Advertisement

Moodabidri ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಮದುವೆಯಾಗಿ ಪತ್ತೆ

10:02 PM Feb 26, 2024 | Team Udayavani |

ಮೂಡುಬಿದಿರೆ: ಇಲ್ಲಿನ ಕಾಲೇಜಿನಲ್ಲಿ ಬಿಪಿಟಿ ಕಲಿಯುತ್ತಿದ್ದು ಕಳೆದ ಶುಕ್ರವಾರ ನಾಪತ್ತೆಯಾಗಿದ್ದ ಬೈಂದೂರು ತಾಲೂಕಿನ ಕೊಲ್ಲೂರಿನ ಕೇರಳ ಮೂಲದ ಯುವತಿ ಆದಿರಾ (19) ತಾನು ಪ್ರೀತಿಸಿದ ಹುಡುಗನನ್ನು ಕೇರಳದಲ್ಲಿ ಮದುವೆಯಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Advertisement

ವಿದ್ಯಾಗಿರಿಯ ಹಾಸ್ಟೆಲ್‌ನಲ್ಲಿದ್ದು ಓದುತ್ತಿದ್ದ ಆದಿರಾ ಶುಕ್ರವಾರ ಕಾಲೇಜಿನ ಬಸ್ಸಿನಲ್ಲಿ ಮೂಡುಬಿದಿರೆಗೆ ಬಂದು ಕನ್ನಡ ಭವನದ ಬಳಿ ಇಳಿದ ಬಳಿಕ ನಾಪತ್ತೆಯಾಗಿದ್ದಳು. ಹೆತ್ತವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next