ನವದೆಹಲಿ: ಕಾಶ್ಮೀರದ ವಿಚಾರದಲ್ಲಿ ಕಾಶ್ಮೀರ ಇನ್ನೂ ಯಾಕೆ ಮೋಸದ ಕಣ್ಣೀರು ಸುರಿಸುತ್ತಿದೆ. ಕಾಶ್ಮೀರ ಯಾವತ್ತೂ ಪಾಕಿಸ್ತಾನದ ಭಾಗವೇ ಆಗಿರಲಿಲ್ಲ ಎಂದು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಗುರುವಾರ ಚಾಟಿ ಬೀಸಿದ್ದಾರೆ.
ಗುರುವಾರ 26ನೇ ಕಿಸಾನ್- ಜವಾನ್ ವಿಜ್ಞಾನ್ ಮೇಳದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಂಗ್, ನಾನು ಪಾಕಿಸ್ತಾನಕ್ಕೆ ಕೇಳಬಯಸುತ್ತೇನೆ…ಕಾಶ್ಮೀರದ ವಿಚಾರದಲ್ಲಿ ಯಾಕೆ ಯಾವಾಗಲೂ ಬೊಬ್ಬೆ ಹೊಡೆಯುತ್ತಿದ್ದೀರಿ..ಕಾಶ್ಮೀರ ಯಾವತ್ತೂ ನಿಮ್ಮ ಭಾಗವಾಗಿರಲೇ ಇಲ್ಲ ಎಂದು ತಿರುಗೇಟು ನೀಡಿದರು.
ನಾನು ಪಾಕಿಸ್ತಾನದ ನಿಲುವನ್ನು ಗೌರವಿಸುತ್ತೇನೆ. ಆದರೆ ಕಾಶ್ಮೀರದ ವಿಚಾರದಲ್ಲಿ ಅದಕ್ಕೆ ಯಾವುದೇ ಅಧಿಕಾರ ಇಲ್ಲ. ಒಂದು ಬಾರಿ ಪಾಕಿಸ್ತಾನ ನಿರ್ಮಾಣವಾದ ಮೇಲೆ, ನಾವು ಅದರ ನಿಲುವನ್ನು ಗೌರವಿಸಬೇಕು. ಆದರೆ ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನಕ್ಕೆ ಯಾವುದೇ ಕಾನೂನು ಬದ್ಧ ಅಧಿಕಾರ ಇಲ್ಲ ಎಂದು ಸಿಂಗ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.