Advertisement

Kashmiri ಯುವತಿಯ ಭಾಷಣ ವೈರಲ್‌; ನಾನು ಮಲಾಲಾ ಅಲ್ಲ: ಕಾಶ್ಮೀರಿ ಹೋರಾಟಗಾರ್ತಿ

12:37 AM Feb 24, 2024 | Team Udayavani |

ಹೊಸದಿಲ್ಲಿ: “ನಾನು ಮಲಾಲಾ ಯೂಸೂಫ್ಝಾಯ್‌ ಅಲ್ಲ. ನಾನು ಭಾರತದಲ್ಲಿ ಸುರಕ್ಷಿತವಾಗಿದ್ದೇನೆ. ನನ್ನ ತವರು ದೇಶವನ್ನು ಎಂದೂ ತೊರೆಯಬೇಕಾಗಿಲ್ಲ’ ಎಂದು ಬ್ರಿಟನ್‌ ಸಂಸತ್‌ ಭವನದಲ್ಲಿ ಕಾಶ್ಮೀರಿ ಹೋರಾಟಗಾರ್ತಿ ಯಾನಾ ಮಿರ್‌ ಮಾಡಿರುವ ಭಾಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

ಬ್ರಿಟನ್‌ನ ಜಮ್ಮು ಮತ್ತು ಕಾಶ್ಮೀರ್‌ ಅಧ್ಯಯನ ಕೇಂದ್ರ ಆಯೋಜಿಸಿದ್ದ “ಸಂಕಲ್ಪ ದಿವಸ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನು ನನ್ನ ದೇಶ ಭಾರತದಲ್ಲಿ ಸ್ವತಂತ್ರವಾಗಿದ್ದೇನೆ. ಭಾರತದ ಭಾಗವಾಗಿರುವ ನನ್ನ ತವರು ನೆಲ ಕಾಶ್ಮೀರದಲ್ಲಿ ಸುರಕ್ಷಿತವಾಗಿದ್ದೇನೆ. ನನ್ನ ದೇಶ, ಅಭಿವೃದ್ಧಿ ಹೊಂದುತ್ತಿರುವ ನನ್ನ ಕಾಶ್ಮೀರದ ಬಗ್ಗೆ ಅಪಖ್ಯಾತಿ ಹರಡುತ್ತಿರುವ ಮಲಾಲಾರನ್ನು ನಾನು ವಿರೋಧಿಸುತ್ತೇನೆ. ಸಾಮಾಜಿಕ ಜಾಲತಾಣಗಳ “ಟೂಲ್‌ಕಿಟ್‌ ಸದಸ್ಯರನ್ನು’ ವಿರೋಧಿಸುತ್ತೇನೆ. ಕಾಶ್ಮೀರಕ್ಕೆ ಎಂದೂ ಭೇಟಿ ನೀಡದೇ, ಎಲ್ಲೋ ಕುಳಿತು ದಬ್ಟಾಳಿಕೆ ಕಥೆಗಳನ್ನು ಸೃಷ್ಟಿಸುತ್ತಿರುವ ವಿದೇಶಿ ಮಾಧ್ಯಮ ಗಳನ್ನು  ನಾನು ಖಂಡಿಸುತ್ತೇನೆ’ ಎಂದು ಯಾನಾ ಮಿರ್‌ ಪ್ರತಿಪಾದಿಸಿದ್ದಾರೆ. ಯಾನಾ ಅವರು ಕಾಶ್ಮೀರದ ವ್ಲಾಗರ್‌ ಮತ್ತು ಪತ್ರಕರ್ತೆಯೂ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next