ಗಳು ಆರಂಭಗೊಂಡಿದ್ದು, ಫೆ. 3ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಸುಮಾರು 20 ಲಕ್ಷಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಸದ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
Advertisement
ಕಟೀಲು ದೇವಸ್ಥಾನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ 12 ವರ್ಷಕ್ಕೊಮ್ಮೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಬೇಕು. ಕಟೀಲಿನಲ್ಲಿ 2007ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿತ್ತು. ಆ ಪ್ರಯುಕ್ತ ಕಳೆದ ವರ್ಷ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಬೇಕಿತ್ತು. ಆದರೆ ಕೆಲವೊಂದು ಕಾರಣದಿಂದ ಕಳೆದ ವರ್ಷ ಅಷ್ಟಬಂಧ ಮಾತ್ರ ಮಾಡಲಾಗಿದ್ದು, ಒಂದು ವರ್ಷ ತಡವಾಗಿ ಈಗ ಬ್ರಹ್ಮಕಲಶ ನಡೆಸಲಾಗುತ್ತಿದೆ ಎಂದರು. ದೇವಾಲಯದ ಒಳಗಿನ ಕಾರ್ಯ ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಎರಡು ಗ್ರಾಮಗಳಿಗೆ ಪೂರಕವಾದ ಕುಡಿಯುವ ನೀರಿನ ಯೋಜನೆ, ರಸ್ತೆ ಕಾಮಗಾರಿಗಳು ನಡೆದಿದೆ ಎಂದರು.
1 ಗಂಟೆಯಲ್ಲಿ 25 ಸಾವಿರ ಮಂದಿಗೆ ಅಡುಗೆ ಮಾಡಬಹುದಾದ ಹೈಜೆನಿಕ್ ಅಡುಗೆ ಶಾಲೆ ನಿರ್ಮಾಣವಾಗಿದೆ. ಸಂಜೀವಿನಿ ಟ್ರಸ್ಟ್ ನೇತೃತ್ವದಲ್ಲಿ 1 ಕೋ. ರೂ. ನೆರವಿನಲ್ಲಿ ಶೌಚಾಲಯ ನಿರ್ಮಿಸ
ಲಾಗಿದೆ. 24 ಗಂಟೆ ತಂಪಾದ ನೀರಿನ ವ್ಯವಸ್ಥೆ ಇರಲಿದ್ದು, 19 ಕಡೆ ಪಾರ್ಕಿಂಗ್ ವ್ಯವಸ್ಥೆ ಇರಲಿದೆ ಎಂದು ಹೇಳಿದರು. ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಕಟೀಲಿನ ಅನುವಂಶಿಕ ಮೊಕ್ತೇಸರರಾದ ಹರಿನಾರಾಯಣ ದಾಸ ಆಸ್ರಣ್ಣ ಮತ್ತು ಅನಂತಪದ್ಮನಾಭ ಆಸ್ರಣ್ಣ, ಆಡಳಿತ ಮಂಡಳಿ ಅದ್ಯಕ್ಷ, ಅನುವಂಶಿಕ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಪತ್ರಿಕಾಗೋಷ್ಠಿಯಲ್ಲಿದ್ದರು.
Related Articles
* ದೇವಸ್ಥಾನದ ಸುತ್ತ 3.5 ಕಿ.ಮೀ. ಬೈಪಾಸ್ ರಸ್ತೆ ನಿರ್ಮಾಣ
* ಬ್ರಹ್ಮಕಲಶೋತ್ಸವಕ್ಕೆ 10,000 ಸ್ವಯಂಸೇವಕರು
*ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 700 ರಾ.-ಅಂ. ರಾಷ್ಟ್ರೀಯ ಕಲಾವಿದರು
Advertisement