Advertisement

ಪಶ್ಚಿಮ ಘಟ್ಟ  ತಪ್ಪಲಿನ ಹಳ್ಳಿಗಳಿಗೆ ಮತ್ತೆ ಉರುಳು!

12:38 AM Nov 10, 2020 | mahesh |

ಕಾರ್ಕಳ: ಕಸ್ತೂರಿ ರಂಗನ್‌ ವರದಿಗೆ ಅಂತಿಮ ಸ್ಪರ್ಶ ನೀಡಲು ಕೇಂದ್ರ ಸರಕಾರಕ್ಕೆ ಹಸುರು ಪೀಠ ನೀಡಿರುವ ಗಡುವು ಹತ್ತಿರವಾಗುತ್ತಿದೆ. 2020ರ ಡಿ. 31ರೊಳಗೆ ವರದಿಯನ್ನು ಅನುಷ್ಠಾನಿಸುವಂತೆ ಹಸುರು ಪೀಠ ಸೂಚಿಸಿರುವುದರಿಂದ ಪಶ್ಚಿಮ ಘಟ್ಟ ಪ್ರದೇಶದ ಹಳ್ಳಿಗಳ ಜನರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ತಮ್ಮ ರಕ್ಷಣೆಗೆ ಸರಕಾರ ನಿಲ್ಲುವುದೇ ಎನ್ನುವ ಅನುಮಾನ ಅವರಲ್ಲಿದೆ.

Advertisement

2013ರ ನವೆಂಬರ್‌ 31ರಂದು ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯ ನೀಡಿರುವ ಪ್ರಮಾಣ ಪತ್ರದ ಅನುಸಾರ ಕಸ್ತೂರಿ ರಂಗನ್‌ ವರದಿ ಬಗ್ಗೆ ಅಧಿಸೂಚನೆ ಹೊರಡಿಸಲಾಗಿತ್ತು. ಕೇಂದ್ರವು ಮೊದಲ ಕರಡು ಅಧಿಸೂಚನೆ 2014ರ ಮಾ. 10ರಂದು, ಎರಡನೇ ಕರಡು ಅಧಿಸೂಚನೆಯನ್ನು 2015ರ ಸೆ. 4ರಂದು, 3ನೇ ಕರಡು ಅಧಿಸಾಂದರ್ಭಿಕ ಚಿತ್ರ

1,576 ಗ್ರಾಮಗಳು ಸೂಕ್ಷ್ಮ ಕಾರ್ಯಪಡೆಯು ಪಶ್ಚಿಮ ಘಟ್ಟಗಳ ವ್ಯಾಪ್ತಿ ಯನ್ನು 1,64,280 ಚ.ಕಿ.ಮೀ. ವಿಸ್ತಿರ್ಣವುಳ್ಳ ಪ್ರದೇಶವೆಂದು ಗುರುತಿಸಿದೆ. 6 ರಾಜ್ಯಗಳ 188 ತಾಲೂಕುಗಳಲ್ಲಿ 4,156 ಗ್ರಾಮಗಳು ಹರಡಿಕೊಂಡಿವೆ. ರಾಜ್ಯದ 1,576 ಗ್ರಾಮ ಗಳು ಸೂಕ್ಷ್ಮ ಪ್ರದೇಶ ಪಟ್ಟಿಯಲ್ಲಿವೆ. ಉಡುಪಿ ಜಿಲ್ಲೆಯ 37, ದ.ಕ. ಜಿಲ್ಲೆಯ 46, ಶಿವಮೊಗ್ಗ ಜಿಲ್ಲೆಯ 570, ಚಿಕ್ಕಮಗಳೂರಿನ 147, ಬೆಳಗಾವಿಯ 63, ಮೈಸೂರಿನ 62 ಚಾಮರಾಜನಗರದ 21 ಮತ್ತು ಹಾಸನ ಜಿಲ್ಲೆಯ 35 ಗ್ರಾಮಗಳು ಪಟ್ಟಿಯಲ್ಲಿವೆ.

ವರದಿ ಅನುಷ್ಠಾನ ವಿಷಯ ಬಹಿರಂಗ ವಾದಾಗಿನಿಂದ ಪಶ್ಚಿಮ ಘಟ್ಟ ತಪ್ಪಲಿನ ಜನತೆ ವಿವಿಧ ಹಂತಗಳಲ್ಲಿ ಪ್ರತಿರೋಧ ವ್ಯಕ್ತಪಡಿಸಿದ್ದರು. ಅಧಿಸೂಚನೆ ಮತ್ತು ಅನುಷ್ಠಾನದ ಪ್ರಕ್ರಿಯೆಗಳು ಪುನರಾವರ್ತನೆ ಆಗುವ ಮೂಲಕ ಜನತೆಯ ನಿದ್ದೆಗೆಡಿಸಿದೆ.

ಅಧಿಸೂಚನೆಯಲ್ಲೇನಿದೆ?
ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಕೆಂಪು ವಲಯದ ಕೈಗಾರಿಕೆಗೆ ಪೂರ್ಣ ನಿಷೇಧವಿದೆ. ಕಿತ್ತಳೆ ವಲಯ ಕೈಗಾರಿಕೆಗಳಲ್ಲಿ ಆಹಾರ, ಹಣ್ಣು ಸಂರಕ್ಷಣೆಗೆ ವಿನಾಯಿತಿಯಿದೆ. 20 ಸಾವಿರ ಚದರ ಮೀಟರ್‌ಗಿಂತ ಅಧಿಕ ವಿಸ್ತಾರವಾದ ಬಡಾವಣೆ, ಟೌನ್‌ಶಿಪ್‌ ಮತ್ತು ಕಟ್ಟಡಗಳಿಗೆ ನಿಷೇಧ ಹೇರಲಾಗಿದೆ. ಉಷ್ಣ ಸ್ಥಾವರಗಳಿಗೆ ಅವಕಾಶವಿಲ್ಲ. ಜಲವಿದ್ಯುತ್‌ ಸ್ಥಾವರಗಳಿಗೆ ಷರತ್ತುಬದ್ಧ ಅವಕಾಶವಿದೆ.

Advertisement

ಗಡಿಗುರುತು ಕಗ್ಗಂಟು!
ಸೂಕ್ಷ ವಲಯದ ಗಡಿ ಗುರುತು ಇನ್ನೂ ನಡೆದಿಲ್ಲ. ತಪ್ಪಲು ಪ್ರದೇಶಗಳ ಸ್ಥಳಿಯಾಡ ಳಿತ, ಜನಪ್ರತಿನಿಧಿಗಳು, ನಾಗರಿಕರಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕುದುರೆಮುಖ ಉದ್ಯಾವನ ವ್ಯಾಪ್ತಿಯಲ್ಲಿ 600.57 ಚದರ ಕಿ.ಮೀ. ಪ್ರದೇಶವನ್ನು 2020ರ ಜು. 2ರಂದು ಪರಿಸರ ಸೂಕ್ಷ್ಮವೆಂದು ಘೋಷಿಸಲಾಗಿದೆ.

ಪರಿಸರ ಸೂಕ್ಷ್ಮ ವಲಯಗಳು
ಕಾರ್ಕಳ: ಬೇಳಿಂಜೆ, ನಾಡಾ³ಲು, ಕುಚ್ಚಾರು, ಚಾರ, ಹೆಬ್ರಿ, ಕಬ್ಬಿನಾಲೆ, ಅಂಡಾರು, ಶಿರ್ಲಾಲು, ಕೆರ್ವಾಶೆ, ದುರ್ಗಾ, ಮಾಳ, ಈದು, ನೂರಾಳ್‌ಬೆಟ್ಟು, ಕುಂದಾಪುರ: ಹೊಸೂರು, ಬೈಂದೂರು, ಕೊಲ್ಲೂರು, ಯಳಜಿತ್‌, ತಗ್ಗರ್ಸೆ, ಮುದೂರು, ಗೋಳಿಹೊಳೆ, ಜಡ್ಕಲ್‌, ಇಡೂರು-ಕುಂಜ್ಞಾಡಿ, ಕೆರಾಡಿ, ಹಳ್ಳಿಹೊಳೆ, ಆಲೂರು, ಚಿತ್ತೂರು, ಎಡಮೊಗೆ, ಬೆಳ್ಳಾಲ, ವಂಡ್ಸೆ, ಹೊಸಂಗಡಿ, ಮಚ್ಚಟ್ಟು, ಅಮಾಸೆ ಬೈಲು, ಶೇಡಿಮನೆ, ಮಡಾಮಕ್ಕಿ, ಬೆಳ್ವೆ.
ಬೆಳ್ತಂಗಡಿ: ನಾರಾವಿ, ಮಲವಂತಿಗೆ, ಕುತ್ಲೂರು, ಸುಲ್ಕೇರಿ ಮೊಗ್ರು, ಶಿರ್ಲಾಲು, ನಾವರ, ಸವಣಾಲು, ನಾಡ, ಚಾರ್ಮಾಡಿ, ಸುಲ್ಕೇರಿ, ನಾವೂರು, ನೆರಿಯ, ಕಳಂಜ, ಪುದುವೆಟ್ಟು, ಶಿಶಿಲ, ಶಿಬಾಜೆ, ರೆಖ್ಯ ಪುತ್ತೂರು, ಕಡಬ: ಕೌಕ್ರಾಡಿ, ಗೋಳಿತೊಟ್ಟು, ಶಿರಾಡಿ, ಆಲಂತಾಯ, ಶಿರಿಬಾಗಿಲು, ಇಚ್ಲಂಪಾಡಿ, ಬಲ್ಯ, ಕೊಂಬಾರು, ಬಿಳಿನೆಲೆ ದೋಳ್ಪಾಡಿ
ಸುಳ್ಯ: ಬಳ್ಪ, ಯೇನೆಕಲ್ಲು, ಸುಬ್ರಹ್ಮಣ್ಯ,ನಾಲ್ಕೂರು, ಕೂತ್ಕುಂಜ, ಐನಕಿದು, ದೇವಚಳ್ಳ, ಹರಿಹರ ಪಳ್ಳತ್ತಡ್ಕ, ಮಿತ್ತೂರು, ಬಾಳುಗೋಡು, ಮಡಪ್ಪಾಡಿ, ಉಬರಡ್ಕ, ಕಲ್ಮಕಾರು, ಅರಂತೋಡು, ಆಲೆಟ್ಟಿ, ಸಂಪಾಜೆ, ತೊಡಿಕಾನ

ಕರಾವಳಿ ಮತ್ತು ಮಲೆನಾಡು ಭಾಗದ ಜನತೆ ಯಲ್ಲಿ ಕಸ್ತೂರಿ ರಂಗನ್‌ ಜಾರಿಯಾದಲ್ಲಿ ಆಡಳಿತಾತ್ಮಕವಾಗಿ ಕಿರುಕುಳ ಆಗುತ್ತದೆ ಎನ್ನುವ ಆತಂಕವಿದೆ. ಸರಕಾರದ ಮಟ್ಟದಲ್ಲಿ ಸಾಧಕ ಬಾಧಕ ಕುರಿತು ನಾಲ್ಕೈದು ಬಾರಿ ಚರ್ಚೆ ಕೂಡ ನಡೆದಿದೆ. ವರದಿ ಜಾರಿಯ ಅನಿವಾರ್ಯ ಇದ್ದರೂ ಸಾಧ್ಯವಾದಷ್ಟು ಜನರಿಗೆ ತೊಂದರೆಯಾಗದಂತೆ ಅನುಷ್ಠಾನಕ್ಕೆ ಸರಕಾರ ಚಿಂತನೆ ಮಾಡಿದೆ. ಮತ್ತೂ ಅನಿವಾರ್ಯ ಎದುರಾದರೆ ವರದಿಯನ್ನು ಇಟ್ಟುಕೊಂಡು ಜನರ ರಕ್ಷಣೆಗೆ ಸರಕಾರ ನಿಲ್ಲಲಿದೆ.
– ಕೋಟ ಶ್ರೀನಿವಾಸ ಪೂಜಾರಿ ಉಸ್ತುವಾರಿ ಸಚಿವರು, ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next