Advertisement

ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಬಿಜೆಪಿ ಮುಖಂಡನ ವಾಹನಕ್ಕೆ ಬೆಂಕಿ

08:28 AM Nov 02, 2019 | Team Udayavani |

ಶ್ರೀನಗರ: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದ ಕುಲ್ಗಾಂವ್ ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು ಬೋನಿಗಮ್ ಗ್ರಾಮದಲ್ಲಿ ಎರಡು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

Advertisement

ಬೆಂಕಿಗೆ ಆಹುತಿಯಾದ ಒಂದು ವಾಹನ ಕುಲ್ಗಾಂವ್ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅದಿಲ್ ಅಹಮದ್ ಗನಾಯ್ ಅವರಿಗೆ ಸೇರಿದೆ ಎಂದು ವರದಿಯಾಗಿದೆ.  ಮನೆಯ ಹೊರಭಾಗ ಪಾರ್ಕಿಂಗ್ ಮಾಡಿದ್ದ ವೇಳೆ ಇಂದು ಮುಂಜಾನೆ 3 ಗಂಟೆಯ ವೇಳೆಗೆ ಉಗ್ರರು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಅವರು ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ.

ಇತ್ತೀಚಿಗಷ್ಟೇ ಕಾಶ್ಮೀರೇತರ ಐವರು ಕಾರ್ಮಿಕರನ್ನು ಕುಲ್ಗಾಂವ್ ನಲ್ಲಿ ಭಯೋತ್ಪಾದರು ಭೀಕರವಾಗಿ ಹತ್ಯೆ ಮಾಡಿದ್ದರು. ಅದರ ಜೊತೆಗೆ ಟ್ರಕ್ ಚಾಲಕರನ್ನು ಕೂಡ ಸರಣಿಯಾಗಿ ಗುಂಡಿಕ್ಕಿ ಕೊಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next