Advertisement
ಐಸಿಸ್ ಉಗ್ರ ಸಂಘಟನೆಯು ಇರಾಕ್‌ನಲ್ಲಿ ಸೇನೆಯ ಮೇಲೆ ದಾಳಿ ನಡೆಸಲು ಬಾಂಬ್ ಮತ್ತು ಇತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಡ್ರೋನ್ ಮೂಲಕ ಕಳುಹಿಸಿ ದಾಳಿ ಸಂಘಟಿಸುತ್ತಿತ್ತು. ಅದೇ ಮಾದರಿಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಸರಿಸಲು ಪಾಕ್ ಮುಂದಾಗಿದೆ. ಈ ನಿಟ್ಟಿನಲ್ಲಿ ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐಯು ಉಗ್ರರಿಗೆ ತರಬೇತಿ ನೀಡಲಾರಂಭಿಸಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಐಎಸ್‌ಐಯು ಇಂಥ ಕುಕೃತ್ಯ ನಡೆಸಲು ಉಗ್ರ ಸಂಘಟನೆ ಲಷ್ಕರ್-ಎ-ತಯ್ಯ ಬಾ, ಜೈಶ್-ಎ-ಮೊಹಮ್ಮದ್ ಜತೆಗೆ ಸಭೆಯನ್ನೂ ನಡೆಸಿದೆ. ಪಂಜಾಬ್ ಪ್ರಾಂತ್ಯದಲ್ಲಿ ಎಪ್ರಿಲ್‌ನಲ್ಲಿ ಈ ಸಭೆ ನಡೆದಿತ್ತು. ಇದಾದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯಲ್ಲಿ ಮತ್ತೂಂದು ಸಭೆಯೂ ನಡೆದಿತ್ತು. ನಾಲ್ವರು ಉಗ್ರರ ಹತ್ಯೆ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರನ್ನು ಕೊಲ್ಲಲಾಗಿದೆ. ಇದ ರೊಂದಿಗೆ ಎರಡು ದಿನಗಳ ಅವಧಿಯಲ್ಲಿ ಅಲ್ಲಿ ಒಟ್ಟು ಐವರು ಉಗ್ರರನ್ನು ಕೊಂದಂತಾಗಿದೆ.
Related Articles
– 5 ಕೆಜಿವರೆಗಿನ ಸ್ಫೋಟಕ ಒಯ್ಯಬಲ್ಲ ಕ್ವಾಡೋ ಕಾಪ್ಟರ್ ಡ್ರೋನ್‌ಗಳ ಬಳಕೆ. ಇವುಗಳಿಗೆ ಮೂರು ಕಿ.ಮೀ. ದೂರ ಹಾರಾಡಬಲ್ಲ ಸಾಮರ್ಥ್ಯ ಇರುತ್ತದೆ.
Advertisement
– ಐಸಿಸ್ ಇಂಥ ಯೋಜನೆಯಲ್ಲಿ ಯಶ ಪಡೆದಿರುವುದರಿಂದ ಅಮೆರಿಕದ ಡ್ರೋನ್ ಉತ್ಪಾದಕರು ಇದಕ್ಕೆ ತಿರುಗೇಟು ನೀಡುವ ವ್ಯವಸ್ಥೆ ಕಂಡುಕೊಂಡಿದ್ದಾರೆ.
– ಐಸಿಸ್‌ನ ಯಶಸ್ಸಿನಿಂದ ಇತರ ಸಂಘಟನೆಗಳೂ ಇದರತ್ತ ಆಸಕ್ತಿ ವಹಿಸಿವೆ.
– ಪಾಕ್ ಈಗ ಇದೇ ಕಾರ್ಯತಂತ್ರ ಅನುಸರಿಸಲು ಮುಂದಾಗಿದೆ. ಎಲ್‌ಒಸಿಯಲ್ಲಿ ಬಿಎಸ್‌ಎಫ್ ಮತ್ತು ಸೇನೆ ಈ ಹಿಂದೆ ಹಲವು ಬಾರಿ ಪಾಕ್ ಸೇನೆಯು ಡ್ರೋನ್ ಮೂಲಕ ಕಳುಹಿಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.