Advertisement

ಕಟೀಲು ದೇವಸ್ಥಾನ: ದಾಖಲೆಯ 55 ವಿವಾಹ

05:26 AM Dec 31, 2018 | |

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರವಿವಾರ 45 ಜೋಡಿಗಳು ಸರಳ ವಿವಾಹದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಇದು ಈ ವರ್ಷದಲ್ಲಿ ಅತೀ ಹೆಚ್ಚಿನ ವಿವಾಹವಾಗಿದೆ. ಇದಲ್ಲದೆ ದೇಗುಲದ ಪರಿಸರದ ಸಭಾಭವನಗಳಲ್ಲಿ ಸುಮಾರು 10 ವಿವಾಹಗಳಿದ್ದವು.

Advertisement

ಮದುವೆಗಳಿಗಾಗಿ 2 ಕೌಂಟರ್‌ನ ವ್ಯವಸ್ಥೆ ಮಾಡಲಾಗಿತ್ತು. ನೋಂದಣಿಗೆ ವಿಶೇಷ ಕೌಂಟರ್‌ ಮಾಡಲಾಗಿತ್ತು. ದ. ಕನ್ನಡ, ಉಡುಪಿ, ಕಾಸರಗೋಡು ಅಲ್ಲದೆ ಮಡಿಕೇರಿಯಿಂದಲೂ ಜೋಡಿಗಳು ಆಗಮಿಸಿದ್ದರು. ಮದುವೆಗಳ ಸಂಖ್ಯೆ ಹೆಚ್ಚಾದುದರಿಂದ ಜನಸಂದಣಿ ಕೂಡ ಅಧಿಕವಿದ್ದು, ಸಂಚಾರಕ್ಕೆ ತೊಂದರೆಯಾಗದಂತೆ  ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ವಾಹನ ದಟ್ಟನೆಯ ನಿಯಂತ್ರಣಕ್ಕೆ ಖಾಸಗಿ ಟ್ರಾಫಿಕ್‌ ಹಾಗೂ ಭದ್ರತಾ ವ್ಯವಸ್ಥೆ ನಿಯೋಜಿಸಲಾಗಿತ್ತು. 

ಒಂದು ಸರಳ ವಿವಾಹಕ್ಕಾಗಿ ದೇವಸ್ಥಾನಕ್ಕೆ 300 ರೂ. ಹಾಗೂ ಇತರ ಖರ್ಚು ಸಹಿತ ಒಟ್ಟು 500 ರೂ. ವೆಚ್ಚ ತಗಲುತ್ತಿದೆ. ವಧೂವರರ ಮಾಲೆ ಹಾಗೂ ಕರಿಮಣಿ ಮದುವೆಯ ಪಾರ್ಟಿ ತರಬೇಕಿದೆ.

ಬೆಳಗ್ಗೆ 7.40ರಿಂದ ಆರಂಭವಾದ ಮದುವೆ ಮುಹೂರ್ತ 12.15ರ ತನಕ ಇತ್ತು. ದೇವರ ದರ್ಶನಕ್ಕೆ ಹಾಗೂ ಭೋಜನ ಶಾಲೆಗೆ ಹೋಗುವ ದಾರಿಯಾಗಿರುವುದರಿಂದ ಮದುವೆಯನ್ನು ದೇವಸ್ಥಾನದ ಸರಸ್ವತಿ ಸದನದಲ್ಲಿ ಮದುವೆಯ ಕೌಂಟರ್‌ ಮೂಲಕ ವ್ಯವಸ್ಥೆ ಮಾಡಲಾಗಿದೆ. 
 ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಅರ್ಚಕರು, ಶ್ರೀ ಕ್ಷೇತ್ರ ಕಟೀಲು

ರವಿವಾರ ಹಾಗೂ ಮದುವೆಗೆ ಆಗಮಿಸಿದ ಜನರ ಅನುಕೂಲಕ್ಕಾಗಿ ಮಧ್ಯಾಹ್ನ 12 ಗಂಟೆಗೆ ಅನ್ನಪ್ರಸಾದ ಆರಂಭಿಸಲಾಗಿದ್ದು 3 ಗಂಟೆಯ ತನಕ ಭೋಜನ ಮುಂದುವರಿದಿದೆ. 10 ಸಾವಿರ ಮಂದಿಗೆ ಮಧ್ಯಾಹ್ನ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸನತ್‌ ಕುಮಾರ್‌ ಶೆಟ್ಟಿ, ಆಡಳಿತ ಸಮಿತಿಯ ಅಧ್ಯಕ್ಷ 

Advertisement
Advertisement

Udayavani is now on Telegram. Click here to join our channel and stay updated with the latest news.

Next