Advertisement
ಕಾಸರಗೋಡು: ಐಕ್ಯರಂಗಕ್ಕೆ 21 ಸ್ಥಾನಕಾಸರಗೋಡು ನಗರಸಭೆಯ 38 ವಾರ್ಡ್‌ಗಳ ಪೈಕಿ 21 ಸ್ಥಾನಗಳನ್ನು ಐಕ್ಯರಂಗ ಪಡೆದುಕೊಂಡು ಅಧಿಕಾರಕ್ಕೇರಿದೆ. ಉಳಿದ 14 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂ ಡಿದೆ. ಸಿಪಿಎಂ-1, ಮುಸ್ಲಿಂ ಲೀಗ್ ಬಂಡಾಯ-1, ಸ್ವತಂತ್ರ-1 ಸ್ಥಾನಗಳನ್ನು ಪಡೆದುಕೊಂಡಿವೆ. 21 ಸೀಟುಗಳನ್ನು ಗೆದ್ದು ಐಕ್ಯರಂಗ ಅಧಿಕಾರ ಉಳಿಸಿಕೊಂಡಿದೆ. ಬಿಜೆಪಿ 14 ಸೀಟುಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ಕಾಸರಗೋಡು, ಡಿ. 16: ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಕಾನೂನು-ಶಾಂತಿ ಪಾಲನೆ ಖಚಿತಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ 10 ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಆದೇಶ ಪ್ರಕಟಿಸಿದ್ದಾರೆ. ಡಿ. 17 ರಂದು ರಾತ್ರಿ 12 ಗಂಟೆ ವರೆಗೆ ಸಿ.ಆರ್. ಪಿ.ಸಿ. 144 ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಪೂರ್ಣರೂಪದಲ್ಲಿ, ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬಳೆ ಪೇಟೆ, ಬಂದ್ಯೋಡು, ಅಡ್ಕ, ಸೀತಾಂಗೋಳಿ, ಉಳುವಾರು, ಮೊಗ್ರಾಲ್, ಬಂಬ್ರಾಣ, ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ, ಮಂಜೇಶ್ವರ, ಹೊಸಂಗಡಿ, ಕುಂಜತ್ತೂರು, ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೋವಿಕ್ಕಾನ, ಇರಿಯಣ್ಣಿ, ಅಡೂರು, ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಕಾಂಞಂಗಾಡ್ ನಗರಸಭೆ, ಅಜಾನೂರು ಗ್ರಾ.ಪಂ., ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪುಲ್ಲೂರು-ಪೆರಿಯ ಗ್ರಾ.ಪಂ., ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನ, ಚೆರುವತ್ತೂರು, ಪಿಲಿಕೋಡ್ ಗ್ರಾ.ಪಂ., ನೀಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ನೀಲೇಶ್ವರ ನಗರಸಭೆ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಂಡಿದೆ.