Advertisement
ಗುರುವಾರ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಪ್ರಣೀತ್ ಡೆನ್ಮಾರ್ಕ್‌ನ ಆ್ಯಂಡ್ರೆಸ್ ಆ್ಯಂಟೆನ್ಸೆನ್ ವಿರುದ್ಧ 22-20, 20-22, 16-21 ಅಂತರದಿಂದ ಸೋಲು ಕಾಣಬೇಕಾಯಿತು. ಇವರಿಬ್ಬರ ಕಾದಾಟ ಒಂದು ಗಂಟೆ, 24 ನಿಮಿಷಗಳ ಕಾಲ ಸಾಗಿತು.
ದ್ವಿತೀಯ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಪಾರುಪಳ್ಳಿ ಕಶ್ಯಪ್ ಡೆನ್ಮಾರ್ಕ್‌ನ ವಿಕ್ಟರ್ ಅಲೆಕ್ಸನ್ ವಿರುದ್ಧ 13-21, 19-21 ನೇರ ಗೇಮ್‌ಗಳ ಸೋಲನುಭವಿಸಿದರು. 43 ನಿಮಿಷಗಳ ವರೆಗೆ ಈ ಹೋರಾಟ ಸಾಗಿತು. ಈ ಸೋಲಿನೊಂದಿಗೆ ಕಶ್ಯಪ್ ಒಂದೇ ವರ್ಷದಲ್ಲಿ ಅಲೆಕ್ಸನ್ ವಿರುದ್ಧ 2ನೇ ಬಾರಿ ಮುಗ್ಗರಿಸಿದಂತಾಯಿತು. ಮಿಕ್ಸೆಡ್ ಡಬಲ್ಸ್‌ನಲ್ಲಿ ಶ್ರೆಯಾಂಕ ರಹಿತ ಸಾತ್ವಿಕ್‌ರಾಜ್ ರಾಂಕಿ ರೆಡ್ಡಿ-ಅಶ್ವಿನಿ ಪೊನ್ನಪ್ಪ ಜೋಡಿ ಕೊರಿಯಾದ 5ನೇ ಶ್ರೆಯಾಂಕದ ಸಿಯೋ ಸೆಯಾಂಗ್ ಜೇ- ಚೇ ಯುಜುಂಗ್ ವಿರುದ್ಧ 21-23, 16-21 ಅಂತರದಿಂದ ಪರಾಭವಗೊಂಡಿತು.
Related Articles
ಸಾತ್ವಿಕ್‌ರಾಜ್ ರಾಂಕಿ ರೆಡ್ಡಿ-ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್ ವಿಭಾಗದಲ್ಲಿ 6ನೇ ಶ್ರೇಯಾಂಕಿತ ಜಪಾನಿನ ಹಿರೋಯುಕಿ ಎಂಡೊ-ಯುಟ ವಟಾನಬೆ ವಿರುದ್ಧ 21-18, 21-23, 21-11 ಅಂತರದ ಜಯ ಸಾಧಿಸಿ “ಚೀನ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಕಳೆದ ತಿಂಗಳು ನಡೆದ ಫ್ರೆಂಚ್ ಓಪನ್‌ನಲ್ಲಿ ಬೆಳ್ಳಿ ಪದಕ ವಿಜೇತ ಈ ಜೋಡಿ ಪ್ರಸಕ್ತ ಕೂಟದಲ್ಲಿ ಭಾರತದ ಭರವಸೆಯಾಗಿ ಉಳಿದಿದೆ.
Advertisement
ಶುಕ್ರವಾರ ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಚೀನದ ಲೀ ಜುನ್ ಹುಯಿ-ಲಿಯು ಯು ಚೆನ್ ವಿರುದ್ಧ ಸೆಣಸಲಿದ್ದಾರೆ.