Advertisement

ಕೆವಿಎಸ್‌ನಲ್ಲಿ ಕಥಾಸಂಗಮ

02:25 PM May 26, 2018 | |

ಸಿನಿಮಾ ಎಂದರೆ ಎರಡೂವರೆ ಗಂಟೆಗಳ ಕಾಲ ಒಂದೇ ಕತೆಯನ್ನು ಹೇಳುವುದು ಎಂಬ ಸೂತ್ರಕ್ಕೆ ಬದ್ಧವಾಗಿದ್ದಂಥ ಸಂದರ್ಭದಲ್ಲಿ ಪುಟ್ಟಣ್ಣ ಕಣಗಾಲ್‌ ಅವರು ಒಟ್ಟು  ಮೂರು ಕತೆಗಳನ್ನು ಸೇರಿಸಿ “ಕಥಾಸಂಗಮ’ ಸಿನಿಮಾ ಮಾಡಿದ್ದು ಸಾಧನೆ. “ಹಂಗು’, “ಅತಿಥಿ’ ಮತ್ತು “ಮುನಿತಾಯಿ’ ಎಂಬ ಮೂರು ಕಿರುಗತೆಗಳೇ ಕಥಾಸಂಗಮಕ್ಕೆ ಪ್ರೇರಣೆ.

Advertisement

ಈ ಮೂರರಲ್ಲಿ “ಹಂಗು’ ಕತೆಯನ್ನು ಬರೆದಿದ್ದು ಇತ್ತೀಚಿಗೆ ನಮ್ಮನ್ನಗಲಿದ ಸಾಹಿತಿ ಗಿರಡ್ಡಿ ಗೋವಿಂದರಾಜ ಅವರು. ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಕೆ.ವಿ.ಎಸ್‌ ಫಿಲಂ ಸ್ಟಡಿ ಸರ್ಕಲ್‌ನವರು “ಕಥಾಸಂಗಮ’ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಈ ಸಿನಿಮಾದ ಮೂರೂ ಕತೆಗಳು ಬಹಳ ಆಪ್ತವಾದುದು. ಸಿನಿಪ್ರಿಯರು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಬಹುದು. 

ಎಲ್ಲಿ?: ಕೆ.ವಿ.ಸುಬ್ಬಣ್ಣ ಆಪ್ತರಂಗಮಂದಿರ, ದಯಾನಂದ ಸಾಗರ್‌ ಕಾಲೇಜಿನ ಹತ್ತಿರ, ಕುಮಾರಸ್ವಾಮಿ ಲೇಔಟ್‌
ಯಾವಾಗ?: ಮೇ 27, ಭಾನುವಾರ ಸಂಜೆ 5.30
ಹೆಚ್ಚಿನ ಮಾಹಿತಿಗೆ: 8892795666

Advertisement

Udayavani is now on Telegram. Click here to join our channel and stay updated with the latest news.

Next