Advertisement

ಕೊರೊನಾ ಆತಂಕದ ಮಧ್ಯೆ ಅಭಯ ಸ್ಥಾನ, ಕಾಟ್‌ ನೂಜಿ ಶಾಸ್ತಾರ‌ ಮೂಲಸ್ಥಾನ

09:49 AM Mar 20, 2020 | sudhir |

ಬದಿಯಡ್ಕ:ಪವಿತ್ರವಾದ ಭಕ್ತಿ, ಸಮರ್ಪಣಾ ಭಾವದಿಂದ ಭಗವಂತನ ಆನುಗ್ರಹ ಪಡೆಯಲು ಸಾಧ್ಯ. ಆದಕ್ಕೆ ಪೂರಕವಾಗಿ ಭಕ್ತಿಯ ಕೇಂದ್ರಗಳಾಗಿ ಆದೆಷ್ಟೋ ಕ್ಷೇತ್ರಗಳು ಭಕ್ತರ ಪಾಲಿನ ನೆಮ್ಮದಿಯ ತಾಣಗಳಾಗಿ ಕಂಗೊಳಿಸುತ್ತಿವೆ. ಆದರಲ್ಲೂ ಕೆಲವು ಕ್ಷೇತ್ರಗಳು ತಮ್ಮ ಆಪಾರವಾದ ಮಹಿಮೆ, ವಿಶೇಷತೆಗಳ ಮೂಲಕ ಕೋಟ್ಯಂತರ ಭಾರತೀಯರ ಆರಾಧನಾಲಯಗಳಾಗಿ ಖ್ಯಾತಿ ಪಡೆದಿವೆ. ಆದರೆ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ಕಾರಣಿಕದ ಆದೆಷ್ಟೋ ಕ್ಷೇತ್ರಗಳು ನಮ್ಮ ಸುತ್ತಮುತ್ತ ಕಂಡುಬರುತ್ತವೆ. ನಂಬಿಕೆ, ವಿಶ್ವಾಸಗಳಿಗೆ ಇಂಬು ಕೊಡುವ ಇಂತಹ ಕ್ಷೇತ್ರಗಳು ಕೆಲವು ಸಂದರ್ಭಗಳಲ್ಲಿ ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಈ ನಿಟ್ಟಿನಲ್ಲಿ ಬಡಗು ಶಬರಿಮಲೆ ಎಂದೇ ಖ್ಯಾತಿವೆತ್ತ ಉಬ್ರಂಗಳ ಕ್ಷೇತ್ರದ ವಿಶೇಷತೆಗಳೆಡೆಗೆ ಒಂದು ನೋಟ.

Advertisement

18 ಮೆಟ್ಟಲು ಎಂದರೆ ನೆನಪಾಗುವುದು ಕೇರಳ ರಾಜ್ಯದ ಶಬರಿಮಲೆ à ಅಯ್ಯಪ್ಪನ ಸನ್ನಿಧಿ. ಇದೇ ರೀತಿ ಹೊರಪ್ರಪಂಚಕ್ಕೆ ಗೋಚರಿಸದ ಉತ್ತರ ಶಬರಿಮಲೆ ಎಂದೇ ಖ್ಯಾತಿ ಪಡೆದ 18 ಮೆಟ್ಟಲುಗಳ ಶಾಸ್ತಾರನ ಸನ್ನಿಧಿಯೊಂದು ಸಿದ್ದಿಲ್ಲದೆ ತನ್ನ ಮಹಿಮೆಯನ್ನು ಸಾರುತ್ತಿದೆ. ಕೇರಳದ ಕಾಸರಗೋಡು ಜಿಲ್ಲೆಯ ಕುಂಬಾxಜೆ ಗ್ರಾಮಪಂಚಾಯತ್‌ ಉಬ್ರ0ಗಳ ಗ್ರಾಮದ ಪ್ರಕೃತಿ ಸೌಂದ0å‌ುìದ ಬ0å‌ುಲು ಪ್ರದೇಶದಲ್ಲಿ 18 ಮೆಟ್ಟಲುಗಳಿಂದ ಕೂಡಿದ ಎತ್ತರ ಪ್ರದೇಶದಲ್ಲಿ ಬಡಗುಶಬರಿಮಲೆ (ಉತ್ತರ ಶಬರಿಮಲೆ)ಎಂದೇ ಪ್ರಸಿದ್ಧವಾದ ಉಬ್ರಂಗಳ ಮಹಾದೇವ ಪಾರ್ವತಿ ಶಾಸ್ತಾರ ದೇವಸ್ಥಾನ ತನ್ನ ಕಾರಣಿಕದ ಚುಂಬಕ ಶಕ್ತಿಯಿಂದ ಭಕ್ತರ ಆಕರ್ಷಿಸುವ ದಿವ್ಯ ಸನ್ನಿಧಿಯಾಗಿದೆ.

ಆಯ್ಯಪ್ಪ ವ್ರತಧಾರಿಗಳ ಆಶಾಕಿರಣ
ಕೇರಳ ರಾಜ್ಯವು ಕಂಡ ಭೀಕರ ಪ್ರಳಯ ದುರಂತದ ಸಂದರ್ಭದಲ್ಲಿ ಈ ಕ್ಷೇತ್ರವು ಅಯ್ಯಪ್ಪ ವ್ರತಧಾರಿಗಳನ್ನು ತನ್ನತ್ತ ಸೆಳೆದಿತ್ತು. ಈ ಸಂದರ್ಭದಲ್ಲಿ ಯಾತ್ರೆ ಕೈಗೊಳ್ಳಲು ಅನಾನುಕೂಲವುಂಟಾದ ಕಾರಣ ಅನೇಕ ವ್ರತಧಾರಿಗಳು ಕ್ಷೇತ್ರ ದರ್ಶನಗೆ„ದು ಧರಿಸಿದ ಮುದ್ರೆಯನ್ನು ತೆಗೆದು, ವ್ರತಪೂರ್ಣಗೊಳಿಸಿ ಕೃತಾರ್ಥರಾಗಿದ್ದಾರೆ. ಇದೀಗ ಮತ್ತೆ ವಿಶ್ವದಾದ್ಯಂತ ಭೀತಿಯನ್ನುಂಟುಮಾಡಿದ ಕೊರೊನಾ ವೈರಸ್‌ನಿಂದಾಗಿ ಮಾಲೆ ಧರಿಸಿದ ಅಯ್ಯಪ್ಪ ವ್ರತಧಾರಿಗಳು ಶಬರಿಮಲೆ ಯಾತ್ರೆಯನ್ನು ಕೈಬಿಡಬೇಕಾದ ಪರಿಸ್ಥಿತಿಯಿರುವ ಈ ಸಂದರ್ಭದಲ್ಲಿ ಈ ಕ್ಷೇತ್ರವು ಭಕ್ತಾದಿಗಳಿಗೆ ಆಶಾಕಿರಣವಾಗಿದೆ.

ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ದ.ಕ., ಉಡುಪಿ ಹಾಗೂ ಕಾಸರಗೋಡಿನ ಅಯ್ಯಪ್ಪ ವ್ರತಧಾರಿಗಳು ಶಬರಿಮಲೆಗೆ ತೆರಳಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿ ಮುಂದೊಂದು ದಿನ ಶಬರಿಮಲೆ ತೆರಳುವ ಸಂಕಲ್ಪವನ್ನು ಕೈಗೊಂಡು ವ್ರತಾಚರಣೆಯನ್ನು ಕೈಬಿಡುತ್ತಾರೆ. ಕ್ಷೇತ್ರದ ಪ್ರಧಾನ ಅರ್ಚಕ ಭಾಸ್ಕರ ಐತಾಳ್‌ ಅವರು ಪ್ರಾರ್ಥನೆಯನ್ನು ನೆರವೇರಿಸುತ್ತಾರೆ.

ಕಾಟ್‌ ನೂಜಿ ಶಾಸ್ತಾರನ ಮೂಲಸ್ಥಾನ
ಇಲ್ಲಿಂದ ಮುಕ್ಕಾಲು ಕಿಲೋಮೀಟರ್‌ ದೂರದಲ್ಲಿರುವ “ಕಾಟ್‌ ನೂಜಿ’ ಎಂಬ ಸ್ಥಳವು ಧರ್ಮ ಶಾಸ್ತರ ದೇವರ ಮೂಲಸ್ಥಾನವಾಗಿದೆ. ದಟ್ಟ ಕಾನನದ ಮಧ್ಯೆ ಇಲ್ಲಿ ದೇವರ ಉದ್ಭವ ಲಿಂಗವಿದ್ದು, ಉಬ್ರ0ಗಳ ಕ್ಷೇತ್ರದಲ್ಲಿ ಬೆಳಗಿನ ಪೂಜೆ ನೆರವೇರಿಸಿದ ಬಳಿಕ ಪ್ರತಿನಿತ್ಯ ಅರ್ಚಕರು ವಿಶೇಷ ನೈವೇದ್ಯಗಳೊಂದಿಗೆ ಪೂಜೆಯನ್ನು ನೆರವೇರಿಸುತ್ತಾರೆ. ಅನಾದಿ ಕಾಲದಿಂದಲೇ ಈ ಸಂಪ್ರದಾಯವು ನಡೆದುಕೊಂಡು ಬರುತ್ತಿದೆ. ಉಬ್ರ0ಗಳ ಕ್ಷೇತ್ರದಲ್ಲಿ ನೆಲೆಸಿರುವ ಪಾರ್ವತೀ ದೇವಿ ಸನ್ನಿಧಿಗೂ ವಿಶೇಷ ಕಾರಣಿಕವಿದೆ.

Advertisement

ಮದುವೆಯಾಗದ ಯುವಕ ಯುವತಿಯರು ಕಲ್ಯಾಣಯೋಗ ಪ್ರಾಪ್ತಿಗಾಗಿ ಸ್ವಯಂವರ ಪೂಜೆಯನ್ನು ನೆರವೇರಿಸುತ್ತಾರೆ. ಸಂತಾನ ಪ್ರಾಪ್ತಿಗಾಗಿ ತೊಟ್ಟಿಲು ಸಮರ್ಪಣೆ, ಜಲಭಾಗ್ಯಕ್ಕಾಗಿ ಜಲಾಧಾರ ಸೇವೆ, ದಾಂಪತ್ಯ ದೋಷ ನಿವಾರಣೆ, ಮೊದಲಾದ ವಿಶೇಷ ಪ್ರಾರ್ಥನೆಗಳನ್ನು ನೆರವೇರಿಸಿ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ಅದೆಷ್ಟೋ ನಿದರ್ಶನಗಳಿವೆ. ಅಂತಹ ಬಹುದೊಡ್ಡ ಭಕ್ತಸಮೂಹವೇ ಕ್ಷೇತ್ರಕ್ಕಿದೆ.

ಅ0å‌ುÂಪ್ಪ ಸ್ವಾಮಿಗೆ ತುಪ್ಪದೀಪ, ಮಹಾದೇವನಿಗೆ ರುದ್ರಾಭಿಷೇಕ, ಶನಿಪೂಜೆ ಮೊದಲಾದ ವಿಶೇಷ ಸೇವೆಗಳು ಇಲ್ಲಿನ ವಿಶೇಷತೆಯಾಗಿದೆ.
ಶತಮಾನಗಳ ಇತಿಹಾಸವನ್ನು ಹೊಂದಿರುವ ಈ ದೇವಸ್ಥಾನವನ್ನು “ಕೇರಳ ರಾಜ್ಯಾದ್ಯಂತ ಒಂದು ಪ್ರಸಿದ್ಧ ಸಾರ್ವಜನಿಕ ಆರಾಧನಾಲಯ’ ಎಂದು 28.11.1972ರಂದು ಪ್ರಮಾಣಪತ್ರ ನಂಬ್ರ 233 ಎಫ್‌ ನಂಬ್ರ 176/46/72 ಐಟಿ ಎ1, ಕೇಂದ್ರ ಸರಕಾರದ ವಿತ್ತೀಯ ಸಚಿವಾಲಯದ ಗಜೆಟ್‌ನಲ್ಲಿ (ಭಾಗ2/ಸೆಕ್ಷನ್‌3) ಘೋಷಿಸಿ 80ಜಿ (2) ಬಿ ಸೌಲಭ್ಯವನ್ನೂ ಒದಗಿಸಿದೆ. ಪ್ರಸ್ತುತ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವು ಸರಿಸುಮಾರು 2.25 ಕೋಟಿ ರೂಪಾಯಿ ವೆಚ್ಚದಲ್ಲಿ ಭರದಿಂದ ಸಾಗುತ್ತಿದ್ದು, 2021ರಲ್ಲಿ ಬ್ರಹ್ಮಕಲಶ ಮಹೋತ್ಸವವು ನಡೆಯಲಿದೆ. ಊರ ಪರವೂರ ಅನೇಕ ಭಕ್ತಾದಿಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಹಲವು ವಿಶೇಷಗಳ ಕ್ಷೇತ್ರ
ಶಿಲೆಯಿಂದ ನಿರ್ಮಿಸಿರುವ 18 ಮೆಟ್ಟಿಲು ಗಳನ್ನೇರಿ ಕ್ಷೇತ್ರಕ್ಕಾಗಮಿಸಬೇಕಾಗಿದ್ದು ಕಾರಣಿಕ ‌ ಉಬ್ರಂಗಳ ಶಾಸ್ತಾರನ ದರ್ಶನದಿಂದ ಶಬರಿಮಲೆ ಅಯ್ಯಪ್ಪ ದರ್ಶನದ ಪುಣ್ಯಫಲವು »ಕ್ತರಿಗೆ ಲಭಿಸುತ್ತದೆ ಎಂಬ ನಂಬಿಕೆಯಿಂದಾಗಿ ಉತ್ತರ ಶಬರಿಮಲೆ ಎಂಬ ಹೆಸರು ಅನಾದಿಕಾಲದಿಂದಲೇ ಇದೆ. ಮಹಾದೇವ ಪಾರ್ವತಿ ಸಮೇತನಾಗಿ ಗಣಪತಿ ಸುಬ್ರಹ್ಮಣ್ಯ, ಅಯ್ಯಪ್ಪಸ್ವಾಮಿ ಪರಿವಾರ ದೇವÃರು. ಮಹಾವಿಷ್ಣು ‌° ಆರನೇ ಅವತಾರದಲ್ಲಿ ಭಾರ್ಗವ ರಾಮನಾಗಿ 21 ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿ0å‌ು ಸಂಹಾರ ಮಾಡಿದ ಪರಶುರಾಮರೂ ಪೂಜಿಸಲ್ಪಡುತ್ತಿರುವುದು ವಿಶೇಷ

– ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next