Advertisement

Katapady ರೈಲ್ವೇ ಹಳಿಯಲ್ಲಿ ಯುವಕನ ಶವ ಪತ್ತೆ

08:42 AM Nov 17, 2023 | Team Udayavani |

ಕಟಪಾಡಿ: ಕಟಪಾಡಿ ಬಳಿಯ ಅಚ್ಚಡ ರೈಲ್ವೇ ಹಳಿಯಲ್ಲಿ ಅಪರಿಚಿತ ಯುವಕನ ಶವ ನ. 17ರ ಶುಕ್ರವಾರ ಮುಂಜಾನೆ ಪತ್ತೆಯಾಗಿದೆ.

Advertisement

ಸಮಾಜ ಸೇವಕರಾದ ಸೂರಿ ಶೆಟ್ಟಿ ಕಾಪು, ಆಸ್ಟಿನ್ ಕೋಟ್ಯಾನ್ ಕಟಪಾಡಿ, ಆಂಬುಲೆನ್ಸ್ ಚಾಲಕ ನಾಗರಾಜ ಛಿದ್ರಗೊಂಡಿರುವ ಯುವಕನ ಶವವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಕಾರ್ಯಾಚರಿಸುತ್ತಿದ್ದಾರೆ.

ಯುವಕನ ದೇಹದ ಮುಖ ಭಾಗವು ಹೆಚ್ಚು ಹಾನಿಗೀಡಾಗಿದ್ದು ಗುರುತು ಸಿಕ್ಕಿಲ್ಲ.

ಮುಂಜಾನೆ 4.30 ಗಂಟೆ ಸುಮಾರಿಗೆ ಸಂಚರಿಸುವ ರೈಲು ಡಿಕ್ಕಿ ಹೊಡೆದಿರಬಹುದು  ಅಥವಾ ಆಯ ತಪ್ಪಿ ಬಿದ್ದಿರಬಹುದೋ  ಎಂದು ಅಂದಾಜಿಸಲಾಗಿದೆ.

ಪೊಲೀಸರು ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next