ಕುಂಬಳೆ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಜರಗುತ್ತಿರುವ ಬ್ರಹ್ಮಕಲಶೋತ್ಸವದಂಗವಾಗಿ ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ಪರಿಸರದಿಂದ ಹೊರೆಕಾಣಿಕೆ ಮೆರವಣಿಗೆ ಹೊರಟಿತು.
ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವಿತೀ ಸ್ವಾಮೀಜಿ ಹೊರೆ ಕಾಣಿಕೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಾಮಾಜಿಕ ಧಾರ್ಮಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು,ಸಂಜೀವ ಶೆಟ್ಟಿ ಮಾಡ, ತಿಮ್ಮಪ್ಪ ಕಾಂಜವ, ಹರೀಶ್ ಶೆಟ್ಟಿ ಮಾಡ, ಮೋಹನ್ ಶೆಟ್ಟಿ,ಚಂದ್ರಹಾಸ ಪೂಜಾರಿ ಮುಡಿಮಾರ್, ರವಿ ಮುಡಿಮಾರ್, ನಾರಾಯಣ ನಾಯ್ಕ ನಡುಹಿತ್ಲು,ಕೂಳೂರು ಉಪಸ್ಥಿತರಿದ್ದರು.
ಹೊರೆ ಕಾಣಿಕೆಯಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ,ಸಂತಡ್ಕ ಅರಸು ಸಂಕಲ ದೈವಸ್ಥಾನ ಶಿರಿಯ ಶ್ರೀ ಶಂಕರ ನಾರಾಯಣ ದೇವಸ್ಥಾನ,ಪಚ್ಲಂಪಾರೆ ಶ್ರೀ ಉಮಾಮಹೇಶ್ವರೀ ಭಜನಾ ಮಂದಿರ, ಉಪ್ಪಳ ಶ್ರೀ ಭಗವತೀ ಕ್ಷೇತ್ರ,ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತೂಮಿನಾಡು ಶ್ರೀ ಮಹಾಕಾಳಿ ಭಜನ ಮಂದಿರ, ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರ ಶ್ರೀ ಮಹಾವಿಷ್ಣು ದೇವಸ್ಥಾನ ದೇವಂದಪಡು³, ಬಾಲಾರಾಜನೇಯ ವ್ಯಾಯಾಮ ಶಾಲೆ ಕುಂಜತ್ತೂರು ಪದವು ಶ್ರೀ ಸತ್ಯನಾರಾಯಣ ಭಜನಾ ಮಂದಿರ ಉದ್ಯಾವರ ಗುತ್ತು ಮುಡಿಮಾರು ಶ್ರೀ ಮಹಾಮಲರಾಯ ಸೇವಾ ಸಮಿತಿ,ಪೊಯೆÂ ಶ್ರೀ ಚಾಮುಂಡೇಶ್ವರೀ ಸೇವಾ ಸಮಿತಿ ಮುಂತಾದ ಅನೇಕ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹೊರೆ ಕಾಣಿಕೆ ಒಯ್ಯಲಾಯಿತು.