Advertisement
ಸುವ್ಯವಸ್ಥಿತ ಭೋಜನಾಲಯ ಮತ್ತು ಸ್ವಯಂ ಸೇವಕರ ಕಾರ್ಯ ನಿರ್ವಹಣೆಯಿಂದ ಅನ್ನದಾನವು ಯಶಸ್ವಿಯಾಗಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಬ್ರಹ್ಮಕಲಶೋತ್ಸವದ ಅನ್ನಪ್ರಸಾದಕ್ಕೆ ಅವಲಕ್ಕಿಯ ತಿಂಡಿ-ತಿನಿಸುಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಬೆಳಗ್ಗೆ, ಸಂಜೆ ಉಪಾಹಾರಕ್ಕೆ ಬಗೆಬಗೆಯ ಅವಲಕ್ಕಿ ತಿಂಡಿಗಳನ್ನು ಮಾಡಲಾಗಿದೆ. ಇದರಲ್ಲಿ ಅವಲಕ್ಕಿ, ಪೊಂಗಲ್, ಬಿಸಿ ಬೆಳೆಬಾತ್, ಉಸ್ಲಿ, ಚಿತ್ರಾನ್ನ, ಕೇಸರಿ ಬಾತ್, ಅವಲಕ್ಕಿ ಒಗ್ಗರಣೆ ಮುಂತಾದವುಗಳು ಭಕ್ತರ ಬಾಯಿ ರುಚಿಯನ್ನು ಹೆಚ್ಚಿಸಿದೆ.
Related Articles
ಬ್ರಹ್ಮಕಲಶೋತ್ಸವದ 10 ದಿನಗಳಲ್ಲಿ ಉಪಾಹಾರಕ್ಕೆ 432 ಗೋಣಿ ಅವಲಕ್ಕಿ, 23 ಕ್ವಿಂಟಲ್ ಬೆಲ್ಲ, 6,400 ತೆಂಗಿನ ಕಾಯಿಯನ್ನು ಉಪಯೋಗಿಸಲಾಗಿದೆ. 8 ಮಂದಿ ತಿಂಡಿ ಮಾಡುವವರು. ನಿರಂತರವಾಗಿ ಬೆಳಗ್ಗೆ 5.30ರಿಂದ ರಾತ್ರಿ 2.30ರ ವರೆಗೆ ತಿಂಡಿ ಮಾಡುವದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
Advertisement
ಶನಿವಾರ ಜರಗುವ ನಾಗಮಂ ಡಲೋತ್ಸವಕ್ಕೆ 10 ಸಾವಿರ ಮಂದಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಸೆಟ್ ದೋಸೆ, ಗಸಿ, ಅವಲಕ್ಕಿ ಮಸಾಲೆ, ಖಾರ ಪೊಂಗಲ್ ಮಾಡಲಾಗಿದೆ. ಸಂಜೆ ಅವಲಕ್ಕಿ ಒಗ್ಗರಣೆ, ಗೋಳಿ ಬಜೆ ಮಾಡಲಾಗಿದೆ.