Advertisement

Katapadi: ಶ್ರೀ ವಿಶ್ವನಾಥ ಕ್ಷೇತ್ರ ವರ್ಷಾವಧಿ ಮಹೋತ್ಸವ ಸಂಪನ್ನ

11:23 PM Feb 16, 2024 | Team Udayavani |

ಕಟಪಾಡಿ: ಬಿಲ್ಲವರ ಶಕ್ತಿ ಕೇಂದ್ರವಾದ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ವರ್ಷಾವಧಿ ಮಹೋತ್ಸವದ ಹಗಲು ಉತ್ಸವ-ರಥೋತ್ಸವವು ಸಾವಿ ರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ಸಂಪನ್ನ ಗೊಂಡಿತು.

Advertisement

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪರವೂರು ರಾಕೇಶ ತಂತ್ರಿ ಅವರ ನೇತೃತ್ವ, ಪ್ರಧಾನ ಅರ್ಚಕ ದೇವದಾಸ ಶಾಂತಿ ಅವರ ಪೌರೋಹಿತ್ಯದಲ್ಲಿ ಫೆ. 9ರಿಂದ 17ರ ವರೆಗೆ ಶ್ರೀ ವಿಶ್ವನಾಥ ದೇವರು, ಶ್ರೀ ಅನ್ನಪೂಣೇಶ್ವರೀ ದೇವಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಕೃಷ್ಣ, ಶ್ರೀ ಅಯ್ಯಪ್ಪ, ಶ್ರೀ ನಾಗ ದೇವರು, ಶ್ರೀ ಕಲ್ಕುಡ ದೈವದ ಸನ್ನಿಧಿಯಲ್ಲಿ ಕಾರ್ಯಕ್ರಮಗಳು ನೆರವೇರಿದವು.

ಹಗಲು ರಥೋತ್ಸವದ ಸಂದರ್ಭ ಮಧ್ಯಾಹ್ನ ನಡೆದ ಮಹಾ ಅನ್ನ ಸಂತರ್ಪಣೆಯಲ್ಲಿ 2 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್‌. ಶಂಕರ ಪೂಜಾರಿ, ಪ್ರಧಾನ ಕೋಶಾಧಿಕಾರಿ ವೀರೇಶ್‌ ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಯು. ಶಿವಾನಂದ, ಉಪಾಧ್ಯಕ್ಷರಾದ ಶ್ರೀಕರ ಅಂಚನ್‌, ಆನಂದ ಮಾಬಿಯಾನ್‌, ಜತೆ ಕಾರ್ಯದರ್ಶಿಗಳಾದ ಎನ್‌.ಜಿ. ಸುಕುಮಾರ್‌, ಪ್ರಮೋದ್‌ ಸುವರ್ಣ, ಜತೆ ಕೋಶಾಧಿಕಾರಿ ಆರ್‌.ಜಿ. ಕೋಟ್ಯಾನ್‌, ಆಂತರಿಕ ಲೆಕ್ಕ ಪರಿಶೋಧಕ ಆನಂದ ಜತ್ತನ್ನ, ಸೇವಾದಳಪತಿ ಹರೀಶ್‌ ಕುಂದರ್‌, ಮಹಿಳಾ ಬಳಗದ ಸಂಚಾಲಕಿ ಶಿಲ್ಪಾ ಜಿ. ಸುವರ್ಣ, ಆಡಳಿತ ಮಂಡಳಿಯ ಸದಸ್ಯರಾದ ಕೃಷ್ಣ ಸನಿಲ್‌ ಕಂಕಣಬೆಟ್ಟು, ಪ್ರತಾಪ್‌ ಕುಮಾರ್‌ ಉದ್ಯಾವರ, ಪ್ರಭಾಕರ ಪಾಲನ್‌, ಕಾಮ್‌ರಾಜ್‌ ಸುವರ್ಣ, ಸತೀಶ್‌ ಅಂಬಾಡಿ, ರಾಕೇಶ್‌ ಕುಂಜೂರು, ಶೋಭಾ ಎ. ಬಂಗೇರ, ಲೋಕೇಶ್‌ ಕುಮಾರ್‌ ಕೋಟೆ, ಸಂಘ ಸಂಸ್ಥೆಗಳ ಪ್ರತಿನಿಧಿ ನವೀನ್‌ ಅಮೀನ್‌, ಹರ್ಷ ಸಂಸ್ಥೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಸೂರ್ಯಪ್ರಕಾಶ್‌, ಗಣ್ಯರು, ಭಕ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next