Advertisement
ಬ್ರಹ್ಮಕಲಶೋತ್ಸವದ ಆರಂಭದಿಂದಲೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರಗಿದವು. ಜ. 30ರಂದು ಸಂಭ್ರಮದ ಬ್ರಹ್ಮಕಲಶೋತ್ಸವ ಜರಗಿತು. ಈ ಪ್ರಯುಕ್ತವಾಗಿ ಲಕ್ಷಾಂತರ ಭಕ್ತರ ಸಾನ್ನಿಧ್ಯದಲ್ಲಿ ಕ್ಷೇತ್ರದಲ್ಲಿ ಮಹಾ ರಥೋತ್ಸವ ಜರಗಿತು. ಫೆ. 1ರಂದು ನಾಗಮಂಡ ಲೋತ್ಸವ. ಫೆ. 2 ಕೋಟಿಜಪ ಯಜ್ಞ ಹಾಗೂ ಅಂತಿಮವಾಗಿ ಸೋಮವಾರ ಸರ್ವ ಚಂಡಿಕಾಯಾಗದ ಮೂಲಕ ಬ್ರಹ್ಮಕಲಶೋತ್ಸವ ಸಮಾಪನ ಗೊಂಡಿತು.
ಬ್ರಹ್ಮಕಲಶೋತ್ಸವದ ಅಭಿ ವೃದ್ಧಿಗಾಗಿ ವಿವಿಧ ಸಂಘ- ಸಂಸ್ಥೆಗಳು, ಸ್ವಯಂ ಸೇವಕರು ಸ್ವಯಂ ಪ್ರೇರಿತರಾಗಿ ಕಾರ್ಯ ನಿರ್ವಹಸಿ ದ್ದಾರೆ. ಭದ್ರತೆ, ಅನ್ನ ಸಂತರ್ಪಣೆ, ಪಾರ್ಕಿಂಗ್, ಅಲಂಕಾರ ಸಹಿತ ಮೊದಲಾದ ಸಮಿತಿಗಳನ್ನು ರಚಿಸಿ, ಸ್ವಯಂಸೇವಕರನ್ನೊಳಗೊಂಡು ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿ ಬ್ರಹ್ಮಕಲಶವನ್ನು ಯಶಸ್ವಿ ಗೊಳಿಸಲಾಗಿದೆ. ಸುಮಾರು 25,000 ಅಧಿಕ ಸ್ವಯಂ ಸೇವಕರು ಕಾರ್ಯನಿರ್ವಹಿಸಿದ್ದಾರೆ.
Related Articles
Advertisement
300 ಮಂದಿ ಬಾಣಸಿಗರು ದೊಡ್ಡ ಮಟ್ಟದ ಸೇವೆ ಸಲ್ಲಿಸಿದ್ದಾರೆ. ಅಷ್ಟೆ ಅಲ್ಲದೆ, ಪತಂಜಲಿ ಯೋಗ ಶಿಕ್ಷಣ ಸಮಿತಿಯವರು ನಿತರಂತರ ಸ್ವಚ್ಛತೆಯ ಕೆಲಸ ಮಾಡಿದ್ದಾರೆ. 16 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಯಶಸ್ಸಿಯಾಗಿದೆ. ಭ್ರಾಮರೀ ವನ ಹಾಗೂ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೊಡ್ಡ ಮಟ್ಟದ ಹೊರೆಕಾಣಿಕೆ ಜಿಲ್ಲೆ ಅಲ್ಲದೆ ಬೆಂಗಳೂರು, ಪೂನಾದಿಂದ ಬಂದಿದೆ ಉಗ್ರಾಣ ತುಂಬಿ ತುಳುಕುತ್ತಿದೆ. ತರಕಾರಿ ಅಲ್ಲದೆ ಅಕ್ಕಿ ಬೆಳೆ, ತೆಂಗಿನಕಾಯಿ , ಸ್ಟೀಲ್ ವಸ್ತುಗಳು ಸಂಗ್ರಹವಾಗಿವೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳುಬಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ದೇಗುಲವನ್ನು ಅಭಿವೃದ್ಧಿಗೊಳಿಸಲಾಗಿತ್ತು. ಚಿನ್ನದ ಧ್ವಜಸ್ತಂಭ ಪ್ರತಿಷ್ಠೆ, ಚಿನ್ನದ ಮಂಟಪ, ಬೆಳ್ಳಿಯ ಮಂಟಪ, ರಥಬೀದಿ ವಿಸ್ತರಣೆ, ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ನೂತನ ಶೌಚಾಲಯ, 6 ಲಕ್ಷ ರೂ ವೆಚ್ಚದಲ್ಲಿ ಬ್ರಹ್ಮರಥಕ್ಕೆ ಸ್ಟೀಲ್‌ಅಟ್ಟೆ ಅಳವಡಿಕೆ, ರಸ್ತೆ ಕಾಂಕ್ರೀಟ್ ಕಾಮಗಾರಿ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಸರಕಾರದ ಜತೆಗೆ ಹಲವು ಭಕ್ತರು, ದಾನಿಗಳು ಕೂಡ ಅಭಿವೃದ್ಧಿಗೆ ಕೈ ಜೋಡಿಸಿದ್ದರು.