Advertisement

Kateel Yakshagana Mela: ನಾಳೆ ಸೇವೆಯಾಟದೊಂದಿಗೆ ಆರಂಭ

11:48 PM Dec 05, 2023 | Team Udayavani |

ಕಟೀಲು: ಕಟೀಲು ದೇವಸ್ಥಾನದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಈ ಬಾರಿಯ ತಿರುಗಾಟ ಡಿ. 7ರಂದು ಗುರುವಾರ ಸೇವೆಯಾಟ ದೊಂದಿದೆ ಆರಂಭ ವಾಗಲಿದೆ.

Advertisement

ಬೆಳಗ್ಗೆ ದೇವಸ್ಥಾನದಲ್ಲಿ ಚಂಡಿಕಾ ಹೋಮ, 108 ತೆಂಗಿನ ಕಾಯಿ ಗಣಪತಿ ಹವನ, ಸಂಜೆ 5ಕ್ಕೆ ದೇವಸ್ಥಾನದಲ್ಲಿ ಆರು ಮೇಳಗಳ ತಾಳಮದ್ದಳೆ ನಡೆಯಲಿದ್ದು, 6.45ಕ್ಕೆ ಕಲಾವಿದರಿಗೆ ಗೆಜ್ಜೆ ಹಸ್ತಾಂತರ, 8.30ಕ್ಕೆ ಚೌಕಿ ಪೂಜೆ 10.30ಕ್ಕೆ ಪಾಂಡವಾಶ್ವಮೇಧ ಯಕ್ಷಗಾನ ಬೆಳಗ್ಗಿನ ವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸನತ್‌ ಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

ಪ್ರತೀ ವರ್ಷ ಮೇಳದ ಪರಿಕರಗಳನ್ನು ದುರಸ್ತಿ ಮಾಡಲಾಗುತ್ತಿದ್ದು, ಈ ಬಾರಿ ಹೆಚ್ಚಿನ ವೇಷ ಭೂಷಣಗಳು ಹೊಸದಾಗಿ ತಯಾರಿಸಿದ್ದು, 30ಕ್ಕೂ ಹೆಚ್ಚು ಕಿರೀಟ, 12ಕ್ಕೂ ಹೆಚ್ಚು ಕೇಸರಿ ತಟ್ಟಿ, ಧರ್ಮರಾಯನ 6 ಕಿರೀಟ ಮತ್ತಿತರ ಸಾಮಗ್ರಿಗಳು, ದೇವಿ ಮಹಾತೆ¾ ಪ್ರಸಂಗದ ಎಲ್ಲ ವೇಷಭೂಷಣ ಹೊಸದಾಗಿ ತಯಾರಿಸಲಾಗಿದೆ. ಮೇಳದ ಎಲ್ಲ ಚಿನ್ನ ಹಾಗೂ ಬೆಳ್ಳಿಯ ದೇವರ ಹಾಗೂ ಕಿರೀಟಗಳನ್ನು ದುರಸ್ತಿ ಮಾಡಿದ್ದು, ಮೇಳಕ್ಕೆ ಹೆಚ್ಚಿನ ಮೆರುಗು ನೀಡಲಿದೆ.

167 ದಿನ ತಿರುಗಾಟ
ಈ ಬಾರಿ ಅಧಿಕಮಾಸದ ನಿಮಿತ್ತ ಮೇಳಗಳು ತಡವಾಗಿ ಹೊರಡುತ್ತಿದ್ದು, 167 ದಿನ ತಿರುಗಾಟ ನಡೆಸಲಿವೆ ಎಂದು ಅರ್ಚಕ ಹರಿನಾರಾಯಣ ಆಸ್ರಣ್ಣ ತಿಳಿಸಿದ್ದಾರೆ.

8 ಕಲಾವಿದರ ಸೇರ್ಪಡೆ
ಹಾಸ್ಯ ಕಲಾವಿದ ಭಾಗಮಂಡಲ ಮಹಬಲೇಶ್ವರ ಭಟ್‌, ನಿತೇಶ್‌ ಕುಪ್ಪೆಪದವು, ಬಂದಾರು ಬಾಲಕೃಷ್ಣ ಗೌಡ, ಪ್ರಸಾದ್‌ ಮೂಡುಬಿದಿರೆ, ಕಾರ್ತಿಕ್‌ ಮಂಚಿ, ಅಕ್ಷಯ್‌ ಕಾಂತಾವರ, ಅಕ್ಷಯ ಶೆಟ್ಟಿ ಬೆಳ್ಮಣ್ಣು, ಗಣೇಶ್‌ ಮಿಜಾರು ಕಟೀಲು ಮೇಳಕ್ಕೆ ಸೇರ್ಪಡೆಗೊಂಡಿದ್ದಾರೆ ಮೇಳಗಳ ಸಂಚಾಲಕ ದೇವಿಪ್ರಸಾದ್‌ ಶೆಟ್ಟಿ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next