ಕಟಪಾಡಿ: ಉದ್ಯಾವರ ಪಿತ್ರೋಡಿ ವೆಂಕಟರಮಣ ಸ್ಪೋರ್ಟ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷ ಮಲ್ಲೇಶ್ (40) ಮಾ.6 ರಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ತಂದೆ, ತಾಯಿ, ಸಹೋದರಿ, ಪತ್ನಿ ಹಾಗೂ ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧು ಬಳಗ ಮತ್ತು ಸ್ನೇಹಿತ ವರ್ಗವನ್ನು ಅಗಲಿದ್ದಾರೆ.
ಸರಳ ಸ್ವಭಾವದ ಇವರು ವೆಂಕಟರಮಣ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು.
ಜಿಲ್ಲಾ ಮತ್ತು ರಾಜ್ಯ ಮಟ್ಟದ ಮಂದ್ಯಾಕೂಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪಡೆದುಕೊಂಡಿದ್ದರು. ವೆಂಕಟರಮಣ ಕ್ರಿಕೆಟರ್ಸ್ ಇವರ ನೇತೃತ್ವದಲ್ಲಿ ನಡೆದ ಹಲವು ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಕೂಟದ ಯಶಸ್ವಿಯಲ್ಲಿ ಕಾರಣಿಕರ್ತರಾಗಿದ್ದರು.
Related Articles
ಉತ್ತಮ ಮಾರ್ಗದರ್ಶಕರಾಗಿದ್ದು, ಉಡುಪಿಯ ಬನ್ನಂಜೆಯಲ್ಲಿ ಸಿಎ ಕಚೇರಿ ನಡೆಸುತ್ತಿದ್ದೂ, ಅಸೋಸಿಯೇಶನ್ ನ ಕಾರ್ಯಕಾರಿ ಸಮಿತಿಯಲ್ಲಿ ಸಕ್ರಿಯವಾಗಿದ್ದರು.
ಉದ್ಯಾವರ ಪಿತ್ರೋಡಿಯ ವೆಂಕಟರಮಣ ಸ್ಪೋರ್ಟ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷರಾಗಿದ್ದ ಇವರು ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ನ ರಕ್ತದಾನ ಸಂಘದ ಸದಸ್ಯರಾಗಿ ಹಲವು ಬಾರಿ ರಕ್ತದಾನ ಮಾಡಿದ್ದರು.