Advertisement

ಕಥಾ ಸಂಗಮ ನವ ಪ್ರತಿಭೆಗಳ ಮಹಾ ಸಂಗಮ!

10:00 AM Dec 03, 2019 | Naveen |

ಒಬ್ಬ ಪ್ರತಿಭಾವಂತ ಯುವ ನಿರ್ದೇಶಕನ ಆಗಮನವಾದರೆ ಆ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆಗಳು ಮೂಡಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ನೋಡ ಹೋದರೆ ರಿಷಬ್ ಶೆಟ್ಟಿ ಸಾರಥ್ಯದ ಕಥಾ ಸಂಗಮದಲ್ಲಿ ನವ ಪ್ರತಿಭೆಗಳ ಮಹಾ ಸಂಗಮವೇ ಸಂಭವಿಸಿದೆ. ರಿಷಬ್ ವರ್ಷಗಟ್ಟಲೆ ಹುಡುಕಾಟ ನಡೆಸಿ ಏಳು ಮಂದಿ ನವ ನಿರ್ದೇಶಕರುಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ತಮ್ಮದೇ ರೀತಿಯಲ್ಲಿ ಸಿನಿಮಾ ಜಗತ್ತಿನಲ್ಲಿ ಛಾಪು ಮೂಡಿಸೋ ಛಾತಿ ಹೊಂದಿರುವ ಇವರುಗಳೆಲ್ಲ ಪ್ರತಿಭಾವಂತರು. ಹೊಸಾ ಸೃಷ್ಟಿಯ ಹಂಬಲ, ಅದಕ್ಕೆ ಬೇಕಾದ ಕಸುವುಗಳನ್ನು ಧಾರಾಳವಾಗಿಯೇ ಹೊಂದಿರುವವರು. ಈ ಏಳು ಮಂದಿಯ ಕಥೆಗಳಿಂದ ಶೃಂಗಾರಗೊಂಡಿರುವ ಕಥಾ ಸಂಗಮ ಡಿಸೆಂಬರ್ 6ರಂದು ತೆರೆಗಾಣುತ್ತಿದೆ.

Advertisement

ಶ್ರೀದೇವಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮದ ಮೂಲಕ ಕಥಾ ಸಂಗಮದ ಮೂಲಕ ಕಿರಣ್ ರಾಜ್ ಕೆ, ಶಶಿಕುಮಾರ್ ಪಿ, ಚಂದ್ರಜಿತ್ ಎಲಿಯಪ್ಪ, ರಾಹುಲ್ ಪಿ.ಕೆ, ಜೈ ಶಂಕರ್, ಕರಣ್ ಅನಂತ್, ಜಮದಗ್ನಿ ಮನೋಜ್ ಎಂಬ ಏಳು ಮಂದಿ ಪ್ರತಿಭಾವಂತ ನಿರ್ದೇಶಕರುಗಳ ಆಗಮನವಾಗಿದೆ. ಇದು ರಿಷಬ್ ಅವರ ಬಹುಕಾಲದ ಹುಡುಕಾಟದ ಫಲವಾಗಿ ಸಂಭವಿಸಿರೋ ಏಳು ಕಥೆಗಳ, ಏಳು ಮಂದಿ ಪ್ರತಿಭೆಗಳ ಸಂಗಮ. ಇವರು ಸೃಷ್ಟಿದ ಏಳು ಕಥೆಗಳೂ ಕೂಡಾ ಒಂದಕ್ಕಿತ ಒಂದು ಭಿನ್ನವಾಗಿವೆ. ಪೈಪೋಟಿಗೆ ಬಿದ್ದಂತೆ ರೋಚಕವಾಗಿವೆಯಂತೆ.

ಹೀಗೆ ಕಥಾ ಸಂಗಮದಲ್ಲಿ ಏಳು ಮಂದಿ ನಿರ್ದೇಶಕರು ಏಳು ಸಿನಿಮಾಗಳನ್ನು ತೋರಿಸಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಕ್ರೈಂ ಅಂಶಗಳನ್ನೊಳಗೊಂಡ ಈ ಕಥೆಗಳೆಲ್ಲವೂ ನಮ್ಮ ನಡುವೆಯೇ ಇದ್ದು, ನಮ್ಮರಿವಿಗೆ ಬಾರದ ಅಪರೂಪದ ಎಳೆಗಳನ್ನು ಹೊಂದಿರುವಂಥವು. ಅದರಲ್ಲಿ ಕೆಲವಂತೂ ನಮ್ಮೊಳಗೆ ನಾವೇ ಪಾತಾಳಗರಡಿ ಹಾಕಿ ನೋಡಿಕೊಳ್ಳುವಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿವೆಯಂತೆ. ಅದರ ಗುಣ ಲಕ್ಷಣಗಳು ಟ್ರೇಲರ್‌ನಲ್ಲಿ ಕಾಣಿಸಿವೆ. ಅದನ್ನು ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ. ಇದೀಗ ಆದಷ್ಟು ಬೇಗಕನೆ ಕಥಾ ಸಂಗಮವನ್ನು ಕಣ್ತುಂಬಿಕೊಳ್ಳುವ ಕಾತರ ಊರಗಲಕ್ಕೆ ಹರಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next