Advertisement

ಭಾರತೀಯ ಸೇನೆಯ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕ್ ನಲ್ಲಿ ತರಬೇತಿ ನೀಡಲಾಗಿತ್ತು:ಮುಷರಫ್

09:49 AM Nov 15, 2019 | Team Udayavani |

ಇಸ್ಲಾಮಾಬಾದ್ : ಭಾರತೀಯ ಸೇನೆಯ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಲ್ಲಿ ತರಭೇತಿ ನೀಡಲಾಗಿದೆಯೆಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ನಿವೃತ್ತ ಜನರಲ್ ಪರ್ವೇಜ್ ಮುಷರಫ್ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲದೇ ಅವರಿಗೆ ‘ವೀರರು’ ಎಂದು ಹೆಸರನ್ನಿಟ್ಟು . ಒಸಾಮಾ ಬಿನ್ ಲಾಡೆನ್ ಮತ್ತು ಜಲಾಲುದ್ದೀನ್ ಹಕ್ಕಾನಿಯಂತಹ ಭಯೋತ್ಪಾದಕರು ಈ “ಪಾಕಿಸ್ತಾನಿ ವೀರರನ್ನು ತಮ್ಮ ಕಾರ್ಯಾಚರಣೆಗೆ ಬಳಸಿಕೊಂಡಿದ್ದರು ಎಂಬ ಗಂಭೀರ ವಿಷಯವನ್ನು  ಎಂದು ಮುಷರಫ್ ಬಹಿರಂಗಪಡಿಸಿದ್ದಾರೆ.

Advertisement

ಪಾಕಿಸ್ಥಾನ ರಾಜಕಾರಣಿ ಫರ್ಹತುಲ್ಲಾ ಬಾಬರ್ ಬುಧವಾರ ಮುಷರಫ್ ಕುರಿತ ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು ಭಾರೀ ವೈರಲ್ ಆಗಿದೆ. 1979 ರಲ್ಲಿ ನಾವು ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಮತ್ತು ಸೋವಿಯತ್ ಅನ್ನು ದೇಶದಿಂದ ಹೊರಗೆ ತಳ್ಳಲು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಉಗ್ರಗಾಮಿತ್ವವನ್ನು ಪರಿಚಯಿಸಿದ್ದೇವೆ. ಪ್ರಪಂಚದಾದ್ಯಂತ ಮುಜಾಹಿದ್ದೀನ್ ಸಂಘಟನೆಯನ್ನು ಪರಿಚಯಿಸಿ, ಅವರಿಗೆ ತರಬೇತಿ ನೀಡಿದ್ದೇವೆ, ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದೇವೆ. ಅವರು ನಮ್ಮ ವೀರರಾಗಿದ್ದರು. ಹಕ್ಕಾನಿ ನಮ್ಮ ನಾಯಕ. ಒಸಾಮಾ ಬಿನ್ ಲಾಡೆನ್ ನಮ್ಮ ನಾಯಕ. ಆಗ ಪರಿಸರ ವಿಭಿನ್ನವಾಗಿತ್ತು ಆದರೆ ಈಗ ಅದು ವಿಭಿನ್ನವಾಗಿದೆ. ಹೀರೋಗಳು ಖಳನಾಯಕರತ್ತ ತಿರುಗಿದ್ದಾರೆ ಎಂದಿದ್ದಾರೆ.

ಪಾಕಿಸ್ತಾನಕ್ಕೆ ಬಂದ ಕಾಶ್ಮೀರಿಗಳನ್ನು ಇಲ್ಲಿ ಹೀರೋ ಆಗಿ ಸ್ವಾಗತಿಸಿದ್ದೇವೆ. ಅವರಿಗೆ ಸೂಕ್ತ ತರಬೇತಿ ನೀಡಿ, ಬೆಂಬಲಿಸುತ್ತಿದ್ದೆವು. ಆಗ ನಾವು ಅವರನ್ನು ಭಾರತೀಯ ಸೇನೆಯೊಂದಿಗೆ ಹೋರಾಡುವ ಮುಜಾಹಿದ್ದೀನ್ ಎಂದು ಪರಿಗಣಿಸಿದ್ದೇವು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next