ್‌ ಬ್ರಾಂಚಿನ ಅಡಿಶನಲ್‌ ಡೈರೆಕ್ಟರ್‌ ಜನರಲ್‌ ಆಲೋಕ್‌ ಪುರಿ ದೃಢಪಡಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next