ಪರ್ವಕಾಲಗಳು ನಿರಂತರವಾಗಿ ನಡೆಯುತ್ತಿರಬೇಕು. ಇದರಿಂದ ಧಾರ್ಮಿಕ ಜಾಗೃತಿ ಮೂಡಲು ಸಹಕಾರಿ ಎಂದು ಮೈಸೂರಿನ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ
ಒಡೆಯರ್ ಹೇಳಿದರು.
Advertisement
ಜ. 22ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ಭ್ರಾಮರೀ ಸಭಾಮಂಟಪದಲ್ಲಿ ಉಗ್ರಾಣ ಮುಹೂರ್ತ, ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದಿನ ರಾಜ ಪರಂಪರೆಯ ಕಾಲಖಖದಲ್ಲಿಯೂ ಕಟೀಲು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿ ಧಾರ್ಮಿಕಕೈಂಕರ್ಯಕ್ಕೆ ಒತ್ತು ಕೊಡುವ ಕೆಲಸ ಮಾಡಲಾಗಿದೆ. ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಮುಕ್ತ ಪ್ರದೇಶ ಮಾಡಿರು ವುದು ಹೆಮ್ಮೆಯ ಹಾಗೂ ಇತರ ಕಡೆಗಳಿಗೂ ಮಾದರಿಯಾಗಿದೆ ಎಂದರು.
ನಾವು ದೇಶೀ ತಳಿ ಹಾಗೂ ದೇಶೀಯ ಅಕ್ಕಿ, ಬಟ್ಟೆ ಮುಂತಾದುಕ್ಕೆ ಹೆಚ್ಚಿನ ಮಹತ್ವ ನೀಡಿ ನಮ್ಮ ದೇಶಿಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು ಎಂದು ಹೇಳಿದರು.
ವಿಖ್ಯಾತಾನಂದ ಸ್ವಾಮೀಜಿ, ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಆಶೀರ್ವವಚನಗೈದರು. ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲು, ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿಯ ಅಧ್ಯಕ್ಷ ಸನತ್‌ಕುಮಾರ್ ಶೆಟ್ಟಿ, ಎಲ್. ಸುಬ್ರಹ್ಮಣ್ಯ ಮೈಸೂರು, ಆನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದ ಆನುವಂಶಿಕ ಮೊಕ್ತೇಸರ ವಾಸುದೇವ ಶಿಬರಾಯ, ಶಿಬರೂರು ಗುತ್ತು ಗುತ್ತಿನಾರ್ ಉಮೇಶ್ ಎನ್. ಶೆಟ್ಟಿ, ಅತ್ತೂರುಬೈಲು ಮಹಾಗಣಪತಿ ಮಂದಿರದ ವೆಂಕಟರಾಜ ಉಡುಪ,
ಶಂಭು ಮುಕ್ಕಾಲ್ದಿ ಅತ್ತೂರು ಭಂಡಾರಮನೆ, ವೇದವ್ಯಾಸ ಉಡುಪ ದೇವಸ್ಯ ಮಠ ಕೊಡೆ
ತ್ತೂರು, ಜಯರಾಮ ಮುಕ್ಕಾಲ್ದಿ ಕೊಡೆ ತ್ತೂರು, ನಿತಿನ್ ತಿಮ್ಮ ಕಾವ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನ ಉಪಸ್ಥಿತ ರಿದ್ದರು. ಅರ್ಚಕ ಶ್ರೀಹರಿ ನಾರಾ ಯಣ ದಾಸ ಆಸ್ರಣ್ಣ ಸ್ವಾಗತಿಸಿದರು. ಡಾ| ಸೋಂದಾ ಭಾಸ್ಕರ ಭಟ್ ನಿರೂಪಿಸಿದರು. ಉಪನ್ಯಾಸಕ
ದಯಾನಂದ ವಂದಿಸಿದರು.