Advertisement

WPL Auction: ಕಳೆದ ವರ್ಷ ಅನ್ ಸೋಲ್ಡ್, ಈ ಬಾರಿ 2 ಕೋಟಿ ರೂ ಪಡೆದ ದಾಖಲೆ ಬರೆದ ಕಶ್ವಿ

05:41 PM Dec 09, 2023 | Team Udayavani |

ಮುಂಬೈ: ವನಿತಾ ಪ್ರೀಮಿಯರ್ ಲೀಗ್ ನ ಮಿನಿ ಹರಾಜು ಕಾರ್ಯವು ಮುಂಬೈನಲ್ಲಿಂದು ನಡೆಯುತ್ತಿದೆ. ಸತರ್ ಲ್ಯಾಂಡ್, ಶಬ್ನಿಮ್ ಇಸ್ಮಾಯಿಲ್, ವೃಂದಾ ದಿನೇಶ್ ಮುಂತಾದವರು ಕೋಟಿ ಹಣ ಪಡೆದು ಮಿಂಚಿದರು. ಐದು ಡಬ್ಲ್ಯೂಪಿಎಲ್ ತಂಡಗಳು ತಮಗೆ ಬೇಕಾದ ಆಟಗಾರರನ್ನು ಪಡೆದಿದ್ದಾರೆ.

Advertisement

ಈ ವೇಳೆ ಎಲ್ಲರ ಅಚ್ಚರಿಗೆ ಕಾರಣವಾಗಿದ್ದು 20 ವರ್ಷ ಹರೆಯದ ಆಟಗಾರ್ತಿ ಕಶ್ವಿ ಗೌತಮ್. ಆಲ್ ರೌಂಡರ್ ಆಗಿರುವ ಕಶ್ವಿ ಈ ಬಾರಿಯ ಡಬ್ಲ್ಯೂಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಹಣ ಪಡೆದ ದಾಖಲೆ ಬರೆದಿದ್ದಾರೆ.

ಗುಜರಾತ್ ಜೈಂಟ್ಸ್ ತಂಡವು ಕಶ್ವಿ ಗೌತಮ್ ಅವರನ್ನು ಬರೋಬ್ಬರಿ ಎರಡು ಕೋಟಿ ರೂ ನೀಡಿ ಹರಾಜಿನಲ್ಲಿ ಖರೀದಿಸಿದೆ. ಕಶ್ವಿ ಗೌತಮ್ ಅವರು ಅತಿ ಹೆಚ್ಚು ಹಣ ಪಡೆದ ಅನ್ ಕ್ಯಾಪ್ಡ್ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.

ಫಾಸ್ಟ್ ಬೌಲಿಂಗ್ ಆಲ್ ರೌಂಡರ್ ಆಗಿರುವ ಕಶ್ವಿ ಗೌತಮ್ ಅವರು ವನಿತಾ ಕ್ರಿಕೆಟ್ ನಲ್ಲಿ ದಾಖಲೆ ಮಾಡಿದ ಆಟಗಾರ್ತಿ. ಚಂಡೀಗಢ ತಂಡದ ಪರವಾಗಿ ವನಿತಾ ಅಂಡರ್ 19 ಕೂಟದಲ್ಲಿ ಕಶ್ವಿ ಅರುಣಾಚಲ ಪ್ರದೇಶ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು.

ಇದನ್ನೂ ಓದಿ:WPL Auction; ಬರೋಬ್ಬರಿ 1.3 ಕೋಟಿ ರೂ ಬಾಚಿದ ಕರ್ನಾಟಕದ 21 ವರ್ಷದ ವೃಂದಾ ದಿನೇಶ್

Advertisement

ಕೇವಲ 20 ವರ್ಷ ವಯಸ್ಸಿನವರಾಗಿದ್ದರೂ, ಅವರು ಮಹಿಳಾ ಸೀನಿಯರ್ ಟಿ20 ಟ್ರೋಫಿ 2023 ರಲ್ಲಿ ಪ್ರತಿ ಓವರ್‌ಗೆ 4.14 ರನ್‌ಗಳ ಎಕಾನಮಿ ದರದಲ್ಲಿ ಏಳು ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದರು. ಅಲ್ಲದೆ ಅವರು ಹಾಂಗ್ ಕಾಂಗ್ ಎಸಿಸಿ ಎಮರ್ಜಿಂಗ್ ಟೂರ್ನಮೆಂಟ್‌ ನಲ್ಲಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದರು.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಎ ಸರಣಿಯಲ್ಲಿ ಕಶ್ವಿ ಗೌತಮ್ ಭಾಗವಹಿಸಿದ್ದರು. ಅವರು ಭಾರತ ಎ ಪರ ಎರಡು ಪಂದ್ಯಗಳನ್ನು ಆಡಿ ಮೂರು ವಿಕೆಟ್ ಪಡೆದರು.

ಕಳೆದ ವರ್ಷದ ಡಬ್ಲ್ಯೂಪಿಎಲ್ ಹರಾಜಿನಲ್ಲಿ ಕಶ್ವಿ ಗೌತಮ್ ಅವರು ಅನ್ ಸೋಲ್ಡ್ ಆಗಿದ್ದರು. ಆದರೆ ಈ ಬಾರಿಯ ಹರಾಜಿನಲ್ಲಿ ಅತೀ ಹೆಚ್ಚು ಹಣ ಪಡೆದ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next